Site icon Vistara News

ಶ್ರವಣದೋಷವಿದ್ದರೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತರುತತಿರುವ ಧಾರವಾಡದ ʼನಿಧಿʼ

dharwad nidhi

ಧಾರವಾಡ : ಶ್ರವಣದೋಷವಿದ್ದರೂ ಈ ಯುವತಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಧಾರವಾಡದ ದಾನೇಶ್ವರಿನಗರದ ನಿಧಿ ಎಂಬ ಯುವತಿಗೆ ಹುಟ್ಟಿನಿಂದಲೂ ಶ್ರವಣದೋಷ ಸಮಸ್ಯೆಯಿತ್ತು. ಇದರಿಂದ ಆಕೆಯನ್ನ ಹಲವರು ನಿಂದಿಸಿದ್ದರು. ಅಂತಹವರಿಗೆ ತಕ್ಕ ಉತ್ತರ ನೀಡಬೇಕು ಎಂದು ಆಕೆಯ ಪೋಷಕರು ತನ್ನ ಮಗಳು ಏನಾದರೊಂದು ಸಾಧನೆ ಮಾಡಬೇಕೆಂದು ಅಥ್ಲೆಟಿಕ್‌ ತರಬೇತಿ ಕೊಡಿಸಿದ್ದರು. ಈಗ ಅಥ್ಲೆಟಿಕ್‌ನಲ್ಲಿಯೇ ನಿಧಿ ಸಾಕಷ್ಟು ಸಾಧನೆ ಮಾಡಿ ಎಲ್ಲರೂ ಮೆಚ್ಚುವಂತೆ ಮಾಡಿದ್ದಾರೆ.

ಮೊದ ಮೊದಲು ೧೦೦ ಹಾಗೂ ೨೦೦ ಮೀಟರ್‌ ಓಟದಲ್ಲಿ ಪದಕ ತರುತ್ತಿದ್ದ ನಿಧಿ ನಂತರ ಜಾವಲಿನ್‌ ಥ್ರೊ ಕೂಡ ಕಲಿತು ಎಲ್ಲರನ್ನೂ ಮಿರಿಸುವಂತೆ ಸ್ಪರ್ಧೆ ನೀಡುತ್ತಿದ್ದರು. ಅಲ್ಲದೆ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಬೇಕು ಎಂಬ ಸಲುವಾಗಿ ನಿಧಿ ತಂದೆ ಟೆಕ್ವಾಂಡೋ ತರಬೇತಿ ನೀಡಿದ್ದರು.

ಇದನ್ನು ಓದಿ| ಹೈವೇ ನಿರ್ಮಾಣದಲ್ಲಿ ಅದ್ಭುತ ಸಾಧನೆ; ಗಿನ್ನಿಸ್ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಕಳೆದ ತಿಂಗಳಷ್ಟೇ ಬ್ರೆಜಿಲ್‌ನಲ್ಲಿ ಶ್ರವಣದೋಷ ಉಳ್ಳವರ ಒಲಂಪಿಕ್‌ನಲ್ಲಿ ನಿಧಿ ೬೭ ಕಿಲೋಮೀಟರ್‌ ವಿಭಾಗದಲ್ಲಿ ಭಾಗಿಯಾಗಿದ್ದಲ್ಲದೆ ಭಾರತದಿಂದ ಈ ವಿಭಾಗದಲ್ಲಿ ಭಾಗವಹಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಟರ್ಕಿ, ಮೆಕ್ಸಿಕೋ ಎರಡನೇ ಸ್ಥಾನ ಪಡೆದುಕೊಂಡಿದೆ. ಒಟ್ಟು 70 ರಾಷ್ಟ್ರ ಈ ಕ್ರೀಡೆಯಲ್ಲಿ ಭಾಗವಹಿಸಿದ್ದವು. ರಾಷ್ಟ್ರ ಮತ್ತು ಅಂತರಾಷ್ಟೀಯ ಮಟ್ಟದಲ್ಲಿ ನಿಧಿ ಭಾರತವನ್ನು ಪ್ರತಿನಿಧಿಸಿರುವುದಕ್ಕೆ ಪ್ರಧಾನಿ ಮೋದಿ ಕೂಡ ಶುಭಾಶಯ ತಿಳಿಸಿದ್ದಾರೆ.

ಇಷ್ಟೆಲ್ಲ ಸಾಧನೆ ಮಾಡಿದ ನಿಧಿಯ ಬಗ್ಗೆ ಆಕೆ ಓದಿದ ಸರ್ಕಾರಿ ಕಾಲೇಜು ಕೂಡ ಹೆಮ್ಮೆ ಪಟ್ಟಿದ್ದು, ನಿಧಿಗೆ ಸರ್ಕಾರ ಮತ್ತಷ್ಟು ಆರ್ಥಿಕ ನೆರವು ನೀಡಿದರೆ, ಆಕೆ ಉಚಿತ ಕೋಚಿಂಗ್‌ ಪಡೆದು ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾಳೆ ಎಂದು ನಿಧಿ ಓದಿದ ಕಾಲೇಜಿನ ಶಿಕ್ಷಕರು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ| ಮ್ಯಾರಥಾನ್‌ಗಾಗಿ ನೇಪಾಳಕ್ಕೆ ಹಾರಿದ ಹಾವೇರಿ ಪೋರ: ಮುಮ್ಮದ್‌ ಜೈದ್‌ ಸಾಧನೆ

Exit mobile version