Site icon Vistara News

Divorce Case: ಮುರಿದ ಮನಸ್ಸಿಗೆ ಲೋಕ್ ಅದಾಲತ್‌ನ ಬೆಸುಗೆ; ದೂರಾಗಲು ಬಂದ ನಾಲ್ಕು ಜೋಡಿಗಳು ಒಂದಾದವು!

Divorce Case

#image_title

ಕೊಪ್ಪಳ: ʻನಾನೊಂದು ತೀರ ನೀನೊಂದು ತೀರʼ ಎನ್ನುತ್ತಿದ್ದವರು ಲೋಕ ಅದಾಲತ್‌ನಿಂದಾಗಿ ಹತ್ತಿರವಾಗಿದ್ದಾರೆ. ಇಲ್ಲಿನ ಗಂಗಾವತಿಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ (Divorce Case) ಅರ್ಜಿ ಸಲ್ಲಿಸಿದ್ದವರ ಪ್ರಕರಣವು ಸುಖಾಂತ್ಯಗೊಂಡಿದೆ.

ಸಣ್ಣ ಪುಟ್ಟ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ನಾಲ್ಕು ಜೋಡಿಗಳು ಮತ್ತೆ ಒಂದಾಗಿದ್ದಾರೆ. ಮುರಿದ ಮನಸ್ಸುಗಳಿಗೆ ಲೋಕ್‌ ಅದಾಲತ್‌ನಲ್ಲಿ ಬೆಸುಗೆ ಹಾಕಲಾಗಿದೆ. ದೂರಾಗಲು ಬಂದವರು ಒಂದಾಗಿದ್ದಾರೆ. ಕೋರ್ಟ್‌ ಹಾಲ್‌ನಲ್ಲಿ ದ್ಯಾವಣ್ಣ ‌ನಾಯಕ-ಅನಸೂಯ, ವೀರೇಶ- ಜಾನಕಮ್ಮ, ಶ್ರೀನಿವಾಸ – ತುಳಸಿದೇವಿ, ನಿಂಗಪ್ಪ- ಮಮತಾ ಮತ್ತೆ ಒಂದಾಗಿದ್ದಾರೆ.

ದೇವರ ತೀರ್ಮಾನ ಮುರಿಯಲು ನಾವ್ಯಾರು?

ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ, ದೇವರು ಮಾಡಿದ ತೀರ್ಮಾನವನ್ನು ಮುರಿಯಲು ನಾವ್ಯಾರು ಎಂದು ಲೋಕ್‌ ಅದಾಲತ್‌ನಲ್ಲಿ ನ್ಯಾಯಾಧೀಶರು ದಂಪತಿ ಮನವೊಲಿಸಿದರು. ಇಬ್ಬರ ವಿಚ್ಛೇದನದಿಂದ ನಿಮ್ಮ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಯೋಚಿಸಬೇಕು. ನೀವಿಬ್ಬರೂ ಸುಖವಾಗಿದ್ದರೆ ನಿಮ್ಮ ಮಕ್ಕಳ ಭವಿಷ್ಯವೂ ಉಜ್ವಲವಾಗುತ್ತದೆ. ತಪ್ಪು ಆಗುವುದು ಸಹಜ ಒಬ್ಬರಿಗೊಬ್ಬರು ಆಸರೆ ಆಗಿ ಇರುವಂತೆ ಕೇಳಿಕೊಂಡರು.

ಇದನ್ನೂ ಓದಿ: Samantha: ಸಮಂತಾ ಅಭಿನಯದ ಪೌರಾಣಿಕ ಚಿತ್ರ ʻಶಾಕುಂತಲಂʼ ಬಿಡುಗಡೆ ದಿನಾಂಕ ಬದಲಾವಣೆ

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಂದಾಗಿ ಇರಲು ಒಪ್ಪಿದ ಜೋಡಿಗಳು ನ್ಯಾಯಾಲಯದಲ್ಲೇ ಹಾರ ಬದಲಾಯಿಸಿ, ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದರು. ನಾಲ್ಕು ಜೋಡಿಗಳಿಗೆ ಚಪ್ಪಾಳೆಯ ಮಳೆ ಸುರಿಸಿದರು.

Exit mobile version