Site icon Vistara News

Mangalore Airport: ಒಳ ಉಡುಪಿನಲ್ಲಿ 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಸಾಗಣೆ; ಪ್ರಯಾಣಿಕ ಸೆರೆ

Diamond crystals seized

#image_title

ಮಂಗಳೂರು: ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 1.69 ಕೋಟಿ ರೂಪಾಯಿ ಮೌಲ್ಯದ ವಜ್ರದ ಹರಳುಗಳನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು ವಶಕ್ಕೆ ಪಡೆದು, ಪ್ರಯಾಣಿಕನೊಬ್ಬರನ್ನು ಬಂಧಿಸಿದ್ದಾರೆ. ಪ್ರಯಾಣಿಕನ ಅನುಮಾನಾಸ್ಪದ ವರ್ತನೆ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಆತ ಒಳ ಉಡುಪಿನಲ್ಲಿ ವಜ್ರದ ಹರಳುಗಳನ್ನು ಸಾಗಿಸುತ್ತಿದ್ದದ್ದು ಕಂಡುಬಂದಿದೆ.

ಮೇ 25ರಂದು ದುಬೈಗೆ ತೆರಳಲು ಏರ್‌ಪೋರ್ಟ್‌ಗೆ ಬಂದಿದ್ದ ಕೇರಳದ ಕಾಸರಗೋಡು ನಿವಾಸಿಯಿಂದ ವಜ್ರದ ಹರಳುಗಳನ್ನು ವಶಕ್ಕೆ ಪಡೆಯಲಾಗಿದೆ. ಒಳ ಉಡುಪಿನಲ್ಲಿ 13 ಪೌಚ್‌ಗಳಲ್ಲಿ ವಜ್ರಗಳನ್ನು ಅಡಗಿಸಿಡಲಾಗಿತ್ತು. ಹೀಗಾಗಿ ಆರೋಪಿ ಪ್ರಯಾಣಿಕನನ್ನು ಸಿಐಎಸ್‌ಎಫ್ ಅಧಿಕಾರಿಗಳು ಬಂಧಿಸಿ, ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ತಪಾಸಣೆ ವೇಳೆ ಪ್ರಯಾಣಿಕನ ಒಳ ಉಡುಪಿನಲ್ಲಿ 2 ಪ್ಯಾಕೆಟ್‌ಗಳು ಪತ್ತೆಯಾಗಿವೆ. ಅವುಗಳನ್ನು ತೆರೆದು ನೋಡಿದಾಗ 13 ಸಣ್ಣ ಪೊಟ್ಟಣಗಳಲ್ಲಿ ವಜ್ರದ ಹರಳುಗಳು ಇದ್ದವು. ಇವು 306.21 ಕ್ಯಾರೆಟ್‌ ತೂಕ ಇದ್ದು, 1.69 ಕೋಟಿ ರೂಪಾಯಿ ಬೆಲೆ ಬಾಳುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Koppal Accident: ಲಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ 6 ಜನರ ದುರ್ಮರಣ; ಟಯರ್‌ ಸ್ಫೋಟವಾಗಿ ಅಪಘಾತ

ಕೊಳ್ಳೇಗಾಲದಲ್ಲಿ 3.5 ಕೋಟಿ ರೂ. ಮೌಲ್ಯದ ಅಂಬರ್‌ಗ್ರಿಸ್ ವಶ

ಚಾಮರಾಜನಗರ: ಕೊಳ್ಳೇಗಾಲದ ಮುಡಿಗುಂಡಂ ಬಸ್ ನಿಲ್ದಾಣದ ಬಳಿ 3.5 ಕೋಟಿ ರೂಪಾಯಿ ಮೌಲ್ಯದ ಅಂಬರ್‌ಗ್ರಿಸ್‌ (ತಿಮಿಂಗಿಲ ವಾಂತಿ) ಅನ್ನು ಅರಣ್ಯ ಸಂಚಾರಿದಳ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮೂಲದ ಸಮಿ ಅಹಮದ್ ಹಾಗೂ ಫೈರೋಜ್ ಖಾನ್ ಎಂಬುವರು ಬಂಧಿತರು. ತಮಿಳುನಾಡಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದಾಗ ಆರೋಪಿಗಳಿಂದ 3.5 ಕೆ.ಜಿ ಅಂಬರ್‌ಗ್ರಿಸ್ ವಶಕ್ಕೆ ಪಡೆಯಲಾಗಿದೆ.

Exit mobile version