ದಾವಣಗೆರೆ: ಭದ್ರಾವತಿ, ಶಿವಮೊಗ್ಗದಂತೆ ಈಗ ದಾವಣಗೆರೆಯಲ್ಲೂ ನಾಯಿಗಳ ಕಾಟ (Dog menace) ಮೇರೆ ಮೀರಿದೆ. ಜನರನ್ನು ಕಂಡ ಕೂಡಲೇ ರೊಚ್ಚಿಗೇಳುವ ನಾಯಿಗಳು ಕಂಡಕಂಡವರಿಗೆ ಕಚ್ಚುತ್ತಿವೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದಲ್ಲಂತೂ ಹುಚ್ಚು ನಾಯಿ ಕಾಟದಿಂದ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಅವರಿಗೆ ಇದ್ದದ್ದು ಒಂದೇ ದಾರಿ. ಅದುವೇ ನಾಯಿಯ ಮರ್ಡರ್. ಹೌದು ನಾಲ್ವರನ್ನು ಕಚ್ಚಿ ಗಾಯಗೊಳಿಸಿದ ನಾಯಿಯನ್ನು ಊರಿನ ಜನರು ಸೇರಿ ಹೊಡೆದೇ ಕೊಂದು ಹಾಕಿದ್ದಾರೆ.
ಈ ಹುಚ್ಚುನಾಯಿ ಕಾಕನೂರು ಗ್ರಾಮದ ಕೃತಿಕಾ, ಮೇಘನಾ, ರುದ್ರಪ್ಪ ಸೇರಿದಂತೆ ನಾಲ್ಕು ಜನರಿಗೆ ಕಚ್ಚಿ ಗಾಯಗೊಳಿಸತ್ತಿ. ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಲು ಮುಂದಾಗುತ್ತಿತ್ತು. ಹುಚ್ಚು ನಾಯಿ ಕಾಟದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ರೊಚ್ಚಿಗೆದ್ದ ಜನ ಹುಚ್ಚು ನಾಯಿಯನ್ನು ಹೊಡದು ಕೊಂದಿದ್ದಾರೆ. ಗ್ರಾಮದಲ್ಲಿ ಅಟ್ಟಿಸಿಕೊಂಡು ಹೋಗಿ ದೊಣ್ಣೆಯಿಂದ ಹೊಡೆದು ಸಾಯಿಸುವ ಮೂಲಕ ಈಗ ನೆಮ್ಮದಿಯ ವಾತಾವರಣ ಮೂಡಿದೆ.
ಇದನ್ನೂ ಓದಿ | Bangalore street dogs | ಬೆಂಗಳೂರಿನಲ್ಲಿ ದಿನಕ್ಕೆ 70 ಮಂದಿಗೆ ಬೀದಿ ನಾಯಿ ಕಡಿತ, ಮಕ್ಕಳೇ ಟಾರ್ಗೆಟ್!