ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ (Hampi university) ನೂತನ ಕುಲಪತಿಯಾಗಿ ಡಾ. ವಿಜಯ ತಂಬಂಡ ಪೂಣಚ್ಚ ನೇಮಕಗೊಂಡಿದ್ದಾರೆ.
ಡಾ. ಸ.ಚಿ ರಮೇಶ್ ಅಧಿಕಾರಾವಧಿ ಇಂದಿಗೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಪೂಣಚ್ಚ ಅವರನ್ನು ನೇಮಿಸಲಾಗಿದೆ. ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ವಿಜಯ್ ತಂಬಂಡ ಪೂಣಚ್ಚ, ಈ ಹಿಂದೆ ವಿವಿಯ ಡೀನ್ ಆಗಿ, ಕುಲಸಚಿವರಾಗಿ ಕೆಲಸ ಮಾಡಿದ್ದರು.
ತಂಬಂಡ ವಿಜಯ್ ಪೂಣಚ್ಚ ಮೂಲತಃ ಮಡಿಕೇರಿಯವರು. ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್‌ಫರ್ಡ್ ವಿ.ವಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ಅವರು ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಕುರಿತು ಬರೆದ ‘ರಾಜೇಂದ್ರನಾಮೆ ಮರು ಓದು’ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರ. ಸಮಾಜ ವಿಜ್ಞಾನಗಳ ಪಠ್ಯ ಪುಸ್ತಕಗಳ ಪಠ್ಯ ರಚನೆಯ ಸಮಿತಿ ಅಧ್ಯಕ್ಷ, ೮ನೇ ತರಗತಿಯ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷ, ಚರಿತ್ರೆ ವಿಶ್ವಕೋಶ, ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಸಂಪುಟಗಳು, ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್, ಚರಿತ್ರೆ ಅಧ್ಯಯನಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಕೊಡಗಿಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: Hampi University | ಡಾ.ಮಂಜುನಾಥ್, ಷಡಕ್ಷರಿ, ಕೃಷ್ಣಪ್ಪಗೆ ನಾಡೋಜ ಗೌರವ; ನುಡಿ ಹಬ್ಬದಂದು ಪದವಿ ಪ್ರದಾನ