Site icon Vistara News

Gruha jyothi Scheme : ಇನ್ನೂ ಫ್ರೀ ಕರೆಂಟ್ ಮಾಡ್ಕೊಂಡಿಲ್ವಾ? ಎರಡೇ ನಿಮಿಷದಲ್ಲಿ ಅಪ್ಲೈ ಮಾಡಿ

CM Siddaramaiah and Gruhajyoti scheme

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿಯಲ್ಲಿ (Congress Guarantee scheme) ಒಂದಾಗಿರುವ ಗೃಹ ಜ್ಯೋತಿ ಯೋಜನೆಗೆ (Gruha jyothi Scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್‌ 18ಕ್ಕೆ ಆರಂಭಗೊಂಡಿತ್ತು. ಈ ವರೆಗೆ 1.42 ಕೋಟಿ ಸಂಪರ್ಕಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ಇವುಗಳಲ್ಲಿ ಸ್ವೀಕೃತವಾಗಿರುವುದು 1.19 ಸಂಪರ್ಕಗಳಿಗೆ ಮಾತ್ರ. ಸ್ವೀಕೃತಗೊಂಡ ಈ ಎಲ್ಲರಿಗೂ ಜುಲೈ ತಿಂಗಳ ಉಚಿತ ವಿದ್ಯುತ್‌ ಬಿಲ್‌ ಬಂದಿದೆ. ಹಾಗಾಗಿ ಈಗ ಅರ್ಜಿ ತಿರಸ್ಕೃತಗೊಂಡವರು ಹಾಗೂ ಇನ್ನೂ ಅರ್ಜಿ ಸಲ್ಲಿಸದವರು ಆಗಸ್ಟ್‌ ತಿಂಗಳ ಉಚಿತ ವಿದ್ಯುತ್‌ನ (Free Electricity Bill) ಲಾಭವನ್ನು ಪಡೆದುಕೊಳ್ಳಬಹುದಾ? ಅದಕ್ಕೆ ಇನ್ನೂ ಸಮಯ ಇದೆಯಾ? ಎಂಬ ಪ್ರಶ್ನೆ ಇದೆ. ಮತ್ತೆ ಅದಕ್ಕೆ ಅಪ್ಲೈ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆಯೇ ಎಂಬ ಗೊಂದಲವೂ ಇದೆ. ಆದರೆ, ಈಗ ಇನ್ನೂ ಅರ್ಜಿ ಸಲ್ಲಿಸದವರು, ಸಲ್ಲಿಸಿಯೂ ಸಿಗದವರು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್‌ ತಿಂಗಳ ಬಿಲ್‌ ಅನ್ನು ಉಚಿತವಾಗಿ ಪಡೆಯಲು ಇನ್ನೂ ಮೂರು ದಿನ ಸಮಯ ಇದೆ.

ಹೌದು. ಈ ಆಗಸ್ಟ್‌ 26ರೊಳಗೆ ನೋಂದಣಿ ಮಾಡಿದರೆ ಖಂಡಿತವಾಗಿಯೂ (ಅರ್ಹತೆ ಇದ್ದರೆ) ಉಚಿತ ವಿದ್ಯುತ್‌ ನಿಮ್ಮದಾಗಲಿದೆ. ಹಾಗಾಗಿ ತಡ ಮಾಡದೆ ಕೂಡಲೇ ಅಪ್ಲೈ ಮಾಡಿಬಿಡಿ.

ಹೆಚ್ಚುವರಿ ಬಳಕೆಗೆ ಮಾತ್ರ ಪಾವತಿಸಿ

ನಿಮ್ಮ ವಾರ್ಷಿಕ ಸರಾಸರಿ ಯುನಿಟ್‌ ಅನ್ನು ಲೆಕ್ಕ ಹಾಕಿ ನಿಗದಿ ಮಾಡಿರಲಾಗುತ್ತದೆ. ಈ ಸರಾಸರಿಯು 200 ಯುನಿಟ್‌ಗಿಂತ (200 Unit Electricity) ಕಡಿಮೆ ಇದ್ದರೆ, ನಿಮಗೆ ಉಚಿತ ವಿದ್ಯುತ್‌ ಸಿಗಲಿದೆ. ಅದೇ ನಿಮಗೆ ನಿಗದಿಯಾದ ಸರಾಸರಿಗಿಂತ ಹೆಚ್ಚು ಯುನಿಟ್‌ ಖರ್ಚು ಮಾಡಿದ್ದರೆ ಅಷ್ಟಕ್ಕೂ ಕಟ್ಟಬೇಕಾ ಎಂಬ ಗೊಂದಲವು ಹಲವರಲ್ಲಿದೆ. ಆದರೆ, ನಿಮ್ಮ ಬಳಕೆಯು 200 ಯುನಿಟ್‌ಗಿಂತ ಕಡಿಮೆ ಇದ್ದರೆ, ಹೆಚ್ಚುವರಿಯಾಗಿ ಬಳಕೆ ಮಾಡಿದ್ದಕ್ಕಷ್ಟೇ ಬಿಲ್‌ ಪಾವತಿ ಮಾಡಿದರೆ ಸಾಕು. ಉದಾಹರಣೆಗೆ ಸರಾಸರಿ ಅನ್ವಯ ನಿಮಗೆ 175 ಯುನಿಟ್‌ ಅನ್ನು ನಿಗದಿಯಾಗಿರುತ್ತದೆ. ಆದರೆ, ನೀವು 195 ಯುನಿಟ್‌ ಅನ್ನು ಬಳಸಿರುತ್ತೀರಿ. ಆಗ ನೀವು ಹೆಚ್ಚುವರಿ 20 ಯುನಿಟ್‌ಗಷ್ಟೇ ಪಾವತಿ ಮಾಡಿದರೆ ಸಾಕು.

ಇದನ್ನೂ ಓದಿ: India Post GDS Recruitment : 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದು ಕೊನೇ ದಿನ

how to apply Gruha jyoti scheme

ಆಗಸ್ಟ್ ಕರೆಂಟ್‌ ಫ್ರೀ ಹೇಗೆ?

ನೀವು ಆಗಸ್ಟ್ 2‌6ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರೆ, ನಿಮ್ಮ ವಿದ್ಯುತ್‌ ಯುನಿಟ್‌ ಬಳಕೆಯು ಈಗಿರುವ ನಿಯಮಾವಳಿಯೊಳಗೆ ಇದ್ದರೆ ಉಚಿತ ವಿದ್ಯುತ್‌ ನಿಮಗೆ ಲಭ್ಯವಾಗುತ್ತದೆ. ಅದೇ ಆಗಸ್ಟ್ 27ರ ಬಳಿಕ ನೋಂದಾವಣಿ ಮಾಡಿಕೊಂಡರೆ ಸೆಪ್ಟೆಂಬರ್‌ನಲ್ಲಿ ಬರುವ ಆಗಸ್ಟ್ ತಿಂಗಳ ಬಿಲ್‌ ಅನ್ನು‌ ನೀವು ಪಾವತಿಸಬೇಕು.

ಈಗಲೂ ನೋಂದಾಯಿಸಿ

ಈವರೆಗೂ ನೀವು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡದೇ ಇದ್ದರೆ ಆಗಸ್ಟ್‌ ತಿಂಗಳ ಪ್ರಯೋಜನ ಪಡೆಯಲು ಇನ್ನೂ ಮೂರು ದಿನದ ಅವಕಾಶ ಇದೆ. ಹಾಗಾಗಿ ಕೂಡಲೇ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿ, ಸೆಪ್ಟೆಂಬರ್‌ ತಿಂಗಳಲ್ಲಿ ಬರುವ ಆಗಸ್ಟ್‌ ತಿಂಗಳ ಬಿಲ್‌ ಅನ್ನು ಉಚಿತವಾಗಿ ಪಡೆಯಿರಿ.

ಸಮಸ್ಯೆ ಆದರೆ?

ಒಂದು ವೇಳೆ ನೀವು ಈ ಯೋಜನೆಗೆ ಅರ್ಹರಿದ್ದರೂ ನಿಮಗೆ ವಿದ್ಯುತ್‌ ಬಿಲ್‌ ಎಂದಿನಂತೆ ಬಂದಿದೆ ಎಂದಾದರೆ ನೀವು ದುಡ್ಡು ಪಾವತಿ ಮಾಡುವ ಅಗತ್ಯವಿಲ್ಲ. ಬದಲಾಗಿ ವಿದ್ಯುತ್‌ ನಿಗಮ ಮಂಡಳಿ ಇಲ್ಲವೇ 24×7 ಸಹಾಯವಾಣಿ 1912ಕ್ಕೆ ಕರೆ ಮಾಡಿ ದೂರು ನೀಡಬಹುದು.

ಬಿಲ್ ಕಟ್ಟದಿದ್ದರೆ ಏನಾಗುತ್ತೆ?

ಇಲ್ಲಿ ಸರ್ಕಾರ ಉಚಿತ ವಿದ್ಯುತ್‌ ಘೋಷಣೆ ಮಾಡಿದೆ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಹಾಗೇ ನೋಂದಣಿ ಮಾಡಿಕೊಳ್ಳದೆ ಬಿಲ್‌ ಬಂದಲ್ಲಿ ಅದನ್ನು ನೀವು ಪಾವತಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ತಿಂಗಳ ಬಿಲ್‌ನಲ್ಲಿ ಅದರ ಬಡ್ಡಿಯೂ ಸೇರಿಸಿ ಬರುತ್ತದೆ. ಮೂರು ತಿಂಗಳು ನೀವು ಪಾವತಿ ಮಾಡದೇ ಹೋದರೆ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕ ಕಡಿತವಾಗಲಿದೆ.

ಇದನ್ನೂ ಓದಿ: Gruha Lakshmi Scheme : ಆಗಸ್ಟ್‌ 30ಕ್ಕೆ ಗೃಹಲಕ್ಷ್ಮಿ ದುಡ್ಡು ಬರುತ್ತೆ, ನಿಮ್ಗೂ ಹಣ ಬೇಕೆಂದ್ರೆ ತಕ್ಷಣವೇ ಹೀಗೆ ಮಾಡಿ!

ಸೇವಾಸಿಂಧು ಪೋರ್ಟಲ್‌ ಬಳಸಿ, ಎರಡೇ ನಿಮಿಷದಲ್ಲಿ ನೋಂದಾಯಿಸಿ

ನೋಂದಣಿ ಮಾಡಿಕೊಳ್ಳಲು ನೀವು ಸೇವಾಸಿಂಧು ಪೋರ್ಟಲ್‌ (SevaSindhu Portal) ಬಳಸಿ. ಇದರಲ್ಲಿ ಮೊದಲು ಲಾಗ್‌ ಇನ್‌ ಆಗಿ. ರಿಜಿಸ್ಟರ್‌ ಆಗಿರದಿದ್ದರೆ ನೀವೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ನಿಮ್ಮ ಆಧಾರ್‌ ಕಾರ್ಡ್‌ ನಂಬರ್‌ ಹಾಗೂ ವಿದ್ಯುತ್‌ ಬಿಲ್‌ನಲ್ಲಿರುವ ಕಸ್ಟಮರ್‌ ಐಡಿ ಹಾಕಿ ನೋಂದಣಿ ಮಾಡಿಕೊಳ್ಳಬಹುದು. ಈ ವೇಳೆ ನಿಮಗೊಂದು ಒಟಿಪಿ ಬರುತ್ತದೆ. ಅದನ್ನು ನಮೂದಿಸಿದರೆ ನೀವು ಯೋಜನೆಗೆ ಸೇರ್ಪಡೆಗೊಂಡಂತೆ. ಬಳಿಕ ನೋಂದಣಿಯಾದ ಬಗ್ಗೆ ನಿಮಗೊಂದು ದೃಢೀಕರಣ ಮೆಸೇಜ್‌ ಸಹ ಬರಲಿದೆ.

Exit mobile version