ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸರಿಪಡಿಸಲು ಮತ್ತು ಜೈಲಿನ ಚಟುವಟಿಕೆಗಳ ಕಡೆ ಗಮನ ಹರಿಸಲು ಕೋರ್ಟ್ ಮುಂದಾಗಿದೆ. ಇನ್ನು ಮುಂದೆ ಎಲ್ಲಾ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಿಗೆ ಹಾಗೂ ಜೈಲುಗಳಿಗೆ ಜಿಲ್ಲಾ ನ್ಯಾಯಾಧೀಶರು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಲಿದ್ದಾರೆ.
ಎಲ್ಲಾ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡುವ ಜಿಲ್ಲಾ ನ್ಯಾಯಾಧೀಶರು ನ್ಯೂನತೆಗಳನ್ನು ಗಮನಿಸಲಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಔಷಧ ಅಲಭ್ಯತೆ ಹಾಗೂ ಮೂಲ ಸೌಕರ್ಯದ ಬಗ್ಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ. ಒಂದು ವೇಳೆ ಜಿಲ್ಲಾ ನ್ಯಾಯಾಧೀಶರು ವರದಿ ಸಲ್ಲಿಸಲು ವಿಫಲರಾದರೆ ಅವರ ವಿರುದ್ಧವೇ ಹೈಕೋರ್ಟ್ ನ್ಯಾಯಾಧೀಶರು ಕ್ರಮ ಕೈಗೊಳ್ಳಲಿದ್ದಾರೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ!
ಇದನ್ನೂ ಓದಿ | ಡೈವೊರ್ಸ್ ಬೇಕೆಂದು ಬಂದವರನ್ನು ಒಂದು ಮಾಡಿದ ನ್ಯಾಯಾಧೀಶರು
ಜಿಲ್ಲಾ ನ್ಯಾಯಾಧೀಶರು ಆಸ್ಪತ್ರೆಗಳಲ್ಲದೇ ಜೈಲುಗಳಿಗೂ ಭೇಟಿ ಕೊಡಬೇಕು. ಪ್ರತಿ ತಿಂಗಳು ನ್ಯಾಯಾಧೀಶರು ಜೈಲಿಗೆ ಭೇಟಿ ಕೊಟ್ಟು ಚಟುವಟಿಕೆಗಳ ಕಡೆ ಗಮನ ಹರಿಸಿ, ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ವೀರಪ್ಪ ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ | ಉಡುಪಿ ಜಿಲ್ಲಾಸ್ಪತ್ರೆಗೆ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ, ಕುಂದುಕೊರತೆ ಪರಿಶೀಲನೆ