Site icon Vistara News

Assault Case : ನಿಮ್ಮನ್ನ ಸುಮ್ನೆ ಬಿಡಲ್ಲ ಎಂದು ಹಿಂದೂ ರೈತನ ಥಳಿಸಿದ ಮುಸ್ಲಿಂ ವ್ಯಾಪಾರಸ್ಥರು!

Hindu farmer attacked by Muslim traders

ಧಾರವಾಡ: ತರಕಾರಿ ಮಾರಲು ಬಂದ ರೈತನ (farmer assaulted) ಮೇಲೆ ಅನ್ಯ ಧರ್ಮದ ವ್ಯಾಪಾರಸ್ಥರು ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದಾರೆ. ಧಾರವಾಡ ಹೊಸ ಎಪಿಎಂಸಿಯಲ್ಲಿ (Dharwad APMC) ಈ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಲೋಕುರ ಗ್ರಾಮದ ರೈತ ಈರಪ್ಪ ರುದ್ರಪ್ಪ ಉಡಿಕೇರಿ, ಹಲ್ಲೆಗೊಳಗಾದವರು.

ಈರಪ್ಪ ಪ್ರತಿನಿತ್ಯ ಎಪಿಎಂಸಿಗೆ ಬಂದು ತರಕಾರಿ ಮಾರಿ ಜೀವನ ನಡೆಸುತ್ತಿದ್ದರು. ಶನಿವಾರ ಎಂದಿನಂತೆ ತರಕಾರಿ ಮಾರಲು ಹೋದಾಗ ಐದಾರು ಮುಸ್ಲಿಂ ವ್ಯಾಪಾರಸ್ಥರು ಸುಖಾಸುಮ್ಮನೆ ಗಲಾಟೆ ಮಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಿಂದೂ ಜನಾಂಗದ ನಿಮ್ಮನ್ನು ಸುಮ್ನೆ ಬಿಡಲ್ಲ ಎಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ತೀವ್ರ ಹಲ್ಲೆಗೊಳಗಾಗಿರುವ ಈರಪ್ಪರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡ ಉಪನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರೈಡ್‌ ಕ್ಯಾನ್ಸಲ್‌ ಮಾಡಿ ಮಹಿಳೆ ಮೇಲೆ ಆಟೊ ಚಾಲಕನ ಅಮಾನುಷ ಹಲ್ಲೆ

ಬೆಂಗಳೂರು: ಮಹಿಳಾ ಪ್ರಯಾಣಿಕರ ಜತೆ ಆಟೋ ಚಾಲಕ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ನಗರದ ಬೆಳ್ಳಂದೂರಿನಲ್ಲಿ ನಡೆದಿತ್ತು. ಈ ಬಗ್ಗೆ ದೂರು ಪಡೆದ ಪೊಲೀಸರು ಆಟೋ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ವೈಟ್ ಫೀಲ್ಡ್ ಸಮೀಪದ ತೂಬರಹಳ್ಳಿಗೆ ತೆರಳಲು ಮಹಿಳೆ ಶನಿವಾರ ಆಟೋ ಬುಕ್ ಮಾಡಿದ್ದರು. ಬೆಳಗ್ಗೆ 8.30ಕ್ಕೆ ಆಟೋ ಸ್ಥಳಕ್ಕೆ ಬಂದ ನಂತರ ರೈಡ್‌ ಕ್ಯಾನ್ಸಲ್ ಆಗಿದೆ. ಹೀಗಾಗಿ ಚಾಲಕ ಸಿಟ್ಟಿಗೆದ್ದು ಮಹಿಳೆ ಜತೆ ಗಲಾಟೆ ಮಾಡಿ ರಸ್ತೆಯಲ್ಲಿ ಎಳೆದಾಡಿ ಹಲ್ಲೆ ನಡೆಸಿದ್ದಾನೆ.

ಆಟೋ ಚಾಲಕನ ದುಂಡಾವರ್ತನೆ ತೋರಿದ್ದರಿಂದ ಮಹಿಳೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆಟೋ ಚಾಲಕ ಅಲ್ಲಿದ್ದ ಪರಾರಿಯಾಗಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಿಸದೇ ಮಹಿಳೆ ಊರಿಗೆ ತೆರಳಿದ್ದಾರೆ.

ಮಹಿಳೆಯ ಸ್ನೇಹಿತನಿಂದ ಪೊಲೀಸರಿಗೆ ದೂರು

ಮಹಿಳೆ ಮೇಲೆ ಆಟೋ ಚಾಲಕ ಹಲ್ಲೆ ನಡೆಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿರುವ ಮಹಿಳೆಯ ಸ್ನೇಹಿತ ರಾಜೇಶ್‌ ಪ್ರಧಾನ್‌ ಅವರು, ರ‍್ಯಾಪಿಡೋ ಆಟೋ ರೈಡ್‌ ಸುರಕ್ಷಿತವೇ? ಇದು ನ್ಯಾಯವೇ? ಹಲ್ಲೆಗೊಳಗಾದ ಮಹಿಳೆ ನಮ್ಮ ಸ್ನೇಹಿತರಾಗಿದ್ದು, ನಾವು ಅಸಹಾಯಕರಾಗಿದ್ದೇವೆ. ಆಕೆ ಟ್ರೈನ್‌ಗೆ ಹೋಗಬೇಕಿದ್ದರಿಂದ ದೂರು ದಾಖಲಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈಟ್‌ಫೀಲ್ಡ್‌ ಡಿಸಿಪಿ, ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version