ಮಂಗಳೂರು: ದಿವಂಗತ ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ ಗೌರವ ದೊರೆತಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹರ್ಷ ವ್ಯಕ್ತಪಡಿಸಿದ್ದಾರೆ. ಭಗವಂತನ ಪಾದ ಸೇರಿದ ಆ ಯುವಕನನ್ನು ಇಂದು ನಾನು ಸ್ಮರಿಸುತ್ತೇನೆ, ಅವರ ತಂದೆ ಡಾ.ರಾಜಕುಮಾರ್ ನನಗೆ ಅತ್ಯಂತ ಪ್ರೀತಿ ಪಾತ್ರರು ಮತ್ತು ಕ್ಷೇತ್ರದ ಬಗ್ಗೆ ಅವರಿಗೆ ಅಪಾರ ಗೌರವವಿತ್ತು. ಅವರ ಪುತ್ರ ಪುನೀತ್ ವ್ಯಕ್ತಿತ್ವ, ನಟನೆ ಮತ್ತು ಸ್ವಭಾವದಿಂದ ಪ್ರೀತಿ ಪಾತ್ರರಾಗಿದ್ದರು. ಕರ್ನಾಟಕ ರತ್ನಕ್ಕೆ ಪುನೀತ್ ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬಹುದೊಡ್ಡ ನಟ ಮತ್ತು ಉತ್ತಮ ಭವಿಷ್ಯವಿದ್ದ ಕಲಾವಿದನಿಗೆ ಇಂತಹ ಸಾವು ಬರಬಾರದಿತ್ತು. ಅವರ ಸಾವನ್ನು ನಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಭಗವಂತನ ಪಾದ ಸೇರಿದ ಪುನೀತ್‌ನನ್ನು ನಾನು ಇವತ್ತು ಸ್ಮರಿಸುತ್ತೇನೆ. ಕರ್ನಾಟಕ ರತ್ನಕ್ಕೆ ಪುನೀತ್ ಅರ್ಹ ವ್ಯಕ್ತಿಯಾಗಿದ್ದು, ಮುಂದೆ ಎಲ್ಲಾ ಕಲಾವಿದರಿಗೆ ಅವರು ಸ್ಫೂರ್ತಿಯಾಗಲಿ. ಕನ್ನಡದ ಸೇವೆ, ಸ್ವಭಾವತಃ ಸ್ನೇಹ ಪರರಾಗಿದ್ದರೆ ಜನ ಮತ್ತು ಸರ್ಕಾರ ಹೇಗೆ ನಮ್ಮನ್ನು ಸ್ಮರಿಸಿಕೊಳ್ಳುತ್ತದೆ ಎಂಬುವುದು ಎಲ್ಲಾ ಕಲಾವಿದರಿಗೂ ಗೊತ್ತಾಗಲಿ. ಪುನೀತ್‌ರ ಪುಣ್ಯದಿಂದ ಮತ್ತಷ್ಟು ಉತ್ತಮ ಕಲಾವಿದರು ಮೂಡಿ ಬರಲಿ ಎಂದು ಹಾರೈಸಿದರು. 2009ರಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು.
ಇದನ್ನೂ ಓದಿ | Appu Namana | ಮಳೆಹನಿಗಳ ಮಂಗಳವೃಷ್ಟಿಯೊಂದಿಗೆ ಪುನೀತ್ ಮುಡಿಗೇರಿತು ಕರ್ನಾಟಕ ರತ್ನ ಪ್ರಶಸ್ತಿ