ಧಾರವಾಡ: ಇಲ್ಲಿ ನಡೆಯುತ್ತಿರುವ 26ನೆಯ ರಾಷ್ಟ್ರೀಯ ಯುವಜನೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ.
ಇದಕ್ಕೂ ಹಿಂದಿನ ದಿನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಯುವಜನೋತ್ಸವದಲ್ಲಿ ಭಾಗವಹಿಸಿ, ಆರ್ಕೆಸ್ಟ್ರಾದಲ್ಲಿ ಡಾ.ರಾಜ್‌ಕುಮಾರ್ ಅವರ ʼಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುʼ ಹಾಡು ಹೇಳಿ ಸೇರಿದ್ದ ಜನರನ್ನು ರಂಜಿಸಿದರು.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಸಮಾರೋಪ ಸಮಾರಂಭಕ್ಕೆ ಸಿಎಂ ಹಾಗೂ ರಾಜ್ಯಪಾಲರು ಆಗಮಿಸಿ ಭಾಗಿಗಳಾಗಲಿದ್ದಾರೆ. ಜ.12ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಯುವಜನೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿತ್ತು. ರಾಷ್ಟ್ರದ 28 ವಿವಿಧ ರಾಜ್ಯಗಳಿಂದ ಬಂದಿದ್ದ ಸುಮಾರು 7500 ಯುವಕ, ಯುವತಿಯರು ಭಾಗಿಗಳಾಗಿದ್ದರು. ಯುವಕರನ್ನು ಸೆಳೆಯಲು ಶಿಲಾರೋಹಣ, ಜಲಕ್ರೀಡೆ, ಜಾನಪದ ನೃತ್ಯ, ಜಾನಪದ ಹಾಡು, ದೇಸಿ ಆಟಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ | National Youth Festival : ಮೋದಿಗೆ ನೀಡಿದ ವಿಶೇಷ ಮೂರು ಉಡುಗೊರೆಗಳಿವು; ಬಹಳ ಹೊತ್ತು ಏಲಕ್ಕಿ ಪೇಟ ಧರಿಸಿಯೇ ಕುಳಿತಿದ್ದ ಪ್ರಧಾನಿ
ಹಾಡಿದ ಪ್ರಹ್ಲಾದ್ ಜೋಶಿ
ರಾಷ್ಟ್ರೀಯ ಯುವಜನೋತ್ಸವ ಪ್ರಯುಕ್ತ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಿದರು. ಡಾ.ರಾಜಕುಮಾರ್ ಹಾಡಿರುವ ʼಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕುʼ ಹಾಡು ಹಾಡಿ ಸೇರಿದವರನ್ನು ರಂಜಿಸಿದರು. ಯುವಜನತೆ, ಆಲ್ ಓಕೆ ತಂಡದ ಗಾಯಕರು ಸಚಿವ ಜೋಶಿಗೆ ಸಾಥ್ ಕೊಟ್ಟರು.
ಇದನ್ನೂ ಓದಿ | National Youth Festival | ಪ್ರಧಾನಿ ಮೋದಿಯೆದುರು ಅನಾವರಣಗೊಂಡ ಸಾಂಸ್ಕೃತಿಕ ವೈಭವದ ನೋಟ ಇಲ್ಲಿದೆ