ಚಳ್ಳಕೆರೆ: ನಾಯಕನಹಟ್ಟಿ ಹೋಬಳಿಯ ಕುದಾಪುರ ಸಮೀಪದ ಡಿಆರ್‌ಡಿಒ (ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ) ಮತ್ತು ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿರುವ ವಿಡಿಯೊ ನಕಲಿ (Fake) ಎಂದು ಡಿಆರ್‌ಡಿಒ ಮೂಲಗಳು ಖಚಿತಪಡಿಸಿವೆ. ಆದರೆ, ಈ ವಿಡಿಯೊ ವೈರಲ್ (Video Viral) ಆಗಿದೆ.
ಸುಮಾರು 9,000 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಡಿಆರ್‌ಡಿಒ ಮತ್ತು ಐಐಎಸ್‌ಸಿ ಕ್ಯಾಂಪಸ್‌ಗಳಲ್ಲಿ ನಾಲ್ಕು ಚಿರತೆಗಳಿವೆ ಎಂದು ಇಲ್ಲಿನ ಸ್ಥಳೀಯ ಕುರಿಗಾಹಿಗಳು ಹಲವು ಬಾರಿ ದೂರಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಲವು ಬಾರಿ ಚಿರತೆಗಳನ್ನು ಸೆರೆ ಹಿಡಿಯಲು ಬೋನ್‌ಗಳನ್ನು ಇಟ್ಟಿದ್ದರು. ಆದರೆ, ಚಿರತೆಗಳು ಮಾತ್ರ ಸೆರೆಯಾಗಿಲ್ಲ.
ಇದನ್ನೂ ಓದಿ: Internal Marks : ಪಿಯುಸಿಯಲ್ಲಿ ಇನ್ನು ಸೈನ್ಸ್ ಮಾತ್ರ ಅಲ್ಲ ಎಲ್ಲ ವಿಷಯಗಳಿಗೂ Internal Marks
ಇನ್ನು ಡಿಆರ್‌ಡಿಒ ಮತ್ತು ಐಐಎಸ್‌ಸಿ ಸಂಸ್ಥೆಗಳು ತಮ್ಮದೇ ಆದ ಭದ್ರತಾ ಗೋಡೆಗಳನ್ನು ನಿರ್ಮಿಸಿಕೊಂಡಿವೆ. ಇಡೀ ಕ್ಯಾಂಪಸ್ ಸುತ್ತಲೂ ಸಾವಿರಾರು ಗಿಡಮರಗಳನ್ನು ಬೆಳೆಸಲಾಗಿದೆ. ಇದರಿಂದ ಹಸರೀಕರಣ ಹೆಚ್ಚಾಗಿ ನೀರು ನೆರಳಿನ ವ್ಯವಸ್ಥೆ ಉತ್ತಮವಾಗಿದೆ, ಹೀಗಾಗಿ ಚಿರತೆಗಳು ಎಲ್ಲಿಯೂ ತೆರಳದೆ ಇಲ್ಲಿಯೇ ನೆಲೆಕಂಡುಕೊಂಡಿರುವ ಸಾಧ್ಯತೆಯೂ ಇದೆ.
ವೈರಲ್ ಆಗಿದ್ದ ಚಿರತೆ ವಿಡಿಯೊ ಇಲ್ಲಿದೆ
ಭಾನುವಾರ ಡಿಆರ್‌ಡಿಒ ಗಸ್ತುಗೋಪುರದ ರಕ್ಷಣಾ ಸಿಬ್ಬಂದಿಯೊಬ್ಬರಿಗೆ ಚಿರತೆಯೊಂದು ಪೊದೆಯಲ್ಲಿ ಕಾಣಿಸಿಕೊಂಡಿದೆ. ಆದರೆ, ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ತುಣುಕು ಡಿಆರ್‌ಡಿಒ ವ್ಯಾಪ್ತಿಯದ್ದಲ್ಲ ಎಂದು ಡಿಆರ್‌ಡಿಒ ಮೂಲಗಳು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: IND vs WI: ಚೊಚ್ಚಲ ಟೆಸ್ಟ್ ಪದಾರ್ಪಣ ನಿರೀಕ್ಷೆಯಲ್ಲಿ ನಾಲ್ವರು ಟೀಮ್ ಇಂಡಿಯಾ ಆಟಗಾರರು; ಯಾರಿಗೆ ಒಲಿಯಲಿದೆ ಲಕ್!
ಈ ಕುರಿತು ವಲಯ ಅರಣ್ಯಾಧಿಕಾರಿ ಡಿ.ಬಹುಗುಣ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿರತೆ ಇರುವ ವಿಡಿಯೊ ದೃಶ್ಯಗಳು ಈ ಪ್ರದೇಶದ್ದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.