ಧಾರವಾಡ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ (Hit and run) ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಧಾರವಾಡ (Dharwad news) ತಾಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ದುರಂತ (Road accident) ನಡೆದಿದೆ.
ಗಂಗಾಧರ (22) ಹಾಗೂ ನಾಗರಾಜ್(22) ಸಾವನ್ನಪ್ಪಿದ ಬೈಕ್ ಸವಾರರು. ಇಬ್ಬರೂ ಧಾರವಾಡ ತಾಲೂಕಿನ ಕೋಟೂರು ಗ್ರಾಮದವರಾಗಿದ್ದಾರೆ. ವಾಹನ ಡಿಕ್ಕಿಯ ನಂತರ ಹೆದ್ದಾರಿ ಮೇಲೆಯೇ ಗೆಳೆಯರು ಜೀವ ಬಿಟ್ಟಿದ್ದಾರೆ. ವಾಹನ ನಿಲ್ಲಿಸದೆ ಪರಾರಿಯಾಗಿದೆ. ಧಾರವಾಡ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಾಲಾ ಬಸ್‌ನಿಂದ ಬಿದ್ದು ವಿದ್ಯಾರ್ಥಿ ದಾರುಣ ಸಾವು
ತುಮಕೂರು: ಖಾಸಗಿ ಶಾಲಾ ಬಸ್‌ನಿಂದ ಬಿದ್ದು ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಮನಕಲಕುವ ಘಟನೆ ನಡೆದಿದೆ.
ಕುಣಿಗಲ್‌ನ ಬಿಜಿಎಸ್ ಪಬ್ಲಿಕ್ ಸ್ಕೂಲ್‌ಗೆ ಸೇರಿದ ಶಾಲಾ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಬಿಜಿಎಸ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಮೋಹಿತ್ (10) ಮೃತ ದುರ್ದೈವಿ. ಕುಣಿಗಲ್ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ನಿವಾಸಿಯಾದ ಮೋಹಿತ್ ಬಸ್ಸಿನ ಡೋರ್‌ನಿಂದ ಹೊರಗೆ ಬಿದ್ದಿದ್ದು, ಈ ವೇಳೆ ಮೋಹಿತ್ ತಲೆ ಮೇಲೆ ಬಸ್ ಚಕ್ರ ಹರಿದಿದೆ. ಸ್ಥಳದಲ್ಲಿಯೇ ಧಾರುಣ ಸಾವನ್ನಪ್ಪಿದ್ದಾನೆ. ಮೋಹಿತ್ ಶವವಿಟ್ಟು ಬಿಜಿಎಸ್ ಶಾಲೆ ಬಳಿ ಪೋಷಕರು, ಸಂಬಂಧಿಕರು ಪ್ರತಿಭಟಿಸಿದರು. ಕುಣಿಗಲ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಷಾಹಾರ ಸೇವನೆ, ಒಬ್ಬ ಸಾವು
ಚಿಕ್ಕೋಡಿ: ಹಿರೆಕೋಡಿ ಗ್ರಾಮದಲ್ಲಿ ನಡೆದ ಫುಡ್ ಪಾಯಿಸನ್ (food poison) ಪ್ರಕರಣದಲ್ಲಿ, ಊಟ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಒಬ್ಬರು ಸಾವಿಗೀಡಾಗಿದ್ದಾರೆ. ಶಬ್ಬಿರ ಮಕಾಂದಾರ (58) ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ಪಟೇಲ್ ಎಂಬವರ ಮದುವೆ ಸಮಾರಂಭದಲ್ಲಿ ಘಟನೆ ನಡೆದಿತ್ತು.
ಆಗಸ್ಟ್ 28ರಂದು ಮದುವೆ ಮನೆಯಲ್ಲಿ ಊಟ ಸೇವಿಸಿ ನೂರಾರು ಜನ ಅಸ್ವಸ್ಥಗೊಂಡಿದ್ದರು. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಬ್ಬಿರ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಬ್ಬಿರ ಮಕಾಂದಾರ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: Heart Attack: ಬೆಳಗ್ಗೆ ಬಡ್ತಿ ಸ್ವೀಕರಿಸಿದ ಅಧಿಕಾರಿ ಸಂಜೆ ಹೃದಯಾಘಾತದಿಂದ ಸಾವು!