ಧಾರವಾಡ: ಭಯೋತ್ಪಾದಕರಿಗೆ ಪೂರಕವಾಗಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧ. ಹೀಗೆ ವೋಟಿಗಾಗಿ ಹೇಳಿಕೆ ನೀಡುವುದು ದೇಶಕ್ಕೆ ಅಪಾಯಕಾರಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಹೇಳಿಕೆಯನ್ನು ಶ್ರೀರಾಮ ಸೇನೆ ಸಂಘಟನೆ ವಿರೋಧಿಸುತ್ತದೆ. ಮುಸ್ಲಿಂ ವೋಟಿಗಾಗಿ ಕಾಂಗ್ರೆಸ್ ತುಷ್ಟೀಕರಣ ಮಾಡಿದ ಪರಿಣಾಮ ಇಡೀ ದೇಶದಲ್ಲಿ ಕಸದ ಬುಟ್ಟಿಯಲ್ಲಿ ಬಿದ್ದಿದೆ. ಆದರೂ ಇವರಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಟೆರರಿಸ್ಟ್‌ಗಳ ಬಗ್ಗೆ ಪುಲ್ವಾಮಾ ಹಾಗೂ ಮುಂಬೈ ದಾಳಿ ಹೇಳಿಕೆ ಸರಿಯಲ್ಲ. ನೂರಾರು ಜನರ ಸಾವು ಆಗಬೇಕಾ? ರಕ್ತ ಹರಿಯಬೇಕಾ, ಹೆಣಗಳು ಬಿಳಬೇಕಾ ಎಂದಿರುವ ಮುತಾಲಿಕ್, ಪೊಲೀಸ್ ಇಲಾಖೆ ಆತನನ್ನು ಬಂಧಿಸಿ ಅನಾಹುತ ತಪ್ಪಿಸಿದ್ದಾರೆ. ಡಿ.ಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ದೇಶಕ್ಕೆ ಕ್ಷಮೆ ಕೇಳಬೇಕು. ದೇಶಕ್ಕೆ ಸುರಕ್ಷತೆ ಮುಖ್ಯವಷ್ಟೇ ಹೊರತು ನಿಮ್ಮ ರಾಜಕಾರಣ ಅಲ್ಲ. ಹೇಳಿಕೆ ವಾಪಸ್ ಪಡೆಯದೇ ಇದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಮುತಾಲಿಕ್ ತಿಳಿಸಿದ್ದಾರೆ.
ಇದನ್ನೂ ಓದಿ | Corruption Politics | ಸಿಎಂ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ʼದಮ್ʼ ಪಾಲಿಟಿಕ್ಸ್; ಈಗ ಡಿಕೆಶಿ ಚಾಲೆಂಜ್!