ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ನನಗೆ ಸರಿಸಮಾನರಾದವರು ಇರಬೇಕು ಎಂದು ಈ ಮೊದಲೇ ಹೇಳಿದ್ದೇನೆ. ಸಿ ಟಿ ರವಿ ಜತೆ ಚರ್ಚೆ ಮಾಡಬೇಕೋ, ಬಿಜೆಪಿ ರಾಜ್ಯ ಅಧ್ಯಕ್ಷ, ಮುಖ್ಯಮಂತ್ರಿ ಅಥವಾ ಮಾಜಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಬೇಕೋ ಎಂಬುದಕ್ಕೆ ಸಮಯ ಕೊಡುತ್ತೇನೆ. ಐ ಆ್ಯಮ್ ನಾಟ್ ಗೋ ಬ್ಯಾಕ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸಿ.ಟಿ.ರವಿ ಹೇಳಿಕೆಗೆ ಸೋಮವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ “”ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧದ ಕೇಸ್ ಮುಚ್ಚಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಹೇಗೆ ಬಿ ರಿಪೋರ್ಟ್ ಹಾಕುತ್ತಾರೆ? ಸರ್ಕಾರನೇ ಕೇಸ್ ಮುಚ್ಚಿ ಹಾಕಲು ಪ್ರಾರಂಭದಿಂದ ಪ್ಲ್ಯಾನ್ ಮಾಡಿತ್ತು. ಹಾಗಾಗಿಯೇ ಸಿದ್ದರಾಮಯ್ಯ ಅವರು ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ ಎಂದು ಕಿಡಿಕಾರಿದರು.
ಇದನ್ನೂ ಓದಿ | ಎಂಟೊಂಬತ್ತು ತಿಂಗಳಲ್ಲಿ ಬಿಜೆಪಿ ಬಾವುಟ ಇಳಿಯುತ್ತೆ, ಕಾಂಗ್ರೆಸ್ ಬಾವುಟ ಏರುತ್ತೆ: ಡಿ.ಕೆ.ಶಿವಕುಮಾರ್
ಬೇರೆ ಇಲಾಖೆಯಲ್ಲೂ ಭ್ರಷ್ಟಾಚಾರ ಆಗಿದೆ. ಅನೇಕ ಜನರು ಈ ಬಗ್ಗೆ ಅರ್ಜಿ ಬರೆದಿದ್ದಾರೆ. ಅದನ್ನು ಬಿಟ್ಟು ಸರ್ಕಾರ ಪ್ರಕರಣಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಒತ್ತಡ ಹಾಕಿ ಬಿ ರಿಪೋರ್ಟ್ ಬರೆಸಿದ್ದಾರೆ. ನಾವು ಕಾನೂನಿನ ತಜ್ಞರು ಜತೆ ಚರ್ಚೆ ಮಾಡಿದ್ದೇವೆ. ಮೊದಲು ಎಸಿಬಿ ಭ್ರಷ್ಟಾಚಾರದ ಕೇಸ್ ದಾಖಲಿಸಬೇಕಿತ್ತು. ಅದನ್ನು ಮಾಡಿಲ್ಲ. ಹಾಗಾಗಿ ನಾವು ಹೋರಾಟ ಮುಂದುವರಿಸುತ್ತೇವೆʼʼ ಎಂದರು.
ಮೊದಲು ಕೋವಿಡ್ ಭ್ರಷ್ಟಾಚಾರ, 40% ಕಮಿಷನ್ ಬಗ್ಗೆ ಚರ್ಚೆ ಆಗಬೇಕು. ನಾನು ಇದರಿಂದ ಹಿಂದೆ ಸರಿಯುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಇದನ್ನೂ ಓದಿ | Siddaramaiah CM | ಶಾಸಕ ಜಮೀರ್ ಮೇಲೆ ಕ್ರಮಕ್ಕೆ ಮುಂದಾದರೇ ಡಿ.ಕೆ.ಶಿವಕುಮಾರ್?