Site icon Vistara News

Watch Park: ‘ವಾಚ್ ಪಾರ್ಕ್’ ಸ್ಥಾಪನೆಗೆ ಸರ್ಕಾರದ ಸಹಕಾರ: ಗಡಿಯಾರ ಉದ್ಯಮಿಗಳಿಗೆ ಡಾ. ಅಶ್ವತ್ಥನಾರಾಯಣ ಆಹ್ವಾನ

watch clock ashwath

ಬೆಂಗಳೂರು: ಗಡಿಯಾರ ಉದ್ಯಮಕ್ಕೆ ಸಂಬಂಧಿಸಿದವರು ವಾಚ್ ಪಾರ್ಕ್ (Watch Park) ಸ್ಥಾಪಿಸಲು ಮುಂದೆ ಬಂದರೆ ಸರ್ಕಾರ ಎಲ್ಲ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ಐಟಿಬಿಟಿ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

Watch Park

ಇಂಡಿಯಾ ಇಂಟರ್ನ್ಯಾಷನಲ್ ಆ್ಯಂಡ್ ಕ್ಲಾಕ್ ಫೇರ್ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ‘ಸಮಯ ಭಾರತಿ- 2023’ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೈಗಾರಿಕೋದ್ಯಮಿಗಳು ತಮ್ಮದೇ ಆದ ಉದ್ಯಮ ಪಾರ್ಕ್‌ಗಳನ್ನು ಸ್ಥಾಪಿಸಿ, ತಾವೇ ನಿರ್ವಹಿಸುವ ರೀತಿಯಲ್ಲಿ ಸರ್ಕಾರ ಈಗ ನಿಯಮಗಳನ್ನು ಸರಳಗೊಳಿಸಿದೆ. ಇದಕ್ಕೆ ಬೇಕಾದ ಭೂಮಿ ಖರೀದಿ ಪ್ರಕ್ರಿಯೆಯೂ ಸುಲಭವಾಗಿದೆ ಎಂದು ವಿವರಿಸಿದರು.

ತನ್ನ ಮನಸ್ಸಿಗೆ ಒಪ್ಪುವಂತಹ ಗಡಿಯಾರ ಹಾಕಿಕೊಳ್ಳಬೇಕೆಂಬುದು ಪ್ರತಿಯೊಬ್ಬ ವ್ಯಕ್ತಿಯ ಬಯಕೆಯಾಗಿರುತ್ತದೆ. ಹೀಗಾಗಿ ಗಡಿಯಾರ ಉದ್ಯಮವು ಯಾವಾಗಲೂ ಬೇಡಿಕೆಯಲ್ಲಿರುತ್ತವೆ. ಯುವಕರಿಗೆ ನಾನಾ ರೀತಿಯ ಕೌಶಲ ತರಬೇತಿಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಕೊಡುತ್ತಿದೆ. ಗಡಿಯಾರ ಉದ್ಯಮ ಸೇರಿದಂತೆ ಬೇಡಿಕೆಯಲ್ಲಿರುವ ಎಲ್ಲ ಉದ್ಯಮಗಳಿಗೂ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.

ಸರ್ಕಾರವು ಈಗ ವಿದ್ಯಾರ್ಥಿಗಳ ಕಲಿಕೆ ಹಾಗೂ ಅವರಿಗೆ ಕೌಶಲ ತರಬೇತಿ ಇವೆರಡಕ್ಕೂ ಒಟ್ಟೊಟ್ಟಿಗೆ ಒತ್ತು ಕೊಡುತ್ತಿದೆ. ಕಲಿಕೆಯ ಬೇರೆ, ಕೌಶಲವೇ ಬೇರೆ ಎಂಬ ಪರಿಸ್ಥಿತಿ ಈಗ ಇಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕೌಶಲ್ಯವಿರುವ ವ್ಯಕ್ತಿಯನ್ನಾಗಿಸುವುದೇ ಸರ್ಕಾರದ ಗುರಿಯಾಗಿದೆ. ಹೀಗಾಗಿ ಗಡಿಯಾರ ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಸರ್ಕಾರ ಲಭ್ಯವಾಗಿಸಲಿದೆ ಎಂದು ಅಶ್ವತ್ಥನಾರಾಯಣ್ ಹೇಳಿದರು.

ಇದೇ ಸಂದರ್ಭದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಹಲವಾರು ವಿನ್ಯಾಸದ ಗಡಿಯಾರಗಳನ್ನು ನೋಡಿ ಹೊಸತನದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಭಾಸ್ಕರ್ ಭಟ್ ಉದ್ಘಾಟಿಸಿದರು. ಗಡಿಯಾರ ಉದ್ಯಮದ ಹಿರಿಯರಾದ ಯಜ್ಞನಾರಾಯಣ, ಸಮಯ ಭಾರತಿ ಸಿಇಒ ಹೇಮಂತ್, ಟೈಟಾನ್ ಸಿಇಒ ಸುಪರ್ಣಾ ಸೇರಿದಂತೆ ದೀಪಕ್, ವಿನೋದ್ ಮತ್ತಿತರರು ಇದ್ದರು.

ಇದನ್ನೂ ಓದಿ | Pathaan Film: ಕೇಸರಿ ತ್ಯಾಗದ ಸಂಕೇತ, ಬುದ್ಧ-ಬಸವಣ್ಣರೂ ಈ ಬಣ್ಣ ಧರಿಸಿದ್ದರು; ಪಠಾಣ್‌ ಸಿನಿಮಾ ಬಿಕಿನಿಗೆ ಅಹಿಂಸಾ ಚೇತನ್‌ ಬೆಂಬಲ

Exit mobile version