Site icon Vistara News

Pralhad Joshi: ಕೋಮುವಾದಿಗಳನ್ನು ಜಾತ್ಯತೀತರೆಂದು ಬಿಂಬಿಸಬೇಡಿ: ರಾಹುಲ್‌ ಗಾಂಧಿ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿ

Minister Pralhad Joshi and congress leader Rahul Gandhi

#image_title

ಬೆಂಗಳೂರು: ನೈಜ ಕೋಮುವಾದಿ ಗುಂಪುಗಳನ್ನು ಜಾತ್ಯತೀತರು ಎಂದು ಬಣ್ಣಿಸುವುದನ್ನು ನಕಲಿ ಗಾಂಧಿ ನಿಲ್ಲಿಸಲಿ. ಮೊದಲು ಯಾರು ಕೋಮುವಾದಿ, ಯಾರು ಜಾತ್ಯತೀತರು ಎಂಬುದನ್ನು ರಾಹುಲ್‌ ಗಾಂಧಿ ಅವರು ಅರಿತುಕೊಳ್ಳಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.

ಮುಸ್ಲಿಂ ಲೀಗ್‌ ಜಾತ್ಯತೀತ ಪಕ್ಷ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ಕೋಮುವಾದ ಬಿತ್ತುತ್ತಿರುವ ನೈಜ ಕೋಮುವಾದಿ ಮುಸ್ಲಿಂ ಲೀಗ್ ಪಕ್ಷವನ್ನು ಜಾತ್ಯತೀತರು ಎಂದು ನಕಲಿ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ದೇಶದ ವಿಭಜನೆಗೆ ಹಾಗೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷ ಜಾತ್ಯತೀತ ಹೇಗೆ ಆಗುತ್ತದೆ. ಆ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡವರಿಗೆ ರಾಹುಲ್ ಗಾಂಧಿ ಮಾಡಿದ ಅತ್ಯಂತ ದೊಡ್ಡ ಅಪಮಾನ ಇದಾಗಿದೆ. ಇವರ ತುಷ್ಟೀಕರಣ ರಾಜಕೀಯಕ್ಕೆ ಕೊನೆಯೇ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಲ್ಹಾದ್‌ ಜೋಶಿ ಅವರು, ಹಿಂದುಗಳಷ್ಟು ಜಾತ್ಯತೀತರು ಯಾರಿದ್ದಾರೆ ಎಂದಿದ್ದಾರೆ. ಹಿಂದುಗಳ ಯೋಚನೆಯಲ್ಲಿಯೇ ಜಾತ್ಯಾತೀತತೆ ಇದೆ. ಆದರೆ ರಾಹುಲ್ ಗಾಂಧಿ ಹಿಂದು ಸಂಘಟನೆಗಳು ಕೋಮುವಾದ ಬಿತ್ತುತ್ತಿವೆ ಎಂದಿದ್ದಾರೆ. ಯಾರು ನಿಜವಾದ ಜಾತ್ಯತೀತರು, ಯಾರು ಧರ್ಮಾಂಧ ಪಟ್ಟಭದ್ರ ಹಿತಾಸಕ್ತಿ ಹೊಂದಿದವರು ಎಂಬುದು ದೇಶದ ಜನರಿಗೆ ಅರ್ಥಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಈ ತುಷ್ಟೀಕರಣ ರಾಜನೀತಿ ದೇಶದಲ್ಲಿ ನಡೆಯಲ್ಲ ಎಂದು ಜೋಶಿ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Rahul Gandhi: ಮುಸ್ಲಿಂ ಲೀಗ್‌ ಜಾತ್ಯತೀತ ಎಂದ ರಾಹುಲ್‌ ಗಾಂಧಿ; ಬಿಜೆಪಿ- ಕಾಂಗ್ರೆಸ್‌ ಮಧ್ಯೆ ವಾಕ್ಸಮರ

Exit mobile version