ತುಮಕೂರು: ತುಮಕೂರು ಜಿಲ್ಲೆಯಲ್ಲಿ ಹೊಸ ಫಂಗಸ್ (New fungus) ಕಾಣಿಸಿಕೊಂಡಿತೇ ಎಂಬ ಆತಂಕ ಎದುರಾಗಿದೆ. ಮಕ್ಕಳಲ್ಲಿ ದಿಢೀರನೆ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದು, ಪೋಷಕರಲ್ಲಿ ಆತಂಕವನ್ನು ಹುಟ್ಟುಹಾಕಿದೆ.
ತುಮಕೂರು ಜಿಲ್ಲೆ ತುರುವೇಕೆರೆ ಹಾಗೂ ಕೊರಟಗೆರೆಯಲ್ಲಿ ಗ್ರಾಮದಲ್ಲಿ ಮಕ್ಕಳ ಚರ್ಮದ ಮೇಲೆ ಫಂಗಸ್ ಕಾಣಿಸಿಕೊಂಡಿದೆ. ಕೊರಟಗೆರೆ ತಾಲೂಕಿನ ಯಲಚೇಗೆರೆ, ತುರುವೇಕೆರೆ ತಾಲೂಕಿನ ಕುಣಿಕೇನಹಳ್ಳಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Weather report: ಥಂಡಿ ಗಾಳಿಯೊಂದಿಗೆ ಈ ಐದು ಜಿಲ್ಲೆಗಳಲ್ಲಿ ಅಬ್ಬರಿಸಲಿರುವ ವರುಣ; ಇದರಲ್ಲಿ ನಿಮ್ಮ ಊರು ಇದೆಯಾ ನೋಡಿ
ಕುಣಿಕೇನಹಳ್ಳಿಯ ಗ್ರಾಮದ 21 ಮಕ್ಕಳಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡರೆ, ಯಲಚೇನಹಳ್ಳಿ ಗ್ರಾಮದ 5 ಮಕ್ಕಳಲ್ಲಿ ಕಪ್ಪು ಮಚ್ಚೆಗಳು ಕಾಣಿಸಲ್ಪಟ್ಟಿದೆ. ಮಕ್ಕಳ ಅಂಗಾಲು- ಅಂಗೈಯಲ್ಲಿ ಈ ರೀತಿಯ ಕಪ್ಪು ಮಚ್ಚೆಗಳು ಬರತೊಡಗಿವೆ. ಕಳೆದ ಶನಿವಾರದಿಂದ ಈ ಮಚ್ಚೆ ಕಾಣಿಸಿಕೊಂಡಿದ್ದು, ಕಾರಣ ಮಾತ್ರ ತಿಳಿದು ಬರುತ್ತಿಲ್ಲ. ಶಾಲೆಯಿಂದ ಮನೆಗೆ ವಾಪಸ್ ಬಂದ ಬಳಿಕ ಮಕ್ಕಳಲ್ಲಿ ಈ ರೀತಿ ಆಗುತ್ತಿದೆ.
ಶಿಕ್ಷಕರೊಬ್ಬರಿಗೂ ಕಾಣಿಸಿಕೊಂಡಿತು ಮಚ್ಚೆ
ಶಾಲೆಯ ಶಿಕ್ಷಕರೊಬ್ಬರಲ್ಲಿಯೂ ಈ ಮಚ್ಚೆ ಕಾಣಿಸಿಕೊಂಡಿದ್ದು, ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಈ ರೋಗದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಚರ್ಚೆಗಳಾಗುತ್ತಿದ್ದು, ಉಳಿದ ಜನತೆಯೂ ಆತಂಕಿತರಾಗಿದ್ದಾರೆ.
ವೈದ್ಯರ ತಂಡ ಭೇಟಿ
ಈ ವಿಷಯ ತಿಳಿದ ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ಅವರು ವೈದ್ಯರ ತಂಡದೊಂದಿಗೆ ಶಾಲೆಗೆ ಭೇಟಿ ನೀಡಿದ್ದಾರೆ. ವೈದ್ಯರು ಸಹ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಈ ರೋಗಕ್ಕೆ ಏನು ನಿಖರ ಕಾರಣ ಎಂಬುದು ಇನ್ನೂ ಗೊತ್ತಾಗಿಲ್ಲ.
ಇದನ್ನೂ ಓದಿ: Snake Rescue: ಹೆಲ್ಮೆಟ್, ಶೂ, ಮಂಚದ ಒಳಗೂ ಹಾವು; ಮೈಸೂರೀಗ ಹಾವಿನ ನಗರಿ!
ಆದರೆ, ಮಕ್ಕಳಲ್ಲಿ ಈ ರೋಗವು ವೇಗವಾಗಿ ಹರಡುತ್ತಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜಿಲ್ಲೆಯಾದ್ಯಂತ ವ್ಯಾಪಸಲಿದೆ ಎಂಬ ಭಯ ಎಲ್ಲರನ್ನು ಆವರಿಸಿದೆ. ಹೀಗಾಗಿ ಈ ಫಂಗಸ್ ಏನೆಂಬುದನ್ನು ಶೀಘ್ರವೇ ಪತ್ತೆ ಹಚ್ಚಿ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.