ಬೆಂಗಳೂರು: ರಾಜ್ಯದಲ್ಲಿ ಒಟ್ಟು 195 ತಾಲೂಕುಗಳು ಬರಪೀಡಿತವಾಗಿವೆ (195 Taluks Drought hit) ಎಂದು ಸಮೀಕ್ಷೆಯಿಂದ (Survey report) ಸ್ಪಷ್ಟವಾಗಿದೆ. ಈ ವರದಿಯನ್ನು ಮುಖ್ಯಮಂತ್ರಿಗಳಿಗೆ (CM Siddaramaiah) ಸಲ್ಲಿಸಿ ಬರ ಘೋಷಣೆ ಮಾಡುವಂತೆ ಶಿಫಾರಸು ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byregowda) ತಿಳಿಸಿದರು.
ಸಂಪುಟ ಉಪಸಮಿತಿ ಸಭೆ (Cabinet Sub committee Meeting) ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕಳೆದ 10 ವರ್ಷಗಳ ಬಳಿಕ ತೀವ್ರ ಬರ ಎದುರಾಗಿದೆ. ನಾವು ಕೊಟ್ಟಿರುವ ಶಿಫಾರಸುಗಳ ಆಧಾರದಲ್ಲಿ ಮುಖ್ಯಮಂತ್ರಿಗಳು ಬುಧವಾರ ಸಂಜೆಯೊಳಗೆ ಅಧಿಕೃತವಾಗಿ ಬರ ಪೀಡಿತ ತಾಲೂಕುಗಳ ಘೋಷಣೆಗೆ ಸಹಿ ಹಾಕಲಿದ್ದಾರೆ. ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ ಘೋಷಣೆಗೆ ಅಧಿಸೂಚನೆ ಹೊರಡಿಸುತ್ತೇವೆ. ಬಳಿಕ 10 ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.
161 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ
ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಕಂಡು ಬಂದಿದ್ದು 34 ತಾಲೂಕುಗಳಲ್ಲಿ ಸಾಧಾರಣ ಬರ ಬಂದಿದೆ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿಯ ಬಗ್ಗೆ ಕೇಂದ್ರಕ್ಕೆ ವರದಿ ಕೊಡುತ್ತೇವೆ. ಮಳೆ ಕೊರತೆಯಿಂದ ಅನ್ನದಾತರ ಸಂಕಷ್ಟಕ್ಕೆ ಸಿಲುಕಿದ್ದು ಕಳೆದ 10 ವರ್ಷಗಳಲ್ಲೇ ಕಂಡು ಕೇಳರಿಯದ ಬರ ಉತ್ತರ, ದಕ್ಷಿಣದಲ್ಲಿ ಕ್ಷಾಮ ಉಂಟಾಗಿದೆ ಎಂದರು.
ಬರ ಘೋಷಣೆ ಪ್ರಕ್ರಿಯೆ ನಡೆದಿದ್ದು ಹೇಗೆ?
ಮೊದಲು ಬರ ಘೋಷಣೆ ಮಾಡಬೇಕು, ಬಳಿಕ ಪರಿಹಾರ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ ಕೃಷ್ಣ ಬೈರೇಗೌಡ ಅವರು, ನಾವು ಮೊದಲು 113 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಬೆಳೆ ಸಮೀಕ್ಷೆಗೆ ಆದೇಶ ನೀಡಿದ್ದೆವು. ಬಳಿಕ ಇನ್ನೂ 62 ತಾಲೂಕುಗಳಲ್ಲಿ ಬರಕ್ಕೆ ಅರ್ಹ ಎಂಬ ಮಾಹಿತಿ ಬಂದಿತ್ತು. ಸಚಿವ ಸಂಪುಟದಲ್ಲೂ ವಿಸ್ರೃತ ಚರ್ಚೆಯಾಗಿತ್ತು. ಆಗ 62 ತಾಲೂಕುಗಳು ಮಾತ್ರವಲ್ಲ ಇನ್ನೂ ಹೆಚ್ಚಿನ ತಾಲೂಕುಗಳಲ್ಲಿ ಬರ ಸ್ಥಿತಿ ಇದೆ ಎಂದು ಚರ್ಚೆಯಾಗಿತ್ತು. ಹೀಗಾಗಿ ಉಳಿದ 134 ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ಆದೇಶಿಸಿದ್ದೆವು. ಅಂತಿಮವಾಗಿ ಈಗ 195 ತಾಲೂಕುಗಳು ಬರಪೀಡಿತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಪರಿಹಾರ ಕೊಡಬಹುದಾ?
ಈಗ ಎಲ್ಲ ಜಿಲ್ಲೆಗಳಿಂದ ಬೆಳೆ ಸಮೀಕ್ಷೆ ವರದಿ ಬಂದಿದೆ. 161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. 34 ತಾಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ. ಒಟ್ಟು 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಉಳಿದ 40 ತಾಲೂಕುಗಳಲ್ಲಿ ಮಳೆ ಕೊರತೆ ಇದ್ದರೂ ಕೂಡ ತೇವಾಂಶ ಕೊರತೆ ಕಂಡು ಬರುತ್ತಿಲ್ಲ. ತನ್ನ ಮಾರ್ಗಸೂಚಿಗಳ ಪ್ರಕಾರ, ಮಧ್ಯಮ ಬರಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಡಬಹುದು ಅಥವಾ ಇಲ್ಲದೇ ಇರಬಹುದು ಎಂದು ಕೃಷ್ಣ ಬೈರೇಗೌಡರು ಹೇಳಿದರು.
ಇದನ್ನೂ ಓದಿ: Drought Situation: ಉಪಸಮಿತಿ ಸಭೆ ಬಳಿಕ ಬರ ಘೋಷಣೆ ಬಗ್ಗೆ ತೀರ್ಮಾನ ಎಂದ ಸಿದ್ದರಾಮಯ್ಯ, ಮೋಡ ಬಿತ್ತನೆ ಇಲ್ಲ
ಯಾವ ಜಿಲ್ಲೆಯಲ್ಲಿ ಎಷ್ಟು ತಾಲೂಕು ಬರಪೀಡಿತ?
ಬಾಗಲಕೋಟೆ-2, ಬೆಳಗಾವಿ-8, ಬೆ.ಗ್ರಾಮೀಣ-3
ಬೆ.ನಗರ-5, ಚಿಕ್ಕಮಗಳೂರು-5, ಚಿತ್ರದುರ್ಗ-4
ಧಾರವಾಡ-3, ಗದಗ-5, ಹಾಸನ-5, ಕಲಬುರಗಿ-9
ಕೊಡಗು-2, ಕೋಲಾರ-5, ತುಮಕೂರು-5
ಉತ್ತರ ಕನ್ನಡ-9, ವಿಜಯಪುರ-10, ಯಾದಗಿರಿ-6
ದಕ್ಷಿಣ ಕನ್ನಡ-2, ಬೀದರ್-1, ಚಾಮರಾಜನಗರ-4
ದಾವಣಗೆರೆ-3, ಕಲಬುರಗಿ-5, ಕೊಪ್ಪಳ-2, ಮಂಡ್ಯ-5
ರಾಮನಗರ-2, ಉಡುಪಿ-2, ವಿಜಯನಗರದಲ್ಲಿ 4 ತಾಲೂಕು