ಚಿಕ್ಕಮಗಳೂರು: ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವನು. ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತೆ. ಆತರ ಪೋಸ್ಟರ್ ಪ್ರಿಪೇರ್ ಮಾಡಿಸುವುದು ಬಿಟ್ಟು ದೇವರದ್ದು ಹಾಕಿಸುತ್ತಾನಾ? ನಾನು ಆ ಜೀವನ ಮಾಡಿಕೊಂಡು ಬಂದಿಲ್ಲ. ಆದರೆ ಅವರು ಅದನ್ನೇ ಮುಂದುವರೆಸುತ್ತಿದ್ದಾರೆ, ಅವರು ಬಂದಿರುವುದೇ ಆ ಸಂಸ್ಕೃತಿಯಲ್ಲಿ, ಅಂತವರನ್ನು ಈ ರಾಜ್ಯದ ಜನ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಡಿಕೆಶಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಕಚೇರಿ ಮೇಲೆ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೊಡ್ಡ ಆಲದಹಳ್ಳಿಯ ಸಾತನೂರಿನಲ್ಲಿ 2 ಟೆಂಟ್ ಇದ್ದವಲ್ಲ, ಮಲಯಾಳಿ ಸಿನಿಮಾಗೆ ಕಟಿಂಗ್ ಸೇರಿಸೋರಲ್ಲ, ನಾನು ಆ ಜೀವನ ಮಾಡಿಕೊಂಡು ಬಂದಿಲ್ಲ. ಇಂದು ಅಂತವರಿಗೆ ಅಧಿಕಾರ ನೀಡಿದ್ದಾರೆ. ಅವರ ಜೀವನ, ಸಂಸ್ಕೃತಿ, ಬದುಕೇ ಅಷ್ಟು… ಏನು ಮಾಡೋದು… ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | HDK Vs Siddaramaiah : ನೀವು ಸಿಎಮ್ಮಾ, ಟೆಲಿಫೋನ್ ಆಪರೇಟರಾ? ; ಸಿಎಂಗೆ HDK ಪ್ರಹಾರ
ಸರ್ಕಾರ ಬಂದು 6 ತಿಂಗಳಾಗಿದೆ. ಗ್ಯಾರಂಟಿ ಹಿನ್ನೆಲೆಯಲ್ಲಿ ಅಚ್ಚರಿ ಫಲಿತಾಂಶ ನೀಡಿದ್ದರು. ಈಗಲೂ ಸಿಎಂ, ಡಿಸಿಎಂ ಬೇರೆ ಪಕ್ಷದ ಪ್ರಮುಖರನ್ನು ಅವರ ಪಕ್ಷಕ್ಕೆ ಸೆಳೆಯಲು ಶ್ರಮಿಸಿದ್ದಾರೆ. ಸರ್ಕಾರಕ್ಕೆ 136 ಸ್ಥಾನ ಇದೆ, ಬಲಹೀನತೆ ಇಲ್ಲ. ನಾಡಿನ ಜನ ಶಕ್ತಿ ತುಂಬಿದ್ದಾರೆ. ಬರ ಇದೆ, ರೈತರ ಬೆಳೆ ನಾಶದ ಮೌಲ್ಯದ ಪ್ರಮಾಣ 33, 700 ಕೋಟಿ ಅಂತ ನೀವೇ ಹೇಳ್ತೀರಾ, ಆದರೆ, 17 ಸಾವಿರ ಕೋಟಿ ಪರಿಹಾರ ಕೇಳಿದ್ದೀರಾ? ಇಂತಹ ಕಷ್ಟದ ಸ್ಥಿತಿಯಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವುದು ಸರ್ಕಾರದ ಕೆಲಸ ಎಂದು ಹೇಳಿದರು.
ಯತೀಂದ್ರ ಸಿದ್ದರಾಮಯ್ಯ ವಿಡಿಯೊ ಬಗ್ಗೆ ಮಾತನಾಡಿ, ಹಲೋ ಅಪ್ಪ… ಅವರ ಶ್ರಮ ನೋಡುತ್ತಿದ್ದೇನೆ. ಇವತ್ತು ಮಾತಾಡಲ್ಲ, ಎಲ್ಲಾ ಕ್ರಿಕೆಟ್ ನೋಡುತ್ತಿದ್ದಾರೆ. 2 ದಿನದಿಂದ ಅವರ ಗೋಳಾಟ ನೋಡಿದ್ದೇನೆ. ನಿಮ್ಮ ಮಗ ರಾಜಕೀಯ ಮಾಡಲಿ, ನೋ ಪ್ರಾಬ್ಲಂ. ಆಶ್ರಯ ಕಮಿಟಿ ಅಧ್ಯಕ್ಷನಿಂದ ಕೆಡಿಪಿ ಮೀಟಿಂಗ್‌ಗೆ ಅವಕಾಶ ಇದೆಯೇ? ಜನಸಂಪರ್ಕ ಸಭೆಯಲ್ಲಿ ಆಶ್ರಯ ಕಮಿಟಿ ಅಧ್ಯಕ್ಷನಿಗೆ ಅಧಿಕಾರಿಗಳ ಕರೆದುಕೊಂಡು ಹೋಗಲು ಸಾಧ್ಯಾನಾ? ನಾನು 2 ಬಾರಿ ಸಿಎಂ, ನನ್ನ ಮಗನಿಗೆ ಕ್ಷೇತ್ರ ಬಿಟ್ಟಿದ್ನಾ ಎಂದು ಪ್ರಶ್ನಿಸಿದರು.
ವರ್ಷದಿಂದ ಜಿಪಂ, ತಾಪಂ ಚುನಾವಣೆ ನಡೆದಿಲ್ಲ. ಸಿಇಒ ನೇತೃತ್ವದಲ್ಲಿ ಅಧಿಕಾರ ನಡೆಯುತ್ತದೆ. ಯಾವ ಕಂಪನಿಯಿಂದ ಎಷ್ಟು ಬಂದಿದೆ ಎಂದು ಪಟ್ಟಿ ಇದೆಯಾ? ನಾನು ಕೇಳಿದ್ದೇನೆ, ಈಗ ಅದನ್ನೂ ಸಿದ್ಧ ಮಾಡಬೇಕು. ಗತಿಗೆಟ್ಟ ಸರ್ಕಾರವಾ ಇದು. ಶಾಲಾ ಕಟ್ಟಡ ರಿಪೇರಿಗೆ 2.50 ಲಕ್ಷ, ಇದು ಗತಿಗೆಟ್ಟ ಸರ್ಕಾರ. ಅದಿವೇಶನದಲ್ಲಿ ಇದರ ಬಗ್ಗೆ ಧ್ವನಿ ಎತ್ತುತ್ತೇನೆ ಎಂದರು.
ಸಿಎಸ್‌ಆರ್ ಫಂಡ್ ಬಗ್ಗೆ ಪ್ರತಿಕ್ರಿಯಿಸಿ, ನೀವು ಯಾವ ಲಾಯರ್ ಗಿರಿ ಮಾಡಿದ್ದೀರಿ, ಕೆದಕಬೇಡಿ. ಸಿಂಹ ಒಬ್ಬಂಟಿಯಾಗೇ ಯುದ್ಧ ಮಾಡುವುದು. ಡ್ಯಾಶ್….ಡ್ಯಾಶ್….ಡ್ಯಾಶ್…. ಎಂದು ಹೇಳಿದ್ದೇನೆ. ಆ ಡ್ಯಾಶ್ ಏನೆಂದು ಅರ್ಥ ಆಗುತ್ತೆ ಎಂದ ಅವರು, ನನ್ನನ್ನು ಕರೆಂಟ್ ಕಳ್ಳ…ಕಳ್ಳ… ಎಂದರು. ನೀವು ದರೋಡೆ ಮಾಡಿಕೊಂಡು ಕೂತಿದ್ದೀರಾ? ಕೂಲಿ ಮಾಡುವನು ತಿಳಿಯದೆ ಮಾಡಿದ್ದಾನೆ. ನನಗೆ ಗೊತ್ತಿಲ್ಲ ಅನ್ನಬಹುದಿತ್ತು, ಶೋಭಾ ಅಪಾರ್ಟ್‌ಮೆಂಟ್ ಕಟ್ಟಿದ್ದಾರೆ. ರಾಜೇಂದ್ರ ಚೋಳನ್ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಇದ್ದ. ಅದಕ್ಕೆ ಆರು ತಿಂಗಳಲ್ಲಿ ಎಷ್ಟು ಬಿಲ್ ಬಂತು ಕೇಳಿ, ಆತ ಬೆಸ್ಕಾಂ ಎಂ.ಡಿ. ಆಗಿದ್ದ, ನಿದ್ದೆಗೆಡುತ್ತಿರುವವರು ನೀವು, ನಿಮಗೆ ಮಾನಸಿಕ ನೆಮ್ಮದಿ ಇಲ್ಲ. ನಾನು ಆರಾಮಾಗಿದ್ದೇನೆ ಎಂದು ಕಿಡಿಕಾರಿದರು.
ದತ್ತ ಮಾಲೆ ಹಾಕ್ತೀನಿ
ನಮ್ಮ ಧರ್ಮದ ಧರ್ಮಾಭಿಮಾನಕ್ಕೆ ನಾನು ಭಯ ಪಡುತ್ತೀನಾ? ಹಾಕೋ ಸಮಯ ಬಂದ್ರೆ ದತ್ತ ಮಾಲೆಯನ್ನು ಹಾಕುತ್ತೀನಿ. ದತ್ತಮಾಲೆ ಏಕೆ ಹಾಕಬಾರದು? ದೇವರ ಕಾರ್ಯಕ್ರಮ, ಹಾಕುವ ಸಮಯ ಬಂದ್ರೆ ಹಾಕ್ತೀನಿ. ಅದು ಕಾನೂನು ಬಾಹಿರವಾಗಿ ಅಲ್ಲ… ಕಾನೂನು ಬಾಹಿರವಾಗಿ ಯಾವುದನ್ನೂ ಮಾಡಲ್ಲ. ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ | ಪ್ರಜಾಪ್ರಭುತ್ವ, ಸಂವಿಧಾನ ರಕ್ಷಿಸುವುದೇ ಮಹನೀಯರಿಗೆ ಸಲ್ಲಿಸುವ ಗೌರವ: ಸಿಎಂ
ಕಾಂಗ್ರೆಸ್ಸಿಗರಿಗೆ ಜಾತ್ಯಾತೀತತೆ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ
ಜಾತ್ಯತೀತತೆ ಅಂದ್ರೆ ಏನು? ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ, ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈಮುಗೀಬೇಕು. ಇದು ಜಾತ್ಯಾತೀತತೇನಾ? ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ಯೋಗ್ಯತೆ ಇದೆ ಎಂದು ವಾಗ್ದಾಳಿ ನಡೆಸಿದರು.