Site icon Vistara News

Karnataka Election Results: ನನ್ನ ಸೋಲು ಅಭಿವೃದ್ಧಿಯ ಸೋಲು: ಡಾ.ಕೆ.ಸುಧಾಕರ್‌

Dr K Sudhakar's press meet in chikkaballapur

Dr K Sudhakar's press meet in chikkaballapur

ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ನನ್ನ ಸೋಲಿನಿಂದ (Karnataka Election Results) ಕಾರ್ಯಕರ್ತರು ಎದೆಗುಂದುವ ಅವಶ್ಯಕತೆ ಇಲ್ಲ. ನನ್ನ ಸೋಲು ಅಭಿವೃದ್ಧಿಯ ಸೋಲು. ಮತ್ತೆ ಪುಟಿದೇಳುವ ಅವಕಾಶ ಇದೆ. ಮುಂದೆ ಒಗ್ಗಾಟ್ಟಾಗಿ ಗೆಲ್ಲುವ ಹೋರಾಟ ಮಾಡೋಣ ಎಂದು ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊನೆ ಹಂತದಲ್ಲಿ ಚುನಾವಣೆಗೆ 12 ಗಂಟೆ ಬಾಕಿ ಇರುವಾಗ ನನ್ನನ್ನು ಸೋಲಿಸಲು ಜೆಡಿಎಸ್, ಕಾಂಗ್ರೆಸ್ ಜತೆ ಸೇರಿ ರಾಜಕೀಯ ಷಡ್ಯಂತ್ರ ಮಾಡಿದೆ. ದಳದವರು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಇದೇ ರೀತಿ ಮಾಡಿದ್ದಾರೆ‌. ಇದು ಜನ ಸಾಮಾನ್ಯರಿಗೆ ಮಾಡಿದ ಮೋಸ ಎಂದು ಕಿಡಿಕಾರಿದರು.

ಇದನ್ನೂ ಓದಿ | Karnataka Election: ಗ್ಯಾಸ್‌ ದರ ಏರಿಕೆ, ಮುಸ್ಲಿಂ ಮೀಸಲಾತಿ ರದ್ದು ಬಿಜೆಪಿ ಸೋಲಿಗೆ ಕಾರಣ: ಸಂಸದ ಸಂಗಣ್ಣ ಕರಡಿ

ಜೆಡಿಎಸ್‌ ಮತ ಕಾಂಗ್ರೆಸ್‌ಗೆ ಬಂದಿದ್ದರಿಂದ ಅನಿವಾರ್ಯವಾಗಿ ಸೋಲು ಅನುಭವಿಸುವಂತಾಗಿದೆ ಎಂದ ಅವರು, ಚುನಾವಣೆಯಲ್ಲಿ 75 ಸಾವಿರ ಮತ ನೀಡಿದ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಗೆಲುವು ಶಾಶ್ವತ ಅಲ್ಲ, ಸೋಲು ಕೂಡ ಅಂತಿಮ ಅಲ್ಲ. ಸೇವಾ ಮನೋಭಾವದಿಂದ ಮುಂದುವರಿಯಬೇಕು. ನನ್ನ ಬದುಕು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಮೀಸಲು. ಚುನಾವಣೆಯ ಗೆಲುವುಮ ಸೋಲು ನನಗೆ ಅಡ್ಡಿಯಾಗಲ್ಲ ಎಂದು ಹೇಳಿದರು.

ಸಹೋದರನಾಗಿ ನಿಮ್ಮ ಜತೆ ನಿಲ್ಲುತ್ತೇನೆ. ಮುಂದಿನ ಚುನಾವಣೆಗಳಲ್ಲಿ ಪಕ್ಷ ಸಂಘಟನೆ ಮಾಡಿ ಗೆಲ್ಲಲಿದ್ದೇವೆ. ಕ್ಷೇತ್ರದ ಜನರಿಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಸಹಿಸಲು ಆಗಲ್ಲ. ಪ್ರತಿರೋಧ, ಪ್ರತಿಭಟನೆ ಮಾಡೇ ಮಾಡುತ್ತೇವೆ. ಯಾವುದೇ ದೌರ್ಜನ್ಯಗಳು ಈ ಜಿಲ್ಲೆಯಲ್ಲಿ ಆಗಲು ಬಿಡಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | BJP Karnataka: ಸಿಎಂ ಆಯ್ಕೆಗೂ ಮುನ್ನವೇ ಪ್ರತಿಪಕ್ಷ ಕೆಲಸ ಆರಂಭಿಸಿದ ಬಿಜೆಪಿ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಕಟೀಲ್‌

ರಾಜ್ಯದಲ್ಲಿ ಎರಡೇ ಪಕ್ಷಗಳು ಉಳಿಯುವ ಸಂಭವ ಇದೆ. ಜೆಡಿಎಸ್‌ನ ಶೇ.5 ಮತಗಳು ಕಾಂಗ್ರೆಸ್‌ಗೆ ಹೋಗಿವೆ‌. ಹೀಗಾಗಿ ಜೆಡಿಎಸ್‌ನವರು ಯಾವ ಪಕ್ಷದ ಜತೆಗೆ ಹೋದರೆ ಒಳಿತು ಎಂಬುವುದನ್ನು ಅವರೇ ತೀರ್ಮಾನ ಮಾಡಲಿ. ಜೆಡಿಎಸ್‌ನವರು ನಮ್ಮ ಜತೆ ವಿಲೀನವಾದರೆ ಒಳ್ಳೆಯದು ಎಂದು ಹೇಳಿದರು.

Exit mobile version