ಬಳ್ಳಾರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರಡ್ಡಿ ಪರ ಪಕ್ಷದ ಮುಖಂಡರು, ನಗರದ 21ನೇ ವಾರ್ಡ್‌ನಲ್ಲಿ ಗುರುವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ನಗರದ 21ನೇ ವಾರ್ಡ್‌ನ ಬಸವೇಶ್ವರ ನಗರ, ನೆಹರೂ ಕಾಲೋನಿ, ಕಾಲುವೆ ಗಡ್ಡೆ ಪ್ರದೇಶ ಸೇರಿದಂತೆ ಒಟ್ಟು 10 ಬೂತ್‌ಗಳಲ್ಲಿ ಪಕ್ಷದ ಮುಖಂಡ ಚಾನಾಳ್ ಶೇಖರ್ ನೇತೃತ್ವದಲ್ಲಿ ಪ್ರಚಾರ ಕೈಗೊಂಡು ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಬೆಂಬಲಿಸುವಂತೆ ಮನವಿ ಮಾಡಿದರು.
ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮಗೆ ಆಶೀರ್ವದಿಸಿ
ಈ ವೇಳೆ ನೆಹರೂ ಕಾಲೋನಿಯ ಬಳಿ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರು ಕೂಡ ಪ್ರಚಾರ ಕಾರ್ಯದಲ್ಲಿ ಜತೆಗೂಡಿ ಮನೆ ಮನೆಗೆ ತೆರಳಿ ತಮ್ಮನ್ನು ಬೆಂಬಲಿಸುವಂತೆ ಮತಯಾಚನೆ ನಡೆಸಿದರು. ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮಗೆ ಆಶೀರ್ವದಿಸಿ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: IPL 2023: ಬುಧವಾರದ ಡಬಲ್ ಹೆಡರ್ ಪಂದ್ಯಗಳ ಬಳಿಕ ಐಪಿಎಲ್ ಅಂಕಪಟ್ಟಿ ಈ ರೀತಿ ಇದೆ
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಂಜುಸ್ವಾಮಿ ಹಿರೇಮಠ, ವಾಸು ರೆಡ್ಡಿ, ಅಶೋಕ್ ರೆಡ್ಡಿ, ಪಂಪಣ್ಣ, ಪ್ರಭಾಕರ ರೆಡ್ಡಿ, ಗುರುಪ್ರಸಾದ್ ರೆಡ್ಡಿ, ಅಂಗಡಿ ಶಂಕರ್, ಕಾಲುವೆಗಡ್ಡೆ ಸೂರಿ, ದುರ್ಗಮ್ಮ ಗುಡಿ ದುರ್ಗಣ್ಣ, ಗುಂಡ ಹಾಗೂ ಇತರರಿದ್ದರು.