ಮಂಗಳೂರು: ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದವರ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಪರಿಹಾರ ನೀಡುವಲ್ಲೂ ತಾರತಮ್ಯ ಧೋರಣೆ ಅನುಸರಿಸಲಾಗಿದೆ ಎಂದು ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ (Sharath Madiwala) ತಂದೆ ತನಿಯಪ್ಪ ಮಡಿವಾಳ ಅವರು ಅಸಮಾಧಾನ ಹೊರಹಾಕಿದ್ದಾರೆ.
ಬಂಟ್ವಾಳದ ಬಿಸಿ ರೋಡ್‌ನಲ್ಲಿ 2017ರ ಜುಲೈ 7ರಂದು ದುಷ್ಕರ್ಮಿಗಳ ದಾಳಿಗೆ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಬಲಿಯಾಗಿದ್ದ. ಬಿ.ಸಿ.ರೋಡ್‌ನಲ್ಲಿರುವ ಉದಯ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಜುಲೈ 4ರಂದು ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಶರತ್ ಮಾಡಿವಾಳನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 7 ರಂದು ಕೊನೆಯುಸಿರೆಳೆದಿದ್ದ.
ಮಗನ ಸಾವಿಗೆ ನ್ಯಾಯ ದೊರೆತಿಲ್ಲ ಎಂದು ಕೊರಗುತ್ತಿರುವ ಶಾರತ್ ಮಡಿವಾಳ ತಂದೆ 74 ವರ್ಷದ ತನಿಯಪ್ಪ ಮಡಿವಾಳ ಅವರು, ಇಂದಿಗೂ ಲಾಂಡ್ರಿಯಲ್ಲಿ ದುಡಿಯುತ್ತಿದ್ದಾರೆ. ಇದೀಗ ನಾಲ್ವರು ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿ ಘೋಷಣೆ ಮಾಡಿದೆ. ಹೀಗಾಗಿ ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ತನಿಯಪ್ಪ ಮಡಿವಾಳ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Dinesh Gundu Rao: ಬೊಕೆ ಬೇಡ, ಬುಕ್ ಕೊಡಿ; ಸಿಎಂ ಹಾದಿಯಲ್ಲಿ ಸಚಿವ ದಿನೇಶ್ ಗುಂಡೂ ರಾವ್!
ಬಿಜೆಪಿ ಆಗಲಿ, ಕಾಂಗ್ರೆಸ್ ಸರ್ಕಾರವಾಗಲಿ ಈವರೆಗೂ ನಮ್ಮ ಕುಟುಂಬಕ್ಕೆ ಒಂದು ಪೈಸೆ ಪರಿಹಾರ ನೀಡಿಲ್ಲ. ನಮ್ಮ ಸಮಸ್ಯೆಗಳಿಗೆ, ಕಷ್ಟಕ್ಕೆ ಯಾವ ಸರ್ಕಾರವೂ ಸ್ಪಂದಿಸಿಲ್ಲ. ನನ್ನ ಮಗನ ಪ್ರಕರಣದಲ್ಲಿ ಸರಿಯಾಗಿ ತನಿಖೆ ಆಗಿಲ್ಲ. ಈ ಪ್ರಕರಣದ ತನಿಖೆ ಎನ್‌ಐಎ ಅಥವಾ ಸಿಬಿಐಗೆ ವಹಿಸಬೇಕು. ಜತೆಗೆ ಈ ಕೂಡಲೇ ನಮ್ಮ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ತನಿಯಪ್ಪ ಮಡಿವಾಳ ಒತ್ತಾಯಿಸಿದ್ದಾರೆ.
ಕೋಮುದ್ವೇಷಕ್ಕೆ ಬಲಿಯಾಗಿದ್ದ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ
ಮಂಗಳೂರು: ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ ನಾಲ್ವರ ಕುಟುಂಬಕ್ಕೆ ರಾಜ್ಯ ಸರ್ಕಾರ, ತಲಾ 25 ಲಕ್ಷ ರೂ. ಪರಿಹಾರ (Compensation) ಘೋಷಣೆ ಮಾಡಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್, ಫಾಝಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ.
ಇದನ್ನೂ ಓದಿ | Karnataka Politics: ಮುಂದಿನ ಟಾರ್ಗೆಟ್ ಯಾರು?; ಬಿ.ಎಲ್ ಸಂತೋಷ್‌ಗೆ ಎಂ.ಬಿ ಪಾಟೀಲ್ ನೇರ ಪ್ರಶ್ನೆ!
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಸುಮಾರು ಎಂಟು ಮಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಮಸೂದ್ (21) ಎಂಬ ಯುವಕ 2022ರ ಜುಲೈ 19ರಂದು ಮೃತಪಟ್ಟಿದ್ದ. ಹಾಗೆಯೇ ಅದೇ ತಿಂಗಳ ಜಲೈ 28ರಂದು ಸುರತ್ಕಲ್ ಮಾರುಕಟ್ಟೆ ಬಳಿ ಫಾಝಿಲ್‌ನನ್ನು ಹತ್ಯೆ ಮಾಡಲಾಗಿತ್ತು. 2022ರ ಡಿಸೆಂಬರ್ 24ರಂದು ಸುರತ್ಕಲ್‌ನಲ್ಲಿ ಅಂಗಡಿ ಮಾಲೀಕ ಜಲೀಲ್ ಹತ್ಯೆಯಾಗಿತ್ತು. ಈ ಪ್ರಕರಣಗಳಿಗಿಂತ ಮೊದಲು 2018ರ ಜನವರಿ 3ರಂದು ಸುರತ್ಕಲ್‌ನಲ್ಲಿ ದೀಪಕ್ ರಾವ್ ಕೊಲೆಯಾಗಿತ್ತು.