Site icon Vistara News

Dowry Case | ವರದಕ್ಷಿಣೆ, ಶೀಲ ಶಂಕಿಸಿ ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಂದು ಹೂತು ಹಾಕಿದ ಪತಿ? ಹೆತ್ತವರ ದೂರು

davanagere dowry case murder case

ದಾವಣಗೆರೆ: ಮಗಳಿಗೆ ವರದಕ್ಷಿಣೆ ಕಿರುಕುಳ (Dowry Case) ನೀಡಿ ಹಾಗೂ ಶೀಲ ಶಂಕಿಸಿ ಹಿಂಸೆ ನೀಡುತ್ತಿದ್ದ ಪತಿ ತನ್ನ ಗರ್ಭಿಣಿ ಪತ್ನಿಯನ್ನೇ ಕೊಂದು ಹೂತು ಹಾಕಿರುವ ಶಂಕೆ ವ್ಯಕ್ತವಾಗಿದೆ. ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿ ಘಟನೆ ನಡೆದಿದ್ದು, ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಚಂದ್ರಕಲಾ ಅಲಿಯಾಸ್ ರೇಷ್ಮಾ (20) ಎಂಬುವವರು ನಾಪತ್ತೆಯಾಗಿದ್ದಾರೆ. ಅವರು ಆರು ತಿಂಗಳ ಗರ್ಭಿಣಿಯಾಗಿದ್ದು, ಪತಿ ಮೋಹನ್ ಕುಮಾರ್ ಅಲಿಯಾಸ್ ಮನು (24) ಕೊಲೆ ಮಾಡಿರುವ ಶಂಕೆಯನ್ನು ರೇಷ್ಮಾ ತಂದೆ ವ್ಯಕ್ತಪಡಿಸಿದ್ದಾರೆ.

ಮೋಹನ್‌ ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ಹಾಗೂ ಶೀಲ ಶಂಕಿಸಿ ಹಿಂಸೆ ನೀಡುತ್ತಿದ್ದ. ಕಳೆದ ಕೆಲವು ದಿನಗಳಿಂದ ರೇಷ್ಮಾ ಎಲ್ಲೂ ಕಾಣಿಸುತ್ತಿಲ್ಲ. ಕೇಳಿದರೆ ಸರಿಯಾಗಿ ಉತ್ತರವನ್ನೂ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವಳನ್ನು ಕೊಲೆ ಮಾಡಿ ಹೂತುಹಾಕಿರಬಹುದು ಎಂದು ಮೋಹನ್ ವಿರುದ್ಧ ರೇಷ್ಮಾ ಪಾಲಕರು ಆರೋಪ ಮಾಡಿದ್ದಾರೆ.

ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ನಿವಾಸಿಯಾಗಿದ್ದ ರೇಷ್ಮಾ ಅವರನ್ನು ಕಳೆದ ಏಪ್ರಿಲ್ 13ರಂದು ವಿವಾಹ ಮಾಡಿಕೊಡಲಾಗಿತ್ತು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಶಿವಮೊಗ್ಗದ ಟ್ರಯಲ್‌ ಬ್ಲಾಸ್ಟ್‌- ಮಂಗಳೂರು ಬ್ಲಾಸ್ಟ್‌ಗೆ ಸಂಬಂಧ ಇದೆ: ಆರಗ ಜ್ಞಾನೇಂದ್ರ

Exit mobile version