Site icon Vistara News

Siddaramaiah | ಮಾಜಿ ಸಿಎಂ ಸಿದ್ದರಾಮಯ್ಯಗೆ ಡಾ. ಬಿ. ಆರ್ ಅಂಬೇಡ್ಕರ್‌ ಸುಡರ್‌ ಪ್ರಶಸ್ತಿ ಪ್ರದಾನ

Award

ಚೆನ್ನೈ: ನಗರದಲ್ಲಿ ವಿಡುದಲೈ ಚಿರುದೈಗಳ್ ಕಚ್ಚಿ ಪಕ್ಷದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಸುಡರ್ ಪ್ರಶಸ್ತಿಯನ್ನು (Award) ಪಕ್ಷದ ಮುಖ್ಯಸ್ಥ ಹಾಗೂ ಸಂಸದ ತಿರುಮಾವಳವನ್ ಪ್ರದಾನ ಮಾಡಿದರು.

ಇದಕ್ಕೂ ಮುನ್ನ ಚೆನ್ನೈ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದಾಗ ಅವರಿಗೆ ವಿಡುದಲೈ ಚಿರುದೈಗಳ್ ಕಚ್ಚಿ ಪಕ್ಷ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಜೈಕಾರ ಹಾಕುವ ಮೂಲಕ ಸ್ವಾಗತಿಸಿದರು. ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.

ಆನಂತರ ಚಿರುದೈಗಳ್ ಕಚ್ಚಿ ಪಕ್ಷ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗವಹಿಸಿ ಡಾ.ಬಿ.ಆರ್.ಅಂಬೇಡ್ಕರ್‌ ಸುಡರ್‌ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪುದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಅಳಗಿರಿ ಮತ್ತಿತರರು ಹಾಜರಿದ್ದರು.

Exit mobile version