Site icon Vistara News

Dog Lovers: ಮನೆಯಲ್ಲಿ ನಾಯಿ ಇದೆಯೇ ಎಚ್ಚರ! ನಿಮ್ಮ ಹೊಟ್ಟೆಯಲ್ಲಿ ಬೆಳೆಯಲಿದೆ ವೈರಾಣುಗಡ್ಡೆ

pet lovers

ಬೆಂಗಳೂರು: ನಿಮ್ಮ ಮನೆಯಲ್ಲಿ ನಾಯಿ ಇದೆಯೇ? ಹಾಗಾದರೆ ಸ್ವಲ್ಪ ಅಲರ್ಟ್‌ ಆಗಿರಿ. ನೀವೂ ಸ್ವಲ್ಪ ಕೇರ್‌ಲೆಸ್‌ ಮಾಡಿದರೂ ಶ್ವಾನಕ್ಕೂ, ನಿಮ್ಮ ಪ್ರಾಣಕ್ಕೂ ಕುತ್ತು ಬರುವುದು ಗ್ಯಾರಂಟಿ. ನಿಮ್ಮ ಶ್ವಾನವನ್ನು (Dog Lovers) ಮುದ್ದು ಮಾಡುವ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಶ್ವಾನಗಳಿಂದಲೇ ಅಪಾಯಕಾರಿ ವೈರಾಣು ನಿಮ್ಮ ದೇಹ ಸೇರುತ್ತದೆ. ಹೀಗೆಂದು ವೈದ್ಯರು ವರದಿಯೊಂದನ್ನು ನೀಡಿದ್ದಾರೆ.

ಇತ್ತೀಚೆಗೆ ಶ್ವಾನಗಳನ್ನು ಸಾಕುವುದು ಟ್ರೆಂಡ್‌ ಆಗುತ್ತಿದೆ. ಹಿಂದೆಲ್ಲ ಮನೆಯ ಕಾವಲಿಗಾಗಿಷ್ಟೇ ಸಾಕುತ್ತಿದ್ದ ಶ್ವಾನವನ್ನು, ಈಗ ಮನೆಯ ಸದಸ್ಯನಂತೆ ನೋಡಿಕೊಳ್ಳುತ್ತಿದ್ದಾರೆ. ಶ್ವಾನವನ್ನು ಅತಿಯಾಗಿ ಪ್ರೀತಿಸುವ ಶ್ವಾನ ಪ್ರಿಯರಲ್ಲೀಗ ಭೀತಿಯೊಂದು ಹೆಚ್ಚಾಗಿದೆ. ಯಾಕೆಂದರೆ ಶ್ವಾನಗಳಿಂದ ಡೆಡ್ಲಿ ಡಿಸೀಸ್ ಹರಡುವ ಭೀತಿ ಶುರುವಾಗಿದೆ.

ಕೆಲವು ದಿನಗಳ ಹಿಂದೆ 10 ವರ್ಷದ ನೇಪಾಳಿ ಬಾಲಕಿಯೊಬ್ಬಳು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಪರೀಕ್ಷೆ ಮಾಡಿದಾಗ ಆಕೆಯ ಶ್ವಾಸಕೋಶದಲ್ಲಿ ಹುಳು ಪತ್ತೆಯಾಗಿತ್ತು. ಇದು ಆಕೆಯ ಮನೆಯಲ್ಲಿ ಸಾಕಿದ್ದ ಶ್ವಾನದಿಂದ ತಗುಲಿತ್ತು. ಶ್ವಾನಗಳಿಗೆ ತಗಲುವ ವರ್ಮ್ ಇನ್ಫೆಕ್ಷನ್ ಮಕ್ಕಳ ಆರೋಗ್ಯಕ್ಕೆ ಮಾರಕವಾಗಲಿದೆ.

ಲಾಡಿ ಹುಳು

ನಾಯಿಗಳಲ್ಲಿ ಬೆಳೆಯುವ ವೈರಾಣು ಹುಳುಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಶ್ವಾನಗಳಲ್ಲಿ ಟೇಪ್ ವರ್ಮ್ (ಲಾಡಿ ಹುಳು), ರಿಂಗ್ ವರ್ಮ್ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಸೋಂಕು ಬಂದ ಶ್ವಾನಗಳ ಸಂಪರ್ಕವನ್ನು ಮಾಡಿದವರಿಗೂ ಹರಡುತ್ತದೆ. ಮುಖ್ಯವಾಗಿ ಚಿಕ್ಕ ಮಕ್ಕಳಿಗೆ ಈ ರೋಗವು ಬಹುಬೇಗ ತಗಲುತ್ತಿದೆ.

ಇದನ್ನೂ ಓದಿ: Moral policing: ನೈತಿಕ ಪೊಲೀಸ್‌ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್: ಡಾ. ಜಿ. ಪರಮೇಶ್ವರ್

ಶ್ವಾನದ ಜತೆ ಆಟವಾಡಿದ್ದ ನೇಪಾಳಿ ಬಾಲಕಿಯೊಬ್ಬಳಿಗೆ ಈ ಸೋಂಕು ತಗುಲಿದೆ. ಹೀಗಾಗಿ ಟೆನ್ನಿಸ್ ಬಾಲ್ ಗಾತ್ರದ ಹುಳು ಗಡ್ಡೆಯೊಂದು ಬೆಳೆದು ಜೀವಕ್ಕೆ ಮಾರಕವಾಗಿತ್ತು. ಸದ್ಯ ಬಾಲಕಿಗೆ ಯಶಸ್ವಿ ಸರ್ಜರಿ ನಡೆಸಿರುವ ತಜ್ಞ ವೈದ್ಯ ಡಾ.ಅಶ್ವಿನಿ ಕುಮಾರ್ ಹೊಸ ಬದುಕು ನೀಡಿದ್ದಾರೆ. ಈ ಸೋಂಕು ಶ್ವಾನ ಹಾಗೂ ಕುರಿಗಳಿಂದ ಹೆಚ್ಚು ತಗಲುತ್ತದೆ. ಹೀಗಾಗಿ ನಾಯಿಗಳಲ್ಲಿ ಸೋಂಕು ಇದ್ದರೆ ತುಸು ಎಚ್ಚರಿಕೆಯಿಂದ ಇರಲು ವೈದ್ಯರು ಸಲಹೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version