ಯಲ್ಲಾಪುರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದ್ದು, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಪ್ರಕ್ರಿಯೆ ಸೋಮವಾರದಿಂದ ಆರಂಭಗೊಂಡಿದೆ.
ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶತಾಯಿಷಿಗಳಾದ ಸುಬ್ಬಿ ಗೋಪಾಲಕೃಷ್ಣ ಹೆಗಡೆ (104) ಹಾಗೂ ಅವರ ಸಹೋದರಿ ಗೌರಿ ಹೆಗಡೆ (94) ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸೆಕ್ಟರ್ 11 ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಹಾಗೂ ಇತರ ಅಧಿಕಾರಿಗಳ ನೇತೃತ್ವದಲ್ಲಿ ಈ ಪ್ರಕ್ರಿಯೆ ನೆರವೇರಿತು.
ಇದನ್ನೂ ಓದಿ: Karnataka Election 2023: ಏಳು ಸುತ್ತಿನ ಕೋಟೆಯಂತೆ ಬಿಜೆಪಿಯ ಏಳು ಸುರಕ್ಷತೆಯ ಯೋಜನೆಗಳು; ಪ್ರಧಾನಿ ಮೋದಿ ಬಣ್ಣನೆ
ಕ್ಷೇತ್ರದಲ್ಲಿ ಒಟ್ಟೂ 615 ಮನೆಯಿಂದ ಮತ ಚಲಾಯಿಸುವವರನ್ನು ಗುರುತಿಸಲಾಗಿದ್ದು, ವಿವಿಧ ಸೆಕ್ಟರ್ ಅಧಿಕಾರಿಗಳು ಅಂತವರ ಮನೆಗೆ ತೆರಳಿ, ಮತವನ್ನು ಸಂಗ್ರಹಿಸಲಿದ್ದಾರೆ.
ಶಿರಸಿ-ಸಿದ್ದಾಪುರದಲ್ಲಿ ಮನೆಯಿಂದಲೇ ಮತದಾನ ಆರಂಭ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಸೋಮವಾರ (ಮೇ 01) ಮತದಾನ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಈ ಕ್ಷೇತ್ರದಲ್ಲಿ ಮೇ 1 ರಿಂದ ಆರಂಭವಾದ ಅಂಚೆ ಮತದಾನ ಪ್ರಕ್ರಿಯೆ ಮೇ 4 ರವರೆಗೆ ನಡೆಯಲಿದೆ. ಕ್ಷೇತ್ರದಲ್ಲಿ ಇದೀಗ 80 ವರ್ಷ ಮೇಲ್ಪಟ್ಟ 315 ಮತದಾರರಿದ್ದರೆ, 88 ವಿಶೇಷ ಚೇತನ ಮತದಾರರಿದ್ದಾರೆ. ತಾಲೂಕಿನ 12 ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಮತದಾನ ತಂಡ ರಚನೆ ಮಾಡಲಾಗಿದೆ. ಅವರು ಮತದಾರರ ಮನೆಗೆ ತೆರಳಿ ಅಂಚೆ ಮತಪತ್ರದ ವಿವರಣೆ ನೀಡಿ ಮತದಾನ ಪ್ರಕ್ರಿಯೆ ಆರಂಭಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್‌ನ ವಾರಂಟಿಯೇ ಮುಗಿದಿರುವಾಗ ಗ್ಯಾರಂಟಿಗಳಿಗೆ ಇನ್ನೆಲ್ಲಿ ಬೆಲೆ! ಪ್ರಧಾನಿ ಮೋದಿ ಲೇವಡಿ
ಮತದಾನ ಪ್ರಕ್ರಿಯೆಯೆ ಮೊದಲ ದಿನದಂದು 80 ವರ್ಷ ಮೇಲ್ಪಟ್ಟ ಪ್ರಗತಿ ನಗರದ ಶಾಕುಂತಲಾ ಹೆಗಡೆ, ಯಮುನಾ ಹೆಗಡೆ, ಸಿದ್ದಾಪುರ ತಾಲೂಕಿನ ರಾಮಚಂದ್ರ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಮತದಾರರು ಅಂಚೆ ಪತ್ರದ ಮೂಲಕ ಮತದಾನ ಮಾಡಿದ್ದಾರೆ.