Site icon Vistara News

Murder Case: ಸಂಸಾರದಲ್ಲಿ ವೈಮನಸ್ಸು; ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ ಪತಿ

Family dispute husband murdered wife

ಬೆಳಗಾವಿ: ಇಲ್ಲಿನ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಮಲಗಿದ್ದ ಪತ್ನಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಪತಿಯೇ ಬರ್ಬರವಾಗಿ ಹತ್ಯೆ (murder case) ಮಾಡಿದ್ದಾನೆ. ರುಕ್ಮವ್ವ ಉಪ್ಪಾರ (29) ಹತ್ಯೆಯಾದ ದುರ್ದೈವಿ. ಮಲ್ಲಪ್ಪ ಸದಾಶಿವ ಉಪ್ಪಾರ ಎಂಬಾತ ಕೊಲೆ ಆರೋಪಿಯಾಗಿದ್ದಾನೆ.

ಕುಟುಂಬಸ್ಥರ ಆಕ್ರಂದನ

ಹತ್ಯೆಗೆ ಸಂಸಾರಿಕ ವೈಮನಸ್ಸು ಕಾರಣ ಎನ್ನಲಾಗುತ್ತಿದೆ. ರುಕ್ಮವ್ವ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಮಲ್ಲಪ್ಪ ಸದಾಶಿವ ಉಪ್ಪಾರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು

ಉದ್ಯಮಿ ಅಟ್ಟಾಡಿಸಿ ನಡುರಸ್ತೆಯಲ್ಲಿ ಕೊಂದರು; ಕುಡಿದು ಸ್ನೇಹಿತನನ್ನೇ ಮುಗಿಸಿಬಿಟ್ಟರು!

ತಮಿಳುನಾಡು/ಹೊಸೂರು: ಹೊಸೂರು ಸಮೀಪದ ಕೆ.ಮಲ್ಲಸಂದ್ರಂ ಗ್ರಾಮದಲ್ಲಿ ರಿಯಲ್‌ ಎಸ್ಟೇಟ್‌ (Real Estate) ಉದ್ಯಮಿಯೊಬ್ಬರ (murder case) ಕೊಲೆಯಾಗಿದೆ. ಹೊಸೂರಿನ ಶಾಂತಿನಗರ ನಿವಾಸಿ ಕೇಶವನ್ (45) ಹತ್ಯೆಯಾದವರು.

ಕೇಶವನ್‌ ರಿಯಲ್ ಎಸ್ಟೇಟ್, ಫೈನಾನ್ಸ್ ಮತ್ತು ಇಟ್ಟಿಗೆ ವ್ಯಾಪಾರ ಮಾಡುತ್ತಿದ್ದರು. ಬುಧವಾರ ಸಂಜೆ (ಜೂ.21) ಕೆ.ಮಲ್ಲಸಂದ್ರ ಗ್ರಾಮದ ಬಳಿ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಕೇಶವನ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಐಷಾರಾಮಿ ಕಾರಿನಲ್ಲಿ ಬಂದಿದ್ದ ಎಂಟು ಮಂದಿ ಅಡ್ಡಗಟ್ಟಿ, ನಡು ರಸ್ತೆಯಲ್ಲೇ ಮಾರಕಾಸ್ತ್ರ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ.

ಇವರಿಂದ ತಪ್ಪಿಸಿಕೊಂಡು ಓಡಲು ಮುಂದಾದರೂ ಬಿಡದೆ ಅಟ್ಟಾಡಿಸಿಕೊಂಡು ಕೊಚ್ಚಿ ಕೊಂದಿದ್ದಾರೆ. ತಲೆ, ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಕೇಶವನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಥಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕೃಷ್ಣಗಿರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಥಳಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಕುಡಿದ ಮತ್ತಿನಲ್ಲಿ ಗಲಾಟೆ, ಕೊಲೆಯಲ್ಲಿ ಅಂತ್ಯ

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಡಿದ ಅಮಲಿನಲ್ಲಿ ಗಲಾಟೆ ನಡೆದಿದ್ದು, ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ವಿಜಯ್‌ಕುಮಾರ್‌ (45) ಹತ್ಯೆಯಾದವನು. ಗಿರೀಶ್ ಮತ್ತು ಶಂಕರ್ ಹತ್ಯೆಕೋರರಾಗಿದ್ದಾರೆ.

2020ರಲ್ಲಿ ಚಾಮುಂಡೇಶ್ವರಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಕಳೆದ ಆರು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ. ಆಗಾಗ ಕುಡಿಯಲು ಅದೇ ಬಾರ್‌ಗೆ ಹೋಗುತ್ತಿದ್ದವನು, ಬುಧವಾರ ರಾತ್ರಿ ಕೂಡ ಬಾರ್‌ಗೆ ಹೋಗಿದ್ದ. ಅಲ್ಲಿಗೆ ಸ್ನೇಹಿತರಾದ ಲೋಕೇಶ್, ಗಿರೀಶ್ ಆಗಮಿಸಿದ್ದರು.

ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯಗೆ ಡ್ಯಾಶ್..‌ ಡ್ಯಾಶ್‌.. ಎಂದ ಸಿ.ಟಿ. ರವಿ!

ಈ ವೇಳೆ ಇವರಿಬ್ಬರು ವಿಜಯ್ ಬಳಿ ಹಣ ಕೇಳಿದ್ದು, ಇಲ್ಲ ಎಂದಾಗ ಜಗಳ ಶುರುವಾಗಿದೆ. ಸಿಟ್ಟಿಗೆದ್ದ ಲೋಕೇಶ್‌, ಗಿರೀಶ್‌ ತಲೆ ಮೇಲೆ ಹಾಲ್ ಬ್ಲಾಕ್ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ, ಪರಾರಿ ಆಗಿದ್ದಾರೆ. ಸದ್ಯ ಬಾರ್ ಕ್ಯಾಶಿಯರ್ ನೀಡಿರುವ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version