Site icon Vistara News

Dharma Dangal : ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ದೇವಳದ ಜಾತ್ರೆ ವಿಷಯದಲ್ಲಿ ಶುರುವಾಯಿತು ವ್ಯಾಪಾರ ದಂಗಲ್

kigga temple

#image_title

ಚಿಕ್ಕಮಗಳೂರು: ರಾಜ್ಯದ ಹಲವು ಕಡೆಗಳಲ್ಲಿ ದೇವಸ್ಥಾನಗಳ ಜಾತ್ರೆ ವೇಳೆ ಅನ್ಯ ಮತೀಯರಿಗೆ ವ್ಯಾಪಾರ ಅವಕಾಶ ನೀಡಬಾರದು ಎಂಬ ಕೂಗು ಜೋರಾಗುತ್ತಿದೆ. ಕರಾವಳಿಯಿಂದ ಆರಂಭಗೊಂಡ ಧರ್ಮ ದಂಗಲ್‌ (Dharma Dangal) ಈಗ ಮಲೆನಾಡು, ಬಯಲುಸೀಮೆಯ ಹಲವು ದೇವಸ್ಥಾನಗಳನ್ನು ಆವರಿಸಿದೆ. ಹೊಸದಾಗಿ ಈಗ ಕಾಫಿನಾಡಿನಲ್ಲಿ ಧರ್ಮ ದಂಗಲ್‌ ಮುನ್ನೆಲೆಗೆ ಬಂದಿದೆ.

ಶೃಂಗೇರಿ ತಾಲೂಕಿನ ಪ್ರತಿಷ್ಠಿತ ಮತ್ತು ಕಾರಣಿಕದ ಕಿಗ್ಗಾ ಋಷ್ಯಶೃಂಗೇಶ್ವರ‌ ಸ್ವಾಮಿ (Kigga RishyaShringeshwara temple) ಜಾತ್ರೆಯಲ್ಲಿ ಅನ್ಯ ಧರ್ಮೀಯರು ವ್ಯಾಪಾರ ಮಾಡುವುದನ್ನು ನಿರ್ಬಂಧಿಸುವಂತೆ ಜಾಗೃತ ಹಿಂದೂ ಬಾಂಧವರ ಹೆಸರಿನಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿರುವ ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ ತಿಂಗಳ 19ರಂದು ನಡೆಯುವ ಜಾತ್ರಾ ಮಹೋತ್ಸವ ನಡೆಯಲಿದೆ.

ತಹಸೀಲ್ದಾರ್‌ಗೆ ಮನವಿ

ಜಿಹಾದ್‌ ವಿವಾದ ಸಂದರ್ಭದಲ್ಲಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಮುಸ್ಲಿಮರು ಅಂಗಡಿಗಳನ್ನು ಬಂದ್ ಮಾಡಿ ಈ ಮಣ್ಣ ಕಾನೂನಿಗೆ ಅಗೌರವ ತೋರಿದ್ದರು ಎಂಬ ವಿಷಯವನ್ನು ಮನವಿಯಲ್ಲಿ ಉಲ್ಲೇಖಿಸಿರುವ ಭಕ್ತರು, ವ್ಯಾಪಾರದ ಲಾಭವನ್ನು ದೇಶ ವಿರೋಧಿ ಚಟುವಟಿಕೆಗೆ ಬಳಸುತ್ತಾರೆಂಬ ಸಂದೇಹ ವ್ಯಕ್ತಪಡಿಸಿದ್ದಾರೆ.

ಅವರಿಗೆ ಜಾತ್ರೆಗಳ ಸಂದರ್ಭದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿದರೆ ಅವರು ದೇವಸ್ಥಾನ ಮತ್ತು ಗ್ರಾಮದ ಸೂಕ್ಷ್ಮ ವಿಚಾರಗಳನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಜಾಗೃತ ಹಿಂದೂ ಭಾಂದವರ ಹೆಸರಿನಲ್ಲಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಗಿದೆ.

ಋಷ್ಯಶೃಂಗ ದೇವಸ್ಥಾನ ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಹಿಂದು ಸಂಘಟನೆ ಮುಖಂಡರು ಶೃಂಗೇರಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದು ಯಾವುದೇ ಕಾರಣಕ್ಕೂ ಅನ್ಯ ಧರ್ಮೀಯರಿಗೆ ಅವಕಾಶ ಬೇಡ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಿಗ್ಗ ಋಷ್ಯಶೃಂಗೇಶ್ವರ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದು, ಇದು ಅವರ ನೆಚ್ಚಿನ ದೈವ. ಅತಿವೃಷ್ಟಿ-ಅನಾವೃಷ್ಠಿ ಸಂದರ್ಭದಲ್ಲಿ ಸರ್ಕಾರವೇ ಇಲ್ಲಿ ಪೂಜೆ ಮಾಡಿಸುತ್ತದೆ.

ಇದನ್ನೂ ಓದಿ : Dharma Dangal :‌ ಕೂದುವಳ್ಳಿ ದರ್ಗಾ ಹಿಂದೆ ಚಂದ್ರಮೌಳೀಶ್ವರ ದೇವಸ್ಥಾನವಾಗಿತ್ತೇ? ; ಹಿಂದು ಸಂಘಟನೆಗಳ ವಾದ

Exit mobile version