ತುಮಕೂರು: ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ದಿನವಾದ ಜ.21 ಅನ್ನು ರಾಜ್ಯ ಸರ್ಕಾರದ ವತಿಯಿಂದ ʼದಾಸೋಹ ದಿನʼ ಎಂದು ಆಚರಿಸಲು ಈ ಹಿಂದಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ನಗರದ ಸಿದ್ಧಗಂಗಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ʼದಾಸೋಹ ದಿನʼ ಎಂದು ಎಂದರೆ ಗೊತ್ತೇ ಇಲ್ಲ ಎಂದು ಹೇಳಿರುವುದು ಕಂಡುಬಂದಿದೆ.
ಸಿದ್ದಗಂಗಾ ಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಭಾಷಣದಲ್ಲಿ ದಾಸೋಹ ದಿನ ಎಂದೇ ಪ್ರಸ್ತಾಪ ಮಾಡಿದ್ದರು. ಆದರೆ ಪತ್ರಕರ್ತರ ಜೊತೆ ಮಾತನಾಡುವಾಗ ದಾಸೋಹ ದಿನ ಎಂದರೆ ಏನು ಅಂತಲೇ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಬಾರಿ ದಾಸೋಹ ದಿನ ಹೇಗೆ ಆಚರಿಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಹಿಂದಿನ ಸರ್ಕಾರದಲ್ಲಿ ಏನು ಮಾಡಿದರು ಎಂಬುವುದು ಗೊತ್ತಿಲ್ಲ, ಐ ಡೋಂಟ್ ನೋ. ಯಾವಾಗ ಮಾಡಿದರೂ, ಯಾವ ಸಂದರ್ಭದಲ್ಲಿ ದಾಸೋಹ ದಿನ ಮಾಡಿದರು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Ram Mandir : ಕೈಲಾಸದಿಂದ ನೇರವಾಗಿ ಅಯೋಧ್ಯೆಗೆ ಬರಲಿದ್ದಾರೆ ನಿತ್ಯಾನಂದ ಸ್ವಾಮಿ!
ನಾಳೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಎಲ್ಲಾ ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ಸರ್ಕಾರಿ ರಜೆ ಘೋಷಣೆ ಮಾಡೋದಿಲ್ಲ. ನಾನು ಮಹದೇವಪುರದಲ್ಲಿ ನಿರ್ಮಾಣ ಆಗಿರುವ ರಾಮ ಮಂದಿರ ಉದ್ಘಾಟನೆಗೆ ಹೋಗುತ್ತೇನೆ. ಆಹ್ವಾನ ನೀಡಿದ್ದು, ಪಾನಕ ನೀಡುತ್ತಾರೋ, ಫಲಾಹಾರ ನೀಡುತ್ತಾರೋ ಗೊತ್ತಿಲ್ಲ. ಕೊಬ್ಬರಿಗೆ ರಾಜ್ಯ ಸರ್ಕಾರದಿಂದ 1500 ರೂ. ಹೆಚ್ಚುವರಿಯಾಗಿ ಬೆಂಬಲ ಬೆಲೆ ಕೊಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ | Ram Mandir: ನಾವು ಭೂತದ ಪೂಜೆ ಮಾಡೋರು ದೈವದ ಬಳಿಗೇ ಹೋಗ್ತೇವೆ: ಬಿ.ಕೆ. ಹರಿಪ್ರಸಾದ್
ಕುಣಿಗಲ್ ಸ್ಟಡ್ ಫಾರಂ ಮುಚ್ಚುತ್ತೆ ಎಂಬ ವದಂತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಚ್ಚುತ್ತೀವಿ ಅಂತ ನಾವು ಎಲ್ಲೂ ಹೇಳಿಲ್ಲ. ಬೆಂಗಳೂರಿನ ರೇಸ್ ಕೋರ್ಸ್ ನಗರದ ಹೃದಯ ಭಾಗದಲ್ಲಿದೆ. ಅದನ್ನ ಕುಣಿಗಲ್‌ಗೆ ಶಿಫ್ಟ್ ಮಾಡಲು ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಕ್ವಿಂಟಲ್ ಕೊಬ್ಬರಿಗೆ 1500 ರೂ.
ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 12000 ರೂ.ಗಳೊಂದಿಗೆ 1500 ರೂ. ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಿದ್ಧಗಂಗಾ ಮಠ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಒಟ್ಟು ನಮ್ಮ ಸರ್ಕಾರದಿಂದ ಕ್ವಿಂಟಲ್‌ಗೆ 1500 ರೂ.ಗಳನ್ನು ಒದಗಿಸಲಾಗುವುದು. 3000 ರೂ.ಗಳಿಗೆ ಬೇಡಿಕೆ ಇದ್ದರೂ ಸರ್ಕಾರದ ತನ್ನ ಶಕ್ತ್ಯಾನುಸಾರ ಬೆಂಬಲ ಬೆಲೆ ನೀಡುತ್ತಿದ್ದು, ಎಂ.ಎಸ್.ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರವಾಗಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ರಾಜ್ಯ ಸರ್ಕಾರ ಕೊಬ್ಬರಿ ಬೆಳೆಗಾರರಿಗೆ 1500 ಹೆಚ್ಚಾಗಿ ನೀಡಲಿದೆ ಎಂದರು.