ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ವಿಚಾರದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇದೀಗ ಸುದ್ದಿಯಾಗಿರುವುದು ಮಾತ್ರ ಸಚಿವ ಮುನಿರತ್ನ ಕಾರಣಕ್ಕಾಗಿ. ಅವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ | ತರಗತಿ ಬಹಿಷ್ಕಾರ, ದೂರು: ಬೆಂಗಳೂರು ವಿಶ್ವವಿದ್ಯಾಲಯ ಸಂಪೂರ್ಣ ಸ್ತಬ್ಧ
ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಈ ಹಲ್ಲೆ ನಡೆಸಿರುವುದು ಬ್ಯಾನರ್ ವಿಚಾರಕ್ಕೆ. ಸಚಿವ ಮುನಿರತ್ನ ಅವರ ಬೆಂಬಲಿಗರು ಇಲ್ಲಿ ಒಂದು ಬ್ಯಾನರ್ ಹಾಕಿಸಿದ್ದರು. ಇತ್ತ ಸಂಶೋಧನಾ ವಿದ್ಯಾರ್ಥಿಗಳ ತಂಡವೊಂದು ವಿವಿ ಆವರಣದಲ್ಲಿದ್ದ ಬ್ಯಾನರ್ ಅನ್ನು ತೆರವುಗೊಳಿಸುತ್ತಿದ್ದರು.
ಹೈಕೋರ್ಟ್ ಆದೇಶ ಇರುವುದರಿಂದ ಬ್ಯಾನರ್ ಅಳವಡಿಕೆ ಬೇಡ ಅಂತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಚಿವರು ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ಲೋಕೇಶ್ ರಾಮ್ ಹಾಗೂ ಸಂಗಡಿಗರು ಆರೋಪಿಸಿದ್ದಾರೆ. ಪ್ರಭಾವ ಬಳಸಿ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ ಎಂದವರು ಕಿಡಿಕಾರಿದ್ದಾರೆ.
ಇದನ್ನೂ ಓದಿ | Bangalore University | ಪ್ರಶ್ನೆ ಪತ್ರಿಕೆ ಸೋರಿಕೆ: ಬೆಂಗಳೂರು ಉತ್ತರ ವಿವಿ ಪರೀಕ್ಷೆ ಮುಂದಕ್ಕೆ