Site icon Vistara News

Mandya News: ತಂಗಿಯ ಮನೆಗೆ ಭೇಟಿ ಕೊಟ್ಟ ಬಳಿಕ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ವೈದ್ಯ

Mandya Doctor Dies by Suicide

#image_title

ಮಂಡ್ಯ: ಇಲ್ಲಿನ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ಜೂ.1ರಂದು ವೈದ್ಯರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ (Doctor Suicide) ಮಾಡಿಕೊಂಡಿದ್ದಾರೆ. 57ವರ್ಷದ ಡಾ.ವೇಣುಗೋಪಾಲ್ ಮೃತಪಟ್ಟಿದ್ದು, ಇವರು ಮಂಡ್ಯದ ಸಾಂಜೋ ಆಸ್ಪತ್ರೆಯಲ್ಲಿ ಸರ್ಜನ್​ ಆಗಿದ್ದರು. ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ತಮ್ಮ ವೃತ್ತಿಯಲ್ಲಿ ಸೈ ಎನ್ನಿಸಿಕೊಂಡಿದ್ದ ಡಾ. ವೇಣುಗೋಪಾಲ್​ ನಿನ್ನೆ ಕೂಡ ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿ, ಮೈಸೂರಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೆ ಮೈಸೂರಿಗೆ ಹೋಗದೆ ಮದ್ದೂರು ತಾಲೂಕಿನ ಕುದುರಗುಂಡಿ ಬಳಿ ಕೆರೆಯ ಸಮೀಪ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋದರಿ ಸಾವಿನಿಂದ ಕುಗ್ಗಿದ್ದರು
ಡಾ. ವೇಣುಗೋಪಾಲ್ ಅವರಿಗೆ ಬೇರೆ ಏನಾದರೂ ಆರೋಗ್ಯ ಸಮಸ್ಯೆಯಿತ್ತಾ ಎಂಬುದು ಗೊತ್ತಾಗಿಲ್ಲ. ಆದರೆ ಮಾನಸಿಕವಾಗಿ ತುಂಬ ಬಳಲಿದ್ದರು. ಕಳೆದ ವರ್ಷ ಇವರ ತಂಗಿ ಗಾಯತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಗಿನಿಂದಲೂ ಡಾ. ವೇಣುಗೋಪಾಲ್​ ದುಃಖದಲ್ಲೇ ಇದ್ದು, ಖಿನ್ನತೆಗೆ ಒಳಗಾಗಿದ್ದರು. ಮೂರು ದಿನಗಳ ಹಿಂದೆ ತಂಗಿ ಗಾಯತ್ರಿಯ ವರ್ಷದ ತಿಥಿಯಿತ್ತು. ಅಂದು ವೇಣುಗೋಪಾಲ್ ಅವರು ತಮ್ಮ ಸೋದರಿಯ ಸಮಾಧಿ ಪಕ್ಕ ಕುಳಿತು ಅತ್ತಿದ್ದರು. ನಿನ್ನೆ ಆಸ್ಪತ್ರೆಯಿಂದ ನೇರವಾಗಿ ಮೈಸೂರಿಗೆ ಹೋಗುವ ಮೊದಲು ಕುದುರುಗುಂಡಿಯಲ್ಲಿರುವ ತಂಗಿ ಮನೆಗೆ ಹೋಗಿದ್ದರು. ಆ ಮನೆಯಿಂದ ಹೊರಬಿದ್ದವರು ಸಮೀಪದ ಕೆರೆಯ ಬಳಿ ಹೋಗಿ, ಅಲ್ಲೇ ಗದ್ದೆಯಲ್ಲಿ ನೇಣುಬಿಗಿದುಕೊಂಡಿದ್ದಾರೆ. ಇವರ ಶವ ಪರೀಕ್ಷೆ ನಡೆಸಲಾಗುತ್ತಿದೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಹಿಳೆಯರಿಗೆ ಆಪರೇಶನ್​ ಮಾಡಲು ಬಂದು, ಬೆಡ್​ ಮೇಲೆ ಮಲಗಿದ ವೈದ್ಯ; ಸ್ಥಳೀಯರ ಆಕ್ರೋಶ

Exit mobile version