ಧಾರವಾಡ: ಕಳೆದ 4 ದಿನಗಳಿಂದ ನಡೆಯುತ್ತಿದ್ದ ಧಾರವಾಡದ ಕೃಷಿ ಮೇಳಕ್ಕೆ ಮಂಗಳವಾರ ತೆರೆಬಿದ್ದಿದೆ. ಈ ವೇಳೆ ರೈತರಿಗೆ ಬೆಳೆ, ತಂತ್ರಜ್ಞಾನ, ಹವಾಮಾನ ಆಧಾರಿತ ಕೃಷಿ ಸೇರಿದಂತೆ ವೈಜ್ಞಾನಿಕ ಪದ್ಧತಿಯ ಅಳವಡಿಕೆ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ.
ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ರದ್ದಾಗಿದ್ದ ಧಾರವಾಡದ ಕೃಷಿ ಮೇಳವು ಈ ವರ್ಷ ಅದ್ಧೂರಿಯಾಗಿ ನಡೆಯಿತು. 4 ದಿನಗಳ ಈ ಮೇಳಕ್ಕೆ “ರೈತರ ಆದಾಯ ದ್ವಿಗುಣ” ಎನ್ನುವ ಘೋಷ ವಾಕ್ಯದೊಂದಿಗೆ ಚಾಲನೆ ನೀಡಲಾಗಿತ್ತು.
ಹೊಸ ಹೊಸ ಕೃಷಿ ತಳಿಗಳ ಪ್ರದರ್ಶನ, ನೀರಾವರಿ ಪದ್ಧತಿ, ಕೀಟನಾಶಕಗಳ ತಡೆಗಟ್ಟುವಿಕೆ, ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಈ ಬಾರಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಖರೀದಿಗೆ ರೈತರು ಉತ್ಸಾಹ ತೋರಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಯಂತ್ರೋಪಕರಣ ಮತ್ತು ಅವುಗಳ ತಂತ್ರಜ್ಞಾನಗಳ ಮಾಹಿತಿ ಪಡೆದುಕೊಂಡರು.
ಯಾವೆಲ್ಲ ಯಂತ್ರಗಳಿದ್ದವು?
ಕುಂಟಿ, ಕೂರಗಿ, ಸ್ಪಿಂಕ್ಲರ್, ರೂಟರ್, ಬಿತ್ತುವ ಮಷಿನ್, ಕಾಳುಗಳನ್ನು ಬೇರ್ಪಡಿಸುವ ಮಷಿನ್, ಜಮೀನಿನಲ್ಲಿ ಬೆಳೆಗಳನ್ನು ಬಿತ್ತುವ ಮಷಿನ್‌ಗಳು ರೈತರ ಗಮನಸೆಳೆದವು.
ಇದನ್ನೂ ಓದಿ | PET SHOW : ಕೃಷಿ ಮೇಳದಲ್ಲಿ ಶ್ವಾನಗಳದ್ದೇ ಹವಾ..|