Site icon Vistara News

Jayatheerthacharya | ವೇದಾಂತ ಶಾಸ್ತ್ರಿ ಡಾ. ಪಂ. ಮಳಗಿ ಜಯತೀರ್ಥಾಚಾರ್ಯ ನಿಧನ

Death News

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಸಂಸ್ಕೃತ ವಿಭಾಗದ ನಿವೃತ್ತ ಪ್ರಾಧ್ಯಾಪಕ, ವೇದಾಂತ ಶಾಸ್ತ್ರಿ, ಪಂಡಿತರತ್ನಂ ಪ್ರಶಸ್ತಿ ಪುರಸ್ಕೃತ ಡಾ. ಪಂ. ಮಳಗಿ ಜಯತೀರ್ಥಾಚಾರ್ಯ(೭೩) ( Jayatheerthacharya ) ಅವರು ವಯೋಸಹಜ ಕಾಯಿಲೆಯಿಂದ ಧಾರವಾಡದ ಗಾಂಧಿನಗರದ ನಿವಾಸದಲ್ಲಿ ಭಾನುವಾರ ಬೆಳಗ್ಗೆ ನಿಧನರಾದರು.

ಮೃತರಿಗೆ ಒಬ್ಬ ಪುತ್ರ, ಪುತ್ರಿ ಸೇರಿ ಅಪಾರ ಬಂಧು ಬಳಗ ಮತ್ತು ಶಿಷ್ಯವೃಂದವಿದೆ. ೧೯೪೯ರ ಜೂ.೫ರಂದು ಜನಿಸಿದ್ದ ಅವರು ಅನೇಕ ಗ್ರಂಥಗಳ ಕರ್ತೃವಾಗಿ, ಪ್ರವಚನಕಾರರಾಗಿ, ಮಾಧ್ವವಾಙ್ಮಯಕ್ಕೆ ಹಾಗೂ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದ ಅಸಂಖ್ಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ನಾಡಿನ ವಿವಿಧ ಶ್ರೀಗಳಿಂದ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದ ಇವರು, ಇತ್ತೀಚೆಗೆ ಧಾರವಾಡದಲ್ಲಿ ನಡೆದ ಮಾಧ್ವ ತತ್ವಜ್ಞಾನ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಪಂ. ಮಳಗಿ ಜಯತೀರ್ಥಾಚಾರ್ಯರಿಗೆ ನಾಡಿನಾದ್ಯಂತ ಶಿಷ್ಯಬಳಗವಿದೆ. ಇವರ ನಿಧನಕ್ಕೆ ಇವರ ಶಿಷ್ಯರು ಹಾಗೂ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ | ಭವಿಷ್ಯದ ಭಾಷಾ ವಿವಾದಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ: ಮಂಥನ ಬೆಂಗಳೂರು ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಹರೀಶ್‌ ಮಾತು

Exit mobile version