ತುಮಕೂರು: ಮಧುಗಿರಿ ತಾಲೂಕಿನ ವೀರಾಪುರದ ಜಯಮಂಗಲಿ ನದಿಯಲ್ಲಿ ಈಜಲು ಹೋಗಿದ್ದು, ಈಜು ಬಾರದೇ ಮುಳುಗಿ (Drown in river) ಇಬ್ಬರು ಬಾಲಕಿಯರು ಜಲಸಮಾಧಿಯಾಗಿದ್ದಾರೆ.
ವೀರಾಪುರ ಗ್ರಾಮದ ಬಳಿ ಹರಿಯುವ ಜಯಮಂಗಲಿ ನದಿಗೆ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಈ ಚೆಕ್ ಡ್ಯಾಂನಲ್ಲಿ ಐವರು ಬಾಲಕಿಯರು ಈಜಲು ಹೋಗಿದ್ದರು. ಆದರೆ, ಇಬ್ಬರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದ್ದು, ಅವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
8 ವರ್ಷದ ಬಾಲಕಿ ಪ್ರಿಯಾಂಕಾ, 9 ವರ್ಷದ ಬಿಂದು ಮೃತ ದುರ್ದೈವಿಗಳು. ಮೃತರಿಬ್ಬರೂ ಸಹೋದರಿಯರಾಗಿದ್ದು, ಕುಟುಂಬದವರ ರೋಧನೆ ಮುಗಿಲು ಮುಟ್ಟಿದೆ. ಇದೇ ವೇಳೆ ಉಳಿದ ಮೂವರೂ ನದಿ ನೀರಿನಲ್ಲಿ ಮುಳುಗುತ್ತಿದ್ದರು. ಆಗ ಅಲ್ಲಿಯೇ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಮೂವರನ್ನೂ ರಕ್ಷಣೆ ಮಾಡಿದ್ದಾರೆಂದು ತಿಳಿದುಬಂದಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಆರ್. ವಿ. ದೇಶಪಾಂಡೆ ಜನ್ಮ ದಿನಾಂಕದ ಕುರಿತು ಅನುಮಾನ: ತನಿಖೆಗೆ ಸದನ ಸಮಿತಿ ರಚಿಸಲು ಸಿದ್ದರಾಮಯ್ಯ ಆಗ್ರಹ!