Site icon Vistara News

ಡಿಜಿಟಲ್‌ ಮಾಧ್ಯಮಗಳು ಜನರ ಆಶೋತ್ತರ ಈಡೇರಿಸಬೇಕು: ಏಮ್‌ ಹೈ ಕನ್ಸಲ್ಟಿಂಗ್ ಸಿಇಒ ಎನ್. ರವಿ ಶಂಕರ್

ravi shankar n

ಬೆಂಗಳೂರು: ಡಿಜಿಟಲ್ ಮಾಧ್ಯಮವು ಜನರ ಆಶೋತ್ತರಗಳನ್ನು, ಭವಿಷ್ಯವನ್ನು ಸುಧಾರಿಸುವ ಹಾಗೂ ಮನರಂಜನೆ, ಮಾಹಿತಿಗಳೊಂದಿಗೆ ಮೇಳೈಸಿರುವಂಥ ಮಾಧ್ಯಮ ಎಂದು ಏಮ್‌ ಹೈ ಕನ್ಸಲ್ಟೆನ್ಸಿ ಸರ್ವೀಸ್‌ನ ಸಿಇಒ ರವಿ ಶಂಕರ್‌ ಅವರು ಹೇಳಿದರು.

ವಿಸ್ತಾರ ನ್ಯೂಸ್‌ನ ಲೋಗೊ ಮತ್ತು ವೆಬ್‌ಸೈಟ್‌ ಅನಾವರಣ ಕಾರ್ಯಕ್ರಮದ ಪ್ರಯುಕ್ತ ನಡೆದ ” ಭಾರತದಲ್ಲಿ ಡಿಜಿಟಲ್‌ ಮಾಧ್ಯಮದ ಭವಿಷ್ಯʼʼ ಸಂವಾದದಲ್ಲಿ ಸಮನ್ವಯಕಾರರಾಗಿ ಮಾತನಾಡಿದ ಅವರು, ಮಾಧ್ಯಮ ಎಂದರೆ ಮನರಂಜನೆ, ಮಾಹಿತಿ ಮತ್ತು ಶಿಕ್ಷಣ ಮೇಳೈಸಿರುವಂಥದ್ದು ಎಂದು ಅವರು ಅಭಿಪ್ರಾಯಪಟ್ಟರು.

ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಉದ್ಯಮಶೀಲತೆ ಅತ್ಯಂತ ಮುಖ್ಯ. ಭಾರತ ೫ ಟ್ರಿಲಿಯನ್‌ ಡಾಲರ್‌ ಎಕಾನಮಿಯಾಗಲೂ ಪ್ರಯೋಗಶೀಲತೆ ಮುಖ್ಯ, ಡಿಜಿಟಲ್‌ ಮಾಧ್ಯಮ ವಲಯದಲ್ಲೂ ಇದು ನಡೆಯಬೇಕು ಎಂದು ಹೇಳಿದರು.‌

ಭಾರತದಲ್ಲಿ ಡಿಜಿಟಲ್‌ ಮಾಧ್ಯಮದ ಭವಿಷ್ಯ ಕುರಿತ ಸಂವಾದದಲ್ಲಿ “ಕೂʼ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ, ಫ್ರೀಡಂ ಆ್ಯಪ್ ನ ಸಿ.ಎಸ್.ಸುಧೀರ್‌, ಓಪನ್‌ ಡಾಟ್‌ ಮನಿ ಸಹ ಸಂಸ್ಥಾಪಕ ಅನೀಶ್‌ ಅಚ್ಯುತನ್‌, ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು ಸಂವಾದದಲ್ಲಿ ಭಾಗವಹಿಸಿದ್ದರು.

Exit mobile version