Site icon Vistara News

HD Revanna: ಡಿ.ಕೆ. ಶಿವಕುಮಾರ್‌ಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ?; ಹಿಗ್ಗಾಮುಗ್ಗಾ ಜಾಡಿಸಿದ ಎಚ್.ಡಿ. ರೇವಣ್ಣ

Does DK Shivakumar have any shame dignity says HD Revanna

ಹಾಸನ: ನನ್ನ ಮನೆಗೆ ಅನುಕೂಲ ಆಗಲಿ ಅಂತ ಫ್ಲೈ ಓವರ್ ಮಾಡಿಕೊಂಡಿಲ್ಲ. ಡಿ.ಕೆ. ಶಿವಕುಮಾರ್‌ಗೆ ಯಾವನಾದ್ರು ಕಾಂಗ್ರೆಸ್ ಅಧ್ಯಕ್ಷ ಅಂತಾನಾ? ನಾಚಿಕೆಯಾಗಬೇಕು. ಅವನಿಗೆ ಗೌರವ ಇದ್ದರೆ ಬಂದು ಸರಿಯಾಗಿ ನೋಡಲಿ. ಅವನ ಯೋಗ್ಯತೆಯೇ ಇಷ್ಟು. ಯಾರ‍್ರೀ ಇವನು ಡಿಕೆ? ಯಾವ ಮುಖ ಇಟ್ಟುಕೊಂಡು ಇಲ್ಲಿಗೆ ಬಂದು ಮತ ಕೇಳುತ್ತಾನೆ. ಐದು ವರ್ಷ ಅವರ ಸರ್ಕಾರ ಇತ್ತಲ್ಲ ಹಾಸನದ ಒಂದು ಫ್ಲೈ ಓವರ್ ಮಾಡಲು ಆಗಲಿಲ್ಲ. ಈಗ ನನ್ನ ಮನೆಗೆ ಫ್ಲೈ ಓವರ್ ಎಂದೆಲ್ಲ ಮಾತನಾಡುತ್ತಿದ್ದಾನೆ. ಅವನೇನು ನನ್ನ ಜಮೀನಿಗೆ ವಾಲ್ ಕಟ್ಟಲು ಹೋಗಿದ್ದನಾ ಎಂದು ಡಿಕೆ ಬ್ರದರ್ಸ್‌ಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಏಕವಚನದಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಡಿ.ಕೆ. ಶಿವಕುಮಾರ್‌ಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಆಗ ಬೆಳಗ್ಗೆ ಎದ್ದ ಕೂಡಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ದರ್ಶನ ಮಾಡುತ್ತಿದ್ದವರು ಯಾರು? ಒಂದು ರೂಪಾಯಿಯನ್ನೂ ಮುಟ್ಟಲ್ಲ ಎನ್ನುವ ಈ ಗಿರಾಕಿಗಳು ಅದನ್ನು ದೇವರ ಮುಂದೆ ಹೇಳಲಿ. ಆ ಮಂಜುನಾಥ ಸ್ವಾಮಿ ಮುಂದೆ ಹೋಗಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: Aditi Budhathoki : ಯಾರು ಈ ನೇಪಾಳಿ ಸುಂದರಿ, ಅದಿತಿ ಬುಧತೋಕಿ?

ದುದ್ದ-ಶಾಂತಿಗ್ರಾಮ ನೀರಾವರಿ ಯೋಜನೆ 400 ಕೋಟಿ ರೂಪಾಯಿಯಲ್ಲಿ ಮಾಡಿದ್ದೇನೆ. ಹೋಗಿ ಆ ಗುತ್ತಿಗೆದಾರನನ್ನು ಕೇಳಲಿ. ಶ್ರೀರಾಮದೇವರ ಡ್ಯಾಂ ಮಾಡಿದೆ. ಆ ಗುತ್ತಿಗೆದಾರ ನನಗೆ ಕಾಫಿ ಕುಡಿಸಿದ್ದೇನೆ ಎಂದರೂ ನಾನು ಇಂದು ರಾಜಕೀಯ ಬಿಟ್ಟು ಹೋಗುತ್ತೇನೆ. ಇವನಿಂದ ನಾನು ಕಲಿಯಬೇಕಾ? ಎಂದು ಏಕವಚನದಲ್ಲಿಯೇ ರೇವಣ್ಣ ಹರಿಹಾಯ್ದರು.

ಹಾಸನ ಐಐಟಿಯನ್ನು ಹಾಳು ಮಾಡಿದರು. ಕೆಪಿಸಿಸಿ ಅಧ್ಯಕ್ಷನಿಗೆ ಮಾನ ಮರ್ಯಾದೆ ಇದ್ದರೆ ಕೋಲಾರದಲ್ಲಿ ದಲಿತ ಮುಖಂಡ ಕೆ.ಎಚ್.‌ ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು? ಮುನಿಯಪ್ಪ ಸೇರಿ ಇಬ್ಬರು ದಲಿತ ಮುಖಂಡರನ್ನು ಸೋಲಿಸಿದರು ಇವರಿಗೆ ಗೌರವ ಇದೆಯಾ? ಇನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸೋಲಿಸಿದ್ದು ಯಾರು? ಇಂದು ರಾಜ್ಯದಲ್ಲಿ ಹದಿನೇಳು ಜನ ಶಾಸಕರು ಬಿಜೆಪಿಗೆ ಹೋಗಿರುವುದರಲ್ಲಿ ಇವರ ಪಾತ್ರವೂ ಇದೆ. ಈ ಡಿ.ಕೆ. ಶಿವಕುಮಾರ್‌ ಬಾಲ ಬಿಚ್ಚದೆ, ಗೌರವದಲ್ಲಿ ಯಾತ್ರೆ ಮಾಡಿಕೊಂಡು ಹೋಗಲಿ ಎಂದು ಎಚ್.ಡಿ. ರೇವಣ್ಣ ತಾಕೀತು ಮಾಡಿದರು.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಬ್ಬ ದೃತರಾಷ್ಟ್ರನನ್ನು ಪಕ್ಕದಲ್ಲಿ ಇಟ್ಟುಕೊಂಡಿದ್ದರು. ಕುಮಾರಣ್ಣ ಸರಿಯಾದ ರೀತಿ ಒಬ್ಬ ರಾಮನನ್ನು ಇಟ್ಟುಕೊಂಡಿದ್ದರೆ ಏನೂ ಆಗುತ್ತಿರಲಿಲ್ಲ. ದೃತರಾಷ್ಟ್ರನ ಇಟ್ಟುಕೊಂಡಿದ್ದರ ಪರಿಣಾಮ ಹದಿನೇಳು ಮಂದಿ ಖಾಲಿಯಾಗಿ, ಇವರನ್ನೂ ಖಾಲಿ ಮಾಡಿಸಿದರು. ಕುಮಾರಣ್ಣ ಪಾಪ ಒಳ್ಳೆಯ ಮನುಷ್ಯ. ಆದರೆ, ಅವರಿಗೆ ಹೀಗಾಯಿತು ಎಂದು ಡಿ.ಕೆ. ಶಿವಕುಮಾರ್‌ ಸಹೋದರರ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಹರಿಹಾಯ್ದರು. ಆದರೆ, ದೃತರಾಷ್ಟ್ರ ಯಾರು ಅಂತ ಅವರೇ ಹೇಳಬೇಕಾಗುತ್ತದೆ ಎಂದೂ ಹೇಳಿದರು.

ಇದನ್ನೂ ಓದಿ: HD Kumaraswamy : ಪ್ರಜಾಧ್ವನಿ ಎಂದರೆ 500 ರೂ. ಕೊಟ್ಟು ಜನ ಸೇರ್ಸೋದಲ್ಲ, ಹಳ್ಳಿಗಳಿಗೆ ಹೋಗಿ ಎಂದ ಎಚ್‌ಡಿ ಕುಮಾರಸ್ವಾಮಿ

ದೇವೇಗೌಡರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ- ಡಿಕೆಶಿಗೆ ಗುಡುಗು

ಹಾಸನಕ್ಕೆ ಬಂದ ಡಿ.ಕೆ. ಶಿವಕುಮಾರ್‌, ಈಗ ಎ ಟೀಂ, ಬಿ ಟೀಂ ಎಂದು ಹೇಳಿದರು. ಆದರೆ, ಅಂದು ಅಲ್ಲಿಗೆ ಬಂದು ದೇವೇಗೌಡರೇ, ಕುಮಾರಣ್ಣ ಅವರೇ ನಿಮ್ಮ ಪಾದಕ್ಕೆ ಐದು ವರ್ಷ ಇಟ್ಟಿದ್ದೇವೆ. ನಿಮ್ಮ ಪಾದಗಳನ್ನು ತೊಳೆಯುತ್ತೇವೆ ಎಂದು ಹೇಳಿ ಪಾದಕ್ಕೆ ಕೈಯಿಟ್ಟರು. ಆಮೇಲೆ ಎಂಪಿ ಎಲೆಕ್ಷನ್‌ನಲ್ಲಿ ನಿಮ್ಮ ಪಾದವನ್ನು ತೊಳೆಯಲು ನಮಗೆ ಟೈಂ ಇಲ್ಲ, ನಾವು ಬಿಜೆಪಿ ಪಾದಗಳನ್ನು ತೊಳೆಯಲು ರೆಡಿ ಇದ್ದೇವೆ ಎಂದು ಹೇಳಿದ್ದು ಯಾರು ಸ್ವಾಮಿ? ತುಮಕೂರು ಜನರನ್ನು ಹೋಗಿ ಕೇಳಿ? ಬಸವರಾಜು ಅವರು ಹೇಳುತ್ತಾರೆ. ಕಾಂಗ್ರೆಸ್ ಪರಿಸ್ಥಿತಿ ಈ ರೀತಿ ಆಗುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಅವರು ದೇವೇಗೌಡರನ್ನು ತೆಗೆದರು. ಇನ್ನು ದೇವೇಗೌಡರು ಯಾವುದಾದರೂ ಹಗರಣದಲ್ಲಿ ಇದ್ದಾರಾ? ಇವತ್ತು ಪ್ರಧಾನಿ ನರೇಂದ್ರ ಮೋದಿಯವರೂ ಸಹ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ಆದರೆ, ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾತನಾಡುವಾಗ ಎಚ್ಚರವಿರಲಿ ಎಂದು ರೇವಣ್ಣ ಗುಡುಗಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಬುಧವಾರ (ಮಾ.1) ಹಾಸನಕ್ಕೆ ಪ್ರಚಾರಕ್ಕೆ ಬಂದಿದ್ದ ವೇಳೆ ನನಗೊಂದು ತಿಳಿವಳಿಕೆ ಹೇಳಿದ್ದಾರೆ. ಹೋಗುವುದು ಆರಡಿ, ಮೂರಡಿ ಎಂದು ಹೇಳಿದ್ದಾರೆ. ನಮಗೆ ಆರಡಿ ಬೇಡ ಇನ್ನೂ ಒಂದು ಅಡಿ ಕಡಿಮೆ ಆಗಲಿ. ನಮಗೆ ರಾತ್ರಿಯೆಲ್ಲ ನಿದ್ದೆ ಬರುತ್ತದೆ. ಈಗ ಕಾರು ಹತ್ತಿದರೆ ಬೆಂಗಳೂರುವರೆಗೂ ನಿದ್ದೆ ಮಾಡಿಕೊಂಡು ಹೋಗುತ್ತೇನೆ. ಯಾವ ಯೋಚನೆಯೂ ಇಲ್ಲ, ಆದರೆ, ಅವರಿಗೆ ಇನ್ನೊಂದು ಮೂರಡಿ ಜಾಸ್ತಿ ಇರಲಿ. ಏಕೆಂದರೆ ಅವರು ದಪ್ಪವಾಗಿದ್ದಾರೆ, ಉದ್ದವಾಗಿದ್ದಾರೆ. ಅವರು ಪಾಪ ಹೋಗುವಾಗ ಇನ್ನೂ ಎರಡು ಅಡಿ ಜಾಸ್ತಿ ತೆಗೆದುಕೊಳ್ಳಲಿ. ನಮಗೆ ಹೋಗುವಾದ ಒಂದು ಅಡಿ ಕಡಿಮೆ ಇರಲಿ ಇಲ್ಲವೇ ಕೆಲವು ಸ್ವಾಮಿಗಳನ್ನು ಮಂಡಿಯೂರಿ ಮಲಗಿಸುತ್ತಾರೆ. ಹಾಗಾಗಿ ನಮಗೆ ಎರಡು ಅಡಿ ಕಡಿಮೇನೆ ಕೊಡಿಸಿ ಸ್ವಾಮಿ ಜಾಗವಾ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದು ರೇವಣ್ಣ ತಿರುಗೇಟು ನೀಡಿದರು. ಹೊಳೆನರಸೀಪುರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ವೇಳೆ ಮಾತನಾಡಿದ್ದ ಡಿ.ಕೆ. ಶಿವಕುಮಾರ್‌, “ರೇವಣ್ಣ ಅವರೇ ಎಲ್ಲ ಅಧಿಕಾರ ನಮಗೆ ಬೇಕು ಅಂತಿರಾ. ಸತ್ತಾಗ ಆರಡಿ ಮೂರಡಿ ಜಾಗಕ್ಕೆ ಹೋಗೋದು” ಎಂದು ಹೇಳಿದ್ದರು.

ಆಣೆ, ಪ್ರಮಾಣದ ಬಗ್ಗೆ ರೇವಣ್ಣ ಹೇಳಿದ್ದೇನು; ವಿಡಿಯೊ ಇಲ್ಲಿದೆ

ನಾನು ಹೊಂದಾಣಿಕೆ ಮಾಡಿಕೊಂಡಿದ್ದರೆ ಸಾಬೀತು ಮಾಡಿ

ನಮ್ಮ ನಾಯಕರಾದಂತಹ ಶಾಸಕ ಎ.ಟಿ.ರಾಮಸ್ವಾಮಿ ಅವರು ತಮ್ಮ ಮಗನ ಮೇಲೆ ಕೇಸ್ ಹಾಕಿದ್ದ ಮಾಜಿ ಸಚಿವ ಎ. ಮಂಜು ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ನಾನು ಎ.ಮಂಜು ಜತೆ ಸಂಪರ್ಕದಲ್ಲಿಯೇ ಇರಲಿಲ್ಲ. ಒಂದು ವೇಳೆ ನಾನು ಮಂಜು ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎಂದು ಸಾಬೀತು ಮಾಡಿದರೆ ಹೇಳಿದ ಶಿಕ್ಷೆಗೆ ಗುರಿ ಆಗುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ‌ ಹೇಳಿದರು.

ಶಿವಲಿಂಗೇಗೌಡರ ಬಗ್ಗೆ ಎಚ್.ಡಿ. ರೇವಣ್ಣ ಹೇಳಿದ ಮಾತು ಇಲ್ಲಿದೆ

ಅವರು ಸೀನಿಯರ್ ಅಡ್ಬಕೇಟ್ ಅನ್ನು ನೇಮಿಸಿಕೊಂಡಿದ್ದಾರೆ. ಹೈಕೋರ್ಟ್‌ನಲ್ಲಿ ನಮ್ಮ ಪರವೇ ಆಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಅಡ್ವಕೇಟ್ ಬಾರದ ಕಾರಣ ರಿಮೆಂಟ್ ಆಯ್ತು. ಅದನ್ನು ಸ್ವಲ್ಪ ರಾಮಸ್ವಾಮಿ ಅವರು ಓದಿಕೊಳ್ಳಲಿ. ರಾಜಿ ಮಾಡಿಕೊಂಡರೆ ಕೇಸ್ ಹೇಗೆ ನಡೆಯುತ್ತಿದೆ? ನಮ್ಮ ಇಡೀ ಆಸ್ತಿಯನ್ನು ಐಟಿಗೆ ಕೊಟ್ಟಿದ್ದೇವೆ. ಜಾರಿ ನಿರ್ದೇಶನಾಲಯದ ಮೂಲಕವೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: Amit Shah in state : ಮಾ.3ರಂದು ಅಮಿತ್‌ ಶಾ ಆಗಮನ, ಏನೇನು ಕಾರ್ಯಕ್ರಮ, ಎಲ್ಲೆಲ್ಲ ಭೇಟಿ?

ಕಾಂಗ್ರೆಸ್‌ನವರ ಸಂಪರ್ಕದಲ್ಲಿದ್ದವರು ಯಾರು?

ಎ.ಟಿ. ರಾಮಸ್ವಾಮಿ ಅವರು ಎರಡು ವರ್ಷದಿಂದ ಯಾವ್ಯಾವ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದರು ಎಂಬುದನ್ನು ಹೇಳಲಿ. ಹಾಸನ, ಬೆಂಗಳೂರಿನಲ್ಲಿ ನಡೆದ ಜಲಧಾರೆ ಯಾತ್ರೆಗೆ ಯಾಕೆ ಬರಲಿಲ್ಲ? ಯಾವುದೋ ಒಂದು ನೆಪ‌ ಇಟ್ಟುಕೊಂಡು ಮಾತನಾಡುವುದಲ್ಲ. ಅವರಿಗೆ ಸೀಟ್ ಕೊಡದೆ ಒದ್ದು ಓಡಿಸಿದ್ದಕ್ಕೆ ನಿಮ್ಮ ಹತ್ರ ಬಂದರು ಅಂತ ಶಿವಲಿಂಗೇಗೌಡ್ರು ಹೇಳಿದ್ದಾರೆ. ಶಿವಲಿಂಗೇಗೌಡರ ಧರ್ಮಸ್ಥಳದ ಮೇಲೆ ಆಣೆ ಮಾಡಲಿ. ಕಟ್ಟು ಕಥೆ ಕಟ್ಟುತ್ತಿರುವ ಅವರಿಗೆ ದೇವರೇ ಶಿಕ್ಷೆ ಕೊಡ್ತಾನೆ. ಎ.ಮಂಜು ಜತೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ರೇವಣ್ಣ ಸ್ಪಷ್ಟೀಕರಣ ನೀಡಿದರು.

ಎ.ಮಂಜು ಅವರು ಪಕ್ಷಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಪಕ್ಷ ಇದನ್ನು ತೀರ್ಮಾನ ‌ಮಾಡುತ್ತದೆ. ಬರುತ್ತೇಣೆ ಅಂದರೆ ಬೇಡ ಅನ್ನಲು ಆಗುತ್ತದೆಯೇ? ಕೆಲವರು ಪಕ್ಷದೊಳಗೆ ಇದ್ದುಕೊಂಡು ಚೂರಿ ಹಾಕುತ್ತಿದ್ದಾರೆ. ನಾನು ಏನು ಮಾಡಲಿ? ಈ ತರಹ ಸುಳ್ಳು ಹೇಳುವುದು ಬೇಡ. ಅವರು ಹೋಗುತ್ತಿದ್ದಾರೆ ಹೋಗಲಿ, ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಕಾರ್ಯಕರ್ತರಿಗೆ ಪ್ರಚೋದನೆ ಕೊಟ್ಟರೆ ದೇವರೇ ನೋಡಕೊಳ್ಳಲಿ ಎಂದು ರೇವಣ್ಣ ಹೇಳಿದರು.

ಕಳೆದ ಹದಿನೈದು ವರ್ಷದಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಸಮೃದ್ಧಿಯಾಗಿದ್ದಾರೆ. ಹದಿನೈದು ವರ್ಷ ನಾವು ಅವರನ್ನು ಬೆಳೆಸಿದ್ದೇವೆ. ಅವರು ಹೇಳಿದ್ದ ಕೆಲಸವನ್ನೆಲ್ಲ ಮಾಡಿಕೊಟ್ಟಿದ್ದೇವೆ. ನಾನು ಪಕ್ಷ ಬಿಡಲ್ಲ ಎಂದು ಮೂರು ತಿಂಗಳ ಹಿಂದೆ ಕುಮಾರಸ್ವಾಮಿ ಮನೆಯಲ್ಲಿ ಹೇಳಿದ್ದರು. ಹೇಳಿಲ್ಲ ಎಂದು ಧರ್ಮಸ್ಥಳದ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡಲಿ ಎಂದು ರೇವಣ್ಣ ಸವಾಲು ಹಾಕಿದರು.

ಅಡ್ಜೆಸ್ಟ್‌ಮೆಂಟ್‌ ಬಗ್ಗೆ ರೇವಣ್ಣ ಮಾತನಾಡಿರುವ ವಿಡಿಯೊ ಇಲ್ಲಿದೆ

ಇದನ್ನೂ ಓದಿ: Pulse of Karnataka: ಮಧ್ಯ ಕರ್ನಾಟಕ: ವಿಸ್ತಾರ-ಅಖಾಡಾ ಸಮೀಕ್ಷೆ: ಸಿಎಂ ಬೊಮ್ಮಾಯಿ ತವರು ಪ್ರದೇಶದಲ್ಲಿ ಯಾರು ಹೆಚ್ಚು ಫೇಮಸ್‌?

ನಮಗೆ ದುಡ್ಡು ಕೊಟ್ಟು ಮತ ತೆಗೆದುಕೊಳ್ಳುವ ಶಕ್ತಿಯಿಲ್ಲ. ಅಲ್ಲಿ ಕೆಪಿಸಿಸಿ ಅಧ್ಯಕ್ಷರ ಖಜಾನೆ ಇದೆ. ಅರಸೀಕೆರೆಯಲ್ಲಿ ಬಿಜೆಪಿಯವನು ನಿಂತರೆ ನಾನು ಸೋಲುತ್ತೇನೆ. ಲಿಂಗಾಯತರೆಲ್ಲಾ ಒಂದು ಕಡೆ ಮತ ಹಾಕುತ್ತಾರೆ ಎಂದು ಶಿವಲಿಂಗೇಗೌಡ ಹೇಳಿದ್ದರು. ಆದರೆ, ಅರಸೀಕೆರೆ ಜನ ದುಡ್ಡಿಗೆ ಮತ ಹಾಕುತ್ತಾರಾ? ಹಾಗಾದ್ರೆ ಹದಿನೈದು ವರ್ಷದಿಂದ ಅರಸೀಕೆರೆ ಜನ ದುಡ್ಡಿಗೆ ಮತ ಹಾಕಿದ್ದಾರಾ ಎಂದು ಪ್ರಶ್ನೆ ಮಾಡಿದರು.

Exit mobile version