Site icon Vistara News

Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್‌: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ

DK Shivakumar siddaramaiah in rajbhavan with governor

ಬೆಂಗಳೂರು: ಸಂಪುಟ ರಚನೆ ವೇಳೆಯಲ್ಲಿ ತಮ್ಮ ಆಪ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವಲ್ಲಿ ಹಾಗೂ ಸ್ವತಃ ಸಿಎಂ ಸ್ಥಾನ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಇದೀಗ ಖಾತೆ ಹಂಚಿಕೆ ವೇಳೆಗೆ ತಮ್ಮ ಕೈ ಮೇಲಾಗಿಸಿಕೊಂಡಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ 24 ನೂತನ ಸಚಿವರ ಪ್ರಮಾಣವಚನದ ಜತೆಗೆ ಇದೀಗ ಸಿದ್ದರಾಮಯ್ಯ ಸಂಪುಟದ ಎಲ್ಲ 34 ಸ್ಥಾನಗಳೂ ಭರ್ತಿಯಾಗಿವೆ. ಇವರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ಬೆಂಬಲಿಗರಾಗಿದ್ದು, ಡಿ.ಕೆ. ಶಿವಕುಮಾರ್‌ ಅವರಿಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಸಚಿವರಿಗೆ ಖಾತೆ ಹಂಚಿಕೆ ಆಗಿದ್ದು, ಎಂ.ಬಿ. ಪಾಟೀಲ್‌ ಅವರು ಪದೇಪದೆ ಕೇಳುತ್ತಿದ್ದ ಬೃಹತ್‌ ಮತ್ತು ಮಧ್ಯಮ ನೀರಾವರಿ ಖಾತೆಯನ್ನು ಪಡೆಯುವನ್ನು ಡಿ.ಕೆ. ಶಿವಕುಮಾರ್‌ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಬೆಂಬಲಿಗರಾದ ಕೆ.ಜೆ. ಜಾರ್ಜ್‌ ಅಥವಾ ಕೃಷ್ಣಬೈರೇಗೌಡ ಕೇಳುತ್ತಿದ್ದ ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಪಡೆದುಕೊಂಡಿದ್ದಾರೆ.

ಎಂ.ಬಿ. ಪಾಟೀಲ್‌ ಅವರಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕೆ.ಜೆ. ಜಾರ್ಜ್‌ ಅವರಿಗೆ ಇಂಧನ ಖಾತೆ ಲಭಿಸಿದೆ. ಸಿಎಂ ಹಾಗೂ ಡಿಸಿಎಂ ನಂತರದ ಸ್ಥಾನ ಎನ್ನಲಾಗುವ ಗೃಹ ಖಾತೆಯನ್ನು ಡಾ. ಜಿ. ಪರಮೇಶ್ವರ ಪಡೆದಿದ್ದಾರೆ. ಸಚಿವರ ಖಾತೆ ಹಂಚಿಕೆಗೆ ಸರ್ಕಾರ ಸಿದ್ಧಪಡಿಸಿಕೊಂಡಿರುವ ಪಟ್ಟಿ ಈ ಕೆಳಕಂಡಂತಿದೆ.

  1. ಸಿದ್ದರಾಮಯ್ಯ – ಹಣಕಾಸು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ ವಿಭಾಗ
  2. ಡಿ.ಕೆ. ಶಿವಕುಮಾರ್‌ – ಬೃಹತ್‌ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ
  3. ಡಾ. ಜಿ. ಪರಮೇಶ್ವರ್ – ಗೃಹ ಇಲಾಖೆ (ಗುಪ್ತಚರ ಹೊರತುಪಡಿಸಿ)
  4. ಎಚ್.ಕೆ ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಸಣ್ಣ ನೀರಾವರಿ
  5. ಕೆ.ಎಚ್‌. ಮುನಿಯಪ್ಪ- ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು
  6. ಕೆ.ಜೆ. ಜಾರ್ಜ್‌- ಇಂಧನ
  7. ಎಂ.ಬಿ. ಪಾಟೀಲ್ – ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಐಟಿಬಿಟಿ
  8. ರಾಮಲಿಂಗಾರೆಡ್ಡಿ-ಸಾರಿಗೆ
  9. ಸತೀಶ್‌ ಜಾರಕಿಹೊಳಿ-ಲೋಕೋಪಯೋಗಿ
  10. ಪ್ರಿಯಾಂಕ್‌ ಖರ್ಗೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
  11. ಬಿ.ಜಡ್‌. ಜಮೀರ್‌ ಅಹ್ಮದ್‌ ಖಾನ್‌- ವಸತಿ, ವಕ್ಫ್‌ ಹಾಗೂ ಅಲ್ಪಸಂಖ್ಯಾತ ಕಲ್ಯಾಣ
  12. ಕೃಷ್ಣ ಬೈರೇಗೌಡ-ಕಂದಾಯ ಇಲಾಖೆ (ವಕ್ಫ್‌ ಹೊರತುಪಡಿಸಿ)
  13. ದಿನೇಶ್‌ ಗುಂಡೂರಾವ್‌-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  14. ಎನ್‌. ಚೆಲುವರಾಯಸ್ವಾಮಿ- ಕೃಷಿ
  15. ಕೆ.ವೆಂಕಟೇಶ್‌-ಪಶು ಸಂಗೋಪನೆ ಮತ್ತು ರೇಷ್ಮೆ
  16. ಎಚ್‌.ಸಿ. ಮಹದೇವಪ್ಪ-ಸಮಾಜ ಕಲ್ಯಾಣ
  17. ಈಶ್ವರ ಖಂಡ್ರೆ- ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ
  18. ಕೆ.ಎನ್‌. ರಾಜಣ್ಣ-ಸಹಕಾರ
  19. ಶರಣಬಸಪ್ಪ ದರ್ಶನಾಪುರ-ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
  20. ಶಿವಾನಂದ ಪಾಟೀಲ- ಜವಳಿ, ಸಕ್ಕರೆ ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ(ಸಹಕಾರ ಇಲಾಖೆಯಿಂದ)
  21. ಆರ್‌.ಬಿ. ತಿಮ್ಮಾಪುರ-ಅಬಕಾರಿ ಮತ್ತು ಮುಜರಾಯಿ
  22. ಎಸ್‌.ಎಸ್‌. ಮಲ್ಲಿಕಾರ್ಜುನ- ಗಣಿ ಮತ್ತು ಭೂಗರ್ಭಶಾಸ್ತ್ರ, ತೋಟಗಾರಿಕೆ
  23. ಶಿವರಾಜ ತಂಗಡಗಿ- ಹಿಂದುಳಿದ ವರ್ಗ ಮತ್ತು ಪರಿಶೀಷ್ಟ ಪಂಗಡ ಕಲ್ಯಾಣ
  24. ಶರಣ ಪ್ರಕಾಶ ಪಾಟೀಲ್‌-ಉನ್ನತ ಶಿಕ್ಷಣ
  25. ಮಾಂಕಾಳು ವೈದ್ಯ- ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲಸಾರಿಗೆ
  26. ಲಕ್ಷ್ಮೀ ಹೆಬ್ಬಾಳ್ಕರ್‌-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ
  27. ರಹೀಂ ಖಾನ್‌-ಪೌರಾಡಳಿತ ಮತ್ತು ಹಜ್‌
  28. ಡಿ.ಸುಧಾಕರ್‌-ಮೂಲಸೌಕರ್ಯ ಅಭಿವೃದ್ಧಿ, ಯೋಜನೆ ಮತ್ತು ಸಾಂಖ್ಯಿಕ
  29. ಸಂತೋಷ್‌ ಲಾಡ್‌-ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ
  30. ಎನ್‌.ಎಸ್‌. ಬೋಸರಾಜು- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
  31. ಬೈರತಿ ಸುರೇಶ್‌-ನಗರಾಭಿವೃದ್ಧಿ ಹಾಗೂ ನಗರ ಯೋಜನೆ (ಬೆಂಗಳೂರು ನಗರಾಭಿವೃದ್ಧಿ ಹೊರತುಪಡಿಸಿ)
  32. ಮಧು ಬಂಗಾರಪ್ಪ-ಶಿಕ್ಷಣ
  33. ಡಾ. ಎಂ.ಸಿ. ಸುಧಾಕರ್‌-ವೈದ್ಯಕೀಯ ಶಿಕ್ಷಣ
  34. ಬಿ. ನಾಗೇಂದ್ರ- ಯುವಜನ ಸೇವೆ, ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ

ಇದನ್ನೂ ಓದಿ: Karnataka Cabinet expansion : 24 ನೂತನ ಸಚಿವರ ಸೇರ್ಪಡೆ: ಭರ್ತಿ ಸಂಪುಟದೊಂದಿಗೆ ಅಗ್ನಿ ಪರೀಕ್ಷೆಗಿಳಿದ ಸಿದ್ದರಾಮಯ್ಯ!

Exit mobile version