Site icon Vistara News

Domestic violence | ಕೌಟುಂಬಿಕ ಕಲಹದ ಹಿನ್ನೆಲೆ: ಮಗುವನ್ನು ಕೆರೆಗೆ ಎಸೆದು ತಾಯಿ ಆತ್ಮಹತ್ಯೆ

Two persons drowned in ganga river

ಹೊಸಕೋಟೆ: ಕೌಟುಂಬಿಕ ಕಲಹದ (Domestic violence) ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಕೆರೆಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಕೋಟೆ ಬಳಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾ ಕಲ್ಕುಂಟೆ ಅಗ್ರಹಾರ ನಿವಾಸಿ ಶ್ವೇತಾ(24) ಅವರೇ ತಮ್ಮ ಪುಟ್ಟ ಮಗ ಯಶ್ವಿಕ್‌ನ್ನು ಕೆರೆಗೆ ಎಸೆದು ಆತ್ಮಹತ್ಯೆ ಮಾಡಿಕೊಂಡವರು.

ಶ್ವೇತ ಎರಡು ವರ್ಷದ ಹಿಂದೆ ರಾಜೇಶ್ ಎಂಬ ಕೂಲಿ ಕಾರ್ಮಿಕನನ್ನು ವಿವಾಹವಾಗಿದ್ದರು. ಆದರೆ, ಮುಂದೆ ಪ್ರತಿ ದಿನವೂ ಕೌಟುಂಬಿಕ ಕಲಹ, ಹಿಂಸೆಗಳಿಂದ ಅವರು ನೊಂದಿದ್ದರು ಎಂದು ಹೇಳಲಾಗಿದೆ. ಇದೆಲ್ಲದರಿಂದ ಮುಕ್ತಿ ಪಡೆಯಲು ಬೇರೆ ದಾರಿ ಕಾಣದೆ ಅವರು ಸೋಮವಾರ ತನ್ನ ಮಗುವನ್ನು ಕೆರೆಗೆ ಎಸೆದು ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಅಪಘಾತ: ಇಬ್ಬರು ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಸೋಮವಾರ ಪಾದಚಾರಿಗೆ ಬೈಕ್‌ ಗುದ್ದಿದ ಬಳಿಕ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃಷ್ಣಪ್ಪ (38) ಮೃತ ಬೈಕ್ ಸವಾರ. ಅಪಘಾತದಲ್ಲಿ ಪಾದಾಚಾರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರು ರಸ್ತೆಯ ಮಾದಾವರ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್‌ ಸವಾರ ದಾವಣಗೆರೆ ಮೂಲದ ಹರ್ಷ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ.

Exit mobile version