ಬೆಂಗಳೂರು: ರಾಜ್ಯದಲ್ಲಿ ʻರೌಡಿ ಪಾಲಿಟಿಕ್ಸ್ʼ (Criminal politics) ವಾಗ್ವಾದ ಜೋರಾಗಿ ನಡೆಯುತ್ತಿದೆ. ಸೈಲೆಂಟ್ ಸುನಿಲ್ ನಡೆಸಿದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದು, ನಾಗಮಂಗಲದಲ್ಲಿ ಫೈಟರ್ ರವಿ ಬಿಜೆಪಿ ಸೇರಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಮಾತಿನ ಚಕಮಕಿಗೆ ಕಾರಣವಾಗಿದೆ.
ಈ ನಡುವೆ ಕೆಪಿಸಿಸಿಯ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿಯನ್ನು ಕೊಲೆಗಡುಕರ, ದಗಾಕೋರರ ಪಕ್ಷ ಎಂದು ಹೇಳಿದ್ದಾರೆ. ಅವರು ಮಾಡಿರುವ ಟ್ವೀಟ್‌ನಲ್ಲಿ ಬಿಜೆಪಿಯನ್ನು ನಾನಾ ರೀತಿಯಲ್ಲಿ ಹಂಗಿಸಲಾಗಿದೆ.
ದಿನೇಶ್ ಗುಂಡೂರಾವ್ ಟ್ವೀಟ್‌ಗಳು
-ಕುಖ್ಯಾತ ಮತ್ತು ವಾಂಟೆಡ್ ರೌಡಿಗಳ ಜೊತೆ BJP ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. BJP ಕೊಲೆಗಡುಕರ ಹಾಗೂ ದಗಾಕೋರರ ಪಕ್ಷ ಎನ್ನುವುದಕ್ಕೆ ಇನ್ನೂ ಸಾಕ್ಷಿ ಬೇಕೆ?
– ಯಾವ ರೌಡಿಯನ್ನು ಹಿಡಿಯಲು ಪೊಲೀಸರು ಹೆಣಗಾಡುತ್ತಿದ್ದಾರೋ, ಅದೇ ರೌಡಿಯ ಹೆಗಲ ಮೇಲೆ BJPಯ ಸಚಿವರು,MPಗಳು,MLAಗಳು ಕೈಹಾಕಿ ನಿಂತರೆ. ಅವನನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವೇ?
– ಬೊಮ್ಮಾಯಿಯವರೆ, ನಿಮ್ಮ ಪಕ್ಷದ ನಾಯಕರು ‘ಸೈಲೆಂಟ್’ ಆಗಿ ರೌಡಿಗಳ ಜೊತೆ ಕೈ ಜೋಡಿಸಿದರೆ, ಪೊಲೀಸರು ನಿಸ್ಸಹಾಯಕರಾಗಿ ‘ಸೈಲೆಂಟ್’ ಆಗುವುದಿಲ್ಲವೆ? ನೀವು ‘ಸೈಲೆಂಟ್’ ಆಗಿ ರೌಡಿಗಳ ಜೊತೆ ಶಾಮೀಲಾದರೆ, ನಮ್ಮ ಪೊಲೀಸರು ‘ಫೈಟರ್’ಗಳಾಗಲು ಸಾಧ್ಯವೇ? ರಾಮ ರಾಜ್ಯ ಮಾಡುತ್ತೀವಿ ಎಂದು ರೌಡಿ ರಾಜ್ಯ ಮಾಡಲು ಹೊರಟಿರುವ ನಿಮಗೆ ಏನು ಹೇಳಲು ಸಾಧ್ಯ ಸ್ವಾಮಿ?
– ಬೊಮ್ಮಾಯಿಯವರೆ, ‘ನೀನ್ಯಾರು ಎಂದು ಹೇಳಬೇಡ, ನಿನ್ನ ಸ್ನೇಹಿತರು ಯಾರು ಎಂದು ಹೇಳು. ಆಗ ನೀನ್ಯಾರು ಎಂದು ತಿಳಿಯುತ್ತದೆ’ ಎಂಬುದು ಹಿರಿಯರ ಅನುಭವದ ಮಾತು. ನಿಮ್ಮ ಪಕ್ಷದವರ ಸ್ನೇಹ ಸಂಬಂಧ ರೌಡಿಗಳು,ಕೊಲೆಗಡಕರು ಮತ್ತು ರೇಪಿಸ್ಟ್‌ಗಳ ಜೊತೆ. ಇಷ್ಟು ಸಾಕಲ್ಲವೇ ನಿಮ್ಮ ಪಕ್ಷದ ಯೋಗ್ಯತೆ, ಸಂಸ್ಕಾರ ಮತ್ತು ಸಂಸ್ಕೃತಿ ಏನು ಎಂದು ಅರಿಯಲು.?
ಇದನ್ನೂ ಓದಿ | Criminal politics | ಕೈಗೆ ಸಿಕ್ಕಾಗ ಬಿಟ್ಟುಬಿಟ್ರು, ಈಗ ಪೊಲೀಸರು ಕೇಳಿದ್ರೆ ಕಾನೂನು ಮಾತಾಡ್ತಾ ಇದಾನೆ ಸೈಲೆಂಟ್ ಸುನಿಲ!