Site icon Vistara News

Domestic violence | ಕಪಾಳಕ್ಕೆ ಹೊಡೆದ ಪತಿ, ಬಾಗಿಲಿನ ಹೊಸ್ತಿಲಿಗೆ ತಲೆ ಬಡಿದು ಪತ್ನಿ ದಾರುಣ ಸಾವು

murder

ಬಾಗಲಕೋಟೆ: ನಿರಂತರವಾಗಿದ್ದ ಕೌಟುಂಬಿಕ ಕಲಹ (Domestic violence), ಕ್ಷಣಿಕ ಸಿಟ್ಟಿನ ಆವೇಶ ಒಬ್ಬ ಗೃಹಿಣಿಯ ಪ್ರಾಣವನ್ನೇ ಕಸಿದುಕೊಂಡಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ನೆಕ್ಕರಗುಂದಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ರಂಗವ್ವ (೨೫) ಎಂಬವರು ಮೃತಪಟ್ಟರು.

ನೆಕ್ಕರಗುಂದಿ ಗ್ರಾಮದಲ್ಲಿ ರಂಗವ್ವ ಮತ್ತು ಪತಿ ಮಳಿಯಪ್ಪ ಗೂಳನ್ನವರ್ ವಾಸವಾಗಿದ್ದರು. ಮನೆಯಲ್ಲಿ ಮಳಿಯಪ್ಪನ ತಾಯಿ ಭೀಮವ್ವ ಕೂಡಾ ಇದ್ದರು. ಮನೆಯಲ್ಲಿ ನಿರಂತರವಾಗಿ ಏನಾದರೊಂದು ಜಗಳ ನಡೆಯುತ್ತಲೇ ಇತ್ತು. ಈ ನಡುವೆ, ನವೆಂಬರ್ ೩೦ರಂದು ರಾತ್ರಿ ೧೦ ಗಂಟೆ ವೇಳೆಗೆ ಮಾತಿಗೆ ಮಾತು ಬೆಳೆದಿತ್ತು.

ಗಂಡ ಮಳಿಯಪ್ಪ ಹೆಂಡತಿಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದ. ಆದರೆ ಆಕೆ ಅದನ್ನು ಒಪ್ಪದೆ ಇದ್ದಾಗ ಅಕೆಯ ಮೇಲೆ ಆಕ್ರಮಣ ಮಾಡಿದ್ದ. ಸಿಟ್ಟಿನಿಂದ ಕಪಾಳಕ್ಕೆ ಹೊಡೆದ ರಭಸಕ್ಕೆ ಆಕೆ ನೆಲಕ್ಕೆ ಬಿದ್ದಿದ್ದಳು. ಹೀಗೆ ಬಿದ್ದಾಗ ತಲೆ ಬಾಗಿಲಿನ ಹೊಸ್ತಿಲಿಗೆ ಬಡಿದಿದೆ. ಆಕೆ ಅಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.

ಈ ನಡುವೆ, ಅತ್ತೆ ಭೀಮವ್ವ ಹಾಗೂ ಗಂಡ ಮಳಿಯಪ್ಪ ನಿರಂತರ ಕಿರುಕುಳ ನೀಡಿ ನನ್ನ ಮಗಳನ್ನ ಕೊಲೆ ಮಾಡಿದ್ದಾರೆಂದು ಮೃತ ರಂಗವ್ವಳ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮಳಿಯಪ್ಪ ಹಾಗೂ ಆತನ ತಾಯಿ ಭೀಮವ್ವಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Murder case | ಸುರಪುರದ ಕಾಚಾಪುರದಲ್ಲಿ ಜೋಡಿ ಕೊಲೆ; ಅನೈತಿಕ ಸಂಬಂಧದ ವಿರುದ್ಧ ಸಿಡಿದ ಪತಿರಾಯ

Exit mobile version