Site icon Vistara News

Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Union Minister Pralhad Joshi election campaign in Shiggavi

ಶಿಗ್ಗಾಂವಿ: ಪ್ರಸಕ್ತ ಲೋಕಸಭಾ ಚುನಾವಣೆ (Lok Sabha Election 2024) ಭಾರತದ ಸುವರ್ಣ ಯುಗಕ್ಕೆ ನಾಂದಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಶಿಗ್ಗಾಂವಿ ನಗರದ ಸಂತೆ ಮೈದಾನದಲ್ಲಿ ಮಂಗಳವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ಕೇವಲ ಒಂದು ಚುನಾವಣೆಯಲ್ಲ. ದೇಶದ ಅಭಿವೃದ್ಧಿ, ಸ್ವಾವಲಂಬಿ ಮತ್ತು ಸ್ವಾಭಿಮಾನಕ್ಕೆ ಸವಾಲಾದದ್ದಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ದೇಶ ರಕ್ಷಣೆ ಮತ್ತು ಹಿಂದೂಗಳ ಸಂರಕ್ಷಣೆಗಾಗಿ ನರೇಂದ್ರ ಮೋದಿ ಅವರ ಆಡಳಿತ ಮತ್ತೆ ಮಹತ್ವ ಪಡೆದುಕೊಂಡಿದೆ. ಇದಕ್ಕಾಗಿ ಎಲ್ಲರೂ ಎಚ್ಚೆತ್ತುಕೊಂಡು ಮತದಾನ ಮಾಡಬೇಕಿದೆ ಎಂದು ಕರೆ ನೀಡಿದರು.

ಇದನ್ನೂ ಓದಿ: Karnataka Weather: ರಾಜ್ಯದಲ್ಲಿ ಕಳೆದ 7 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು!

ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ ಬಿಜೆಪಿಗೆ ಅಮೂಲ್ಯವಾದ ಮತ ನೀಡಿ ದೇಶದ ಐತಿಹಾಸಿಕ ಕ್ಷಣಗಳಿಗೆ ಮುನ್ನುಡಿ ಬರೆಯಬೇಕು ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸದಾ ಜನರಿಗಾಗಿ ದುಡಿಯುವ ಸರ್ಕಾರ. ದೇಶದ ಎಲ್ಲ ಜನರ ಕ್ಷೇಮಕ್ಕಾಗಿ, ಅಭಿವೃದ್ದಿಗಾಗಿ ಮತ್ತು ಸರ್ವತೋಮುಖ ಬೆಳವಣಿಗಾಗಿ ಕೆಲಸ ಮಾಡುತ್ತಿದೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು.

ಜಗತ್ತಿಗೆ ಭಾರತ ಕೇವಲ ಒಂದು ದೇಶವಾಗಿ ಉಳಿದಿಲ್ಲ. ಪ್ರಪಂಚವೇ ಹಿರಿಯಣ್ಣನಾಗಿ ಸ್ವೀಕರಿಸಲು ಸಿದ್ಧವಾಗಿದೆ. ಆದ್ದರಿಂದ ದೇಶದ ಪ್ರತಿ ನಾಗರಿಕನೂ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದು ಮನವಿ ಮಾಡಿದರು.

ರೋಡ್‌ ಶೋ

ಪ್ರಚಾರ ಸಭೆಗೂ ಮುನ್ನ ಶಿಗ್ಗಾಂವಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ‌ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ರೋಡ್ ಶೋ ನಡೆಸಿ, ಮತಯಾಚನೆ ನಡೆಸಿದರು.

ಇದನ್ನೂ ಓದಿ: Fortis Hospital: ಪಾರ್ಕಿನ್ಸನ್‌ ಕಾಯಿಲೆ ಚಿಕಿತ್ಸೆಗೆ ಪ್ರತ್ಯೇಕ ಕ್ಲಿನಿಕ್‌ ಆರಂಭಿಸಿದ ಫೋರ್ಟಿಸ್‌ ಆಸ್ಪತ್ರೆ

ಪ್ರಚಾರ ಸಭೆಯಲ್ಲಿ ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಮುಖಂಡರಾದ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡರ, ಶಶಿಧರ ಯಲಿಗಾರ, ತಿಪ್ಪಣ್ಣ ಸಾತಣ್ಣವರ, ಪ್ರಸಾದ್ ಸುರಗಿಮಠ, ರವಿ ಕುಡೊಕ್ಕಲಿಗಾರ, ಬಸವರಾಜ ನಾರಾಯಣಪುರ, ಗಂಗಾಧರ ಬಾಣದ ಹಾಗೂ ಅಸಂಖ್ಯಾತ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಪಾಲ್ಗೊಂಡಿದ್ದರು.

Exit mobile version