Site icon Vistara News

Dowry Case | ಹೇಮಾವತಿ ನಾಲೆಗೆ ಮಗುವಿನೊಂದಿಗೆ ಹಾರಿ ತಾಯಿ ಆತ್ಮಹತ್ಯೆ; ವರದಕ್ಷಿಣೆ ಕಿರುಕುಳಕ್ಕೆ ಬಲಿ ಶಂಕೆ

channarayapattana dowry case Suicide case

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಕುಂಚೇವು ಕೊಪ್ಪಲು ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗುವಿನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ವರದಕ್ಷಿಣೆ (Dowry Case) ಕಿರುಕುಳ ಎಂಬ ಆರೋಪ ಕೇಳಿಬಂದಿದೆ.

ಭವ್ಯಾ (23), ವೇದಾಂತ್ (3) ಮೃತ ದುರ್ದೈವಿಗಳು. ಎರಡು ದಿನಗಳ ಹಿಂದೆ ಮಗುವಿನ ಜತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಮಾಳೆನಹಳ್ಳಿ ಹೇಮಾವತಿ ಕಾಲುವೆಯಲ್ಲಿ ಮಗುವಿನ ಮೃತ ದೇಹ ಪತ್ತೆಯಾಗಿದೆ. ಕುಂಚೆವುಕೊಪ್ಪಲು ಗ್ರಾಮದ ಕೆರೆಯಲ್ಲಿ ತಾಯಿ ಭವ್ಯಾರ ಮೃತದೇಹ ಪತ್ತೆಯಾಗಿದೆ.

ಮೂರೂವರೆ ವರ್ಷದ ಹಿಂದೆ ಗೆಜ್ಜೆಗಾರಹಳ್ಳಿಯ ಭವ್ಯಾ ಹಾಗೂ ಕುಂಚೇವು ಕೊಪ್ಪಲು ಶ್ರೀನಿವಾಸ್ ನಡುವೆ ವಿವಾಹವಾಗಿತ್ತು. ಆದರೆ, ಶ್ರೀನಿವಾಸ್‌ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದರಿಂದ ತೀವ್ರವಾಗಿ ಮನನೊಂದ ತಾಯಿ ತನ್ನ ಮಗುವಿನ ಜತೆ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Dowry Case | ವರದಕ್ಷಿಣೆ, ಶೀಲ ಶಂಕಿಸಿ ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಂದು ಹೂತು ಹಾಕಿದ ಪತಿ? ಹೆತ್ತವರ ದೂರು

Exit mobile version