Site icon Vistara News

Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!

Tomatto and Dog squads

ದಾವಣಗೆರೆ: ಹವಾಮಾನ ವೈಪರೀತ್ಯ, ಭಾರಿ ಮಳೆ ಹಿನ್ನೆಲೆಯಲ್ಲಿ ಈ ಬಾರಿ ಟೊಮ್ಯಾಟೊ ಇಳುವರಿಯಲ್ಲಿ ಏರುಪೇರಾಗಿದೆ. ಜತೆಗೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೊರತೆ ಇರುವ ಕಾರಣ ಬೆಂಗಳೂರು (Tomato price Bangalore) ಸೇರಿದಂತೆ ರಾಜ್ಯದ ಹಲವು ಕಡೆ ದರವು 120 ರೂಪಾಯಿಯ ಗಡಿ ದಾಟಿ ಮುನ್ನುಗ್ಗುತ್ತಿದೆ. ಹಾಗಾಗಿ ರೈತರಿಗೆ ಇದರಿಂದ ಲಾಭವಾಗುತ್ತಿದ್ದರೂ ಟೊಮ್ಯಾಟೋವನ್ನು ಕಾಯುವುದೇ ದೊಡ್ಡ ಸವಾಲಾಗುತ್ತಿದೆ. ಈ ಹಿಂದೆ ಎರಡು ರೂಪಾಯಿ ಆದಾಗ ರೈತ ಟೊಮ್ಯಾಟೋವನ್ನು ನೆಲಕ್ಕೆ ಚೆಲ್ಲಿದರೂ ಕೇಳದ ಪರಿಸ್ಥಿತಿ ಇತ್ತು. ಆದರೆ, ಈಗ ಹೊಲದಲ್ಲಿ ಅವುಗಳನ್ನು ಕಾಯ್ದುಕೊಳ್ಳಲೂ ಪರದಾಡುವ ಪರಿಸ್ಥಿತಿ ಇದೆ. ಹಲವರು ಈಗ ಇದರ ಕಳ್ಳತನಕ್ಕೆ (Tomato Theft) ಇಳಿದಿದ್ದರಿಂದ ಕಳ್ಳರಿಂದ ಟೊಮ್ಯಾಟೋ ರಕ್ಷಣೆಗೆ ರೈತರು “Z ಪ್ಲಸ್” ಸೆಕ್ಯುರಿಟಿಯನ್ನು (Z+ security for tomato) ಮಾಡಿಕೊಂಡಿದ್ದಾರೆ. ಅಂದಹಾಗೆ, “ಶ್ವಾನ”ಗಳೇ ಈ “Z ಪ್ಲಸ್” ಕಾವಲುಪಡೆ (Dog squads) ಆಗಿವೆ.

ಈಗ ರೈತರು ಹೊಲ‌ದಲ್ಲಿ ರಾತ್ರಿ ಹಗಲು ಟೊಮ್ಯಾಟೋವನ್ನು ಕಾಯುತ್ತಿದ್ದಾರೆ. ಈ ಬೆಳೆಗೆ ಬಂಪರ್ ದರ ಸಿಕ್ಕಿರುವುದರಿಂದ ಹೊಲಗಳಲ್ಲಿ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಇಪ್ಪತ್ತನ್ನಾಲ್ಕು ಗಂಟೆ ಕಣ್ಗಾವಲು ಇದ್ದರೂ ಖದೀಮರು ಟೊಮ್ಯಾಟೊವನ್ನು ಕದಿಯುತ್ತಿದ್ದಾರೆ. ಈಗ ದಾವಣಗೆರೆ ತಾಲೂಕಿನಲ್ಲಿ ಟೊಮ್ಯಾಟೊ ಬೆಳೆದ ರೈತರು ಪ್ರತಿದಿನ ಜಾಗರಣೆ ಮಾಡುವಂತಾಗಿದೆ.

ಇದನ್ನೂ ಓದಿ: Weather Report : ಇಂದಿನಿಂದ ಕರಾವಳಿಯಲ್ಲಿ ಭೋರ್ಗರೆಯುವ ಮಳೆ; ಒಳನಾಡಲ್ಲಿ 50:50!

ಹೊಲದಲ್ಲಿಯೇ ಟೆಂಟ್!

ಹೊಲದಲ್ಲಿ ಟೆಂಟ್ ಹಾಕಿಕೊಂಡಿರುವ ದಾವಣಗೆರೆ ತಾಲೂಕಿನಲ್ಲಿ ಟೊಮ್ಯಾಟೊ ಬೆಳೆದ ರೈತರು, ಕಾವಲಿಗೆ ನಾಯಿಗಳನ್ನು ಇಟ್ಟುಕೊಂಡಿದ್ದಾರೆ. ಅವುಗಳಿಗೆ ಕಾಲ ಕಾಲಕ್ಕೆ ಊಟವನ್ನು ಹಾಕಿ ಎಲ್ಲಿಯೂ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ.

ಹೊರರಾಜ್ಯ, ನೇಪಾಳಕ್ಕೂ ಸಾಗಾಟ

ಪ್ರತಿ ಬಾಕ್ಸ್ 1800-2000 ರೂಪಾಯಿ ದರ ಸಿಕ್ಕಿರುವುದರಿಂದ ರೈತರಲ್ಲಿ ಸಂತಸ ಮನೆಮಾಡಿದೆ. ದಾವಣಗೆರೆಯಿಂದ ನೇಪಾಳ (Nepal), ಉತ್ತರ ಪ್ರದೇಶ (Uttara Pradesh), ಮಹಾರಾಷ್ಟ್ರ (Maharashtra), ತಮಿಳುನಾಡಿಗೆ (Tamilnadu) ಇಲ್ಲಿನ ಟೊಮ್ಯಾಟೊ ಸಾಗಾಣಿಕೆಯಾಗುತ್ತಿದೆ.

ಕೋಲಾರದ ಟೊಮ್ಯಾಟೊಗೆ (Kolara tomato) ಇರುವ ಬೇಡಿಕೆಯು ಈಗ ದಾವಣಗೆರೆ ಟೊಮ್ಯಾಟೊಗೂ ಬಂದಿದ್ದು, ಖರೀದಿದಾರರು ಇಲ್ಲಿಗೂ ಭೇಟಿ ನೀಡಿ ಗುಣಮಟ್ಟವನ್ನು ಪರೀಕ್ಷಿಸಿ ಓಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರು ಸಂತಸಗೊಂಡಿದ್ದು, ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಟೊಮ್ಯಾಟೊ ಬೆಳೆಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಟೊಮ್ಯಾಟೊ ಸೆಕ್ಯುರಿಟಿ ಹೇಗಿದೆ ನೋಡಿ! ಇಲ್ಲಿದೆ ವಿಡಿಯೊ

ಇದನ್ನೂ ಓದಿ: Assembly Session: ಟ್ರೋಲ್‌ಗೆ ಡೋಂಟ್‌ ಕೇರ್‌ ಈಶ್ವರ್‌: ಧೈರ್ಯದಿಂದ ಮಾತಾಡೋ ಮಹಾಶೂರ ಎಂದ ಯು.ಟಿ. ಖಾದರ್

ನಾಯಿಗಳು, ದೊಣ್ಣೆಗಳೊಂದಿಗೆ ಕಾವಲು!

ಈ ಬಾರಿ ಟೊಮ್ಯಾಟೊಗೆ ಭಾರಿ ದರ ಸಿಕ್ಕಿದೆ. ಇಷ್ಟು ವರ್ಷದಲ್ಲಿ ನಮಗೆ ಈ ದರ ಸಿಕ್ಕಿರಲಿಲ್ಲ‌. ಈ ಬಾರಿ ಸಿಕ್ಕಿದೆ. ಆದರೆ, ಹೊಲದಲ್ಲಿ ಟೊಮ್ಯಾಟೊವನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕಳ್ಳರ ಕಾಟಕ್ಕೆ ಜಮೀನುಗಳಲ್ಲಿ ನಾಯಿಗಳನ್ನು ಕಾವಲಿಗೆ ಇಟ್ಟುಕೊಂಡಿದ್ದಲ್ಲದೆ, ನಾವು ದೊಣ್ಣೆಗಳನ್ನು ಹಿಡಿದು ಕಾಯುತ್ತಿದ್ದೇವೆ ಎಂದು ರೈತರೊಬ್ಬರು ಹೇಳಿದ್ದಾರೆ.

Exit mobile version