ಚಾಮರಾಜನಗರ: ಸುಸಜ್ಜಿತ ಮನೆಗಳಿಲ್ಲ, ರಸ್ತೆ ಇಲ್ಲ, ಕುಡಿಯಲು ಯೋಗ್ಯ ನೀರಿಲ್ಲ. ಹೀಗಾಗಿ ಈ ಬಾರಿ ಮತ ಕೇಳಲು ಬರುವವರು ಇಷ್ಟೆಲ್ಲ ಕೆಲಸ ಮಾಡಿಕೊಡಬೇಕು. ಇಲ್ಲದಿದ್ದರೆ ಚುನಾವಣೆಯನ್ನು (Karnataka Election) ಬಹಿಷ್ಕಾರ ಮಾಡಲಾಗುವುದು ಎಂದು ಹನೂರು ತಾಲೂಕಿನ ನೆಲ್ಲಿಕತ್ತರಿ ಪೋಡು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಮೂಲಸೌಕರ್ಯ ಕಲ್ಪಿಸದಿದ್ದರೆ ಜನಪ್ರತಿನಿಧಿಗಳನ್ನು ಊರೊಳಗೆ ಬಿಟ್ಟುಕೊಳ್ಳುವುದಿಲ್ಲ. ಅಲ್ಲದೆ, ನಾವು ಮತವನ್ನೂ ಹಾಕುವುದಿಲ್ಲ. ಇಲ್ಲಿ ನಮಗೆ ಸುಸಜ್ಜಿತ ಮನೆಗಳಿಲ್ಲ, ರಸ್ತೆ ಸೌಕರ್ಯ ಇಲ್ಲ, ಕುಡಿಯಲು ಯೋಗ್ಯ ನೀರು ಸಿಗುತ್ತಿಲ್ಲ. ಆಸ್ಪತ್ರೆಗೆ ಬರಬೇಕೆಂದರೆ ಡೋಲಿ ಕಟ್ಟಿಕೊಂಡು ಹೋಗಬೇಕು. ರಸ್ತೆ ಸರಿ ಇಲ್ಲ, ನಮಗೆ ಡಾಂಬರ್ ರಸ್ತೆ ಬೇಡ. ಮಣ್ಣಿನ ರಸ್ತೆಯನ್ನಾದರೂ ಸರಿಯಾಗಿ ಮಾಡಿಕೊಡಿ ಎಂದು ನೆಲ್ಲಿಕತ್ತರಿ ಪೋಡಿನ ಸೋಲಿಗ ಸಮುದಾಯದವರು ಒತ್ತಾಯಿಸಿದ್ದಾರೆ.
ಕಾಡಲ್ಲಿ ಸಿಗುವ ಮರದ ತುಂಡುಗಳಿಂದ ಮನೆ ಕಟ್ಟಿಕೊಳ್ಳಲಾಗಿದೆ. ಬುಡಕಟ್ಟು ಸೋಲಿಗ ಸಮುದಾಯದ ಜನರಿಗೆ ಸೌಲಭ್ಯ ಕಲ್ಪಿಸಲು ಈ ಸರ್ಕಾರ ವಿಫಲವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಜನಪ್ರತಿನಿಧಿಗಳಿಗೆ ಸ್ಥಳೀಯರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸೌಲಭ್ಯ ಕಲ್ಪಿಸದಿದ್ದರೆ ಈ ಬಾರಿ ಮತವನ್ನು ಹಾಕುವುದಿಲ್ಲ. ಮತ ಪೆಟ್ಟಿಗೆಯನ್ನು ಗ್ರಾಮಕ್ಕೆ ತರುವುದಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Road Accident : ಪ್ರವಾಸ ಮುಗಿಸಿ ವಾಪಸಾಗುವಾಗ ಕಾಲೇಜು ಬಸ್ ಪಲ್ಟಿ; ಐವರು ವಿದ್ಯಾರ್ಥಿಗಳಿಗೆ ಗಾಯ