Site icon Vistara News

Drowned in lake: ಈಜು ಬಾರದೆ ಹಳ್ಳದಲ್ಲಿ ಮುಳುಗಿ ಬಾಲಕ ಸಾವು

#image_title

ಗದಗ: ಇಲ್ಲಿನ ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರ ಗ್ರಾಮದಲ್ಲಿ ಬಾಲಕನೊಬ್ಬ ಹಳ್ಳದ ನೀರಿನಲ್ಲಿ ಈಜಲು ತೆರಳಿ ಮುಳುಗಿ ಮೃತಪಟ್ಟಿರುವ (Drowned in lake) ಘಟನೆ ನಡೆದಿದೆ. ಸಲ್ಲುಸಾಬ ಸಯ್ಯದಸಾಬ ಲಂಗೋಟಿ (13) ಮೃತ ಬಾಲಕ.

ಈಜು ಬಾರದ ಸಲ್ಲುಸಾಬ ಸ್ನೇಹಿತರೊಡನೆ ಗ್ರಾಮದ ಹಳ್ಳಕ್ಕೆ ಇಳಿದಿದ್ದಾನೆ. ನೀರಿನ ಹರಿವು ಹೆಚ್ಚಿದ್ದರಿಂದ ದಡ ಸೇರಲು ಆಗದೆ ಮುಳಗಿ ಮೃತಪಟ್ಟಿದ್ದಾನೆ. ಇತ್ತ ಅಲ್ಲೇ ಇದ್ದ ಆತನ ಸ್ನೇಹಿತರು ಭಯಗೊಂಡು ಸ್ಥಳದಲ್ಲೇ ಬಿಟ್ಟು ಬಂದಿದ್ದಾರೆ. ನಂತರ ಬಾಲಕನ ತಂದೆಗೆ ವಿಷಯ ತಿಳಿದಿದ್ದು, ಬಂದು ನೋಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಸ್ಥಳಕ್ಕೆ ಬಾಲಕನ ರಕ್ಷಣೆಗೆ ತಂದೆ ಧಾವಿಸಿದರೂ ಅದಾಗಲೇ ಬಾಲಕ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ. ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ. ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಚಿತ್ರದುರ್ಗ, ಉತ್ತರಕನ್ನಡದಲ್ಲೂ ದುರ್ಘಟನೆ

ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ಈಜಲು ಹೋಗಿದ್ದ ಐವರಲ್ಲಿ ಮೂವರು ನೀರು ಪಾಲಾಗಿರುವ (Drowned in lake) ದುರ್ಘಟನೆ ಮಂಗಳವಾರ ನಡೆದಿತ್ತು. ಸಂಜಯ್ (18) ಎಚ್.ಡಿ ಪುರ, ಗೀರೀಶ್ (18), ನಂದನಹೊಸೂರು ಗೊಲ್ಲರಹಟ್ಟಿ, ಮನು (18), ಕಣಿವೆಜೋಗಿಹಳ್ಳಿ ಮೃತ ದುರ್ದೈವಿಗಳು.

ಯುವಕರು ಪಿಯುಸಿ ಪರೀಕ್ಷೆಯನ್ನು ಮುಗಿಸಿ ತಮ್ಮ ಊರಿಗೆ ಬಂದಿದ್ದರು. ರಜೆ ಇದ್ದ ಕಾರಣಕ್ಕೆ ಸ್ನೇಹಿತರೊಂದಿಗೆ ಗುಂಡಿ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಕೆರೆಯಲ್ಲಿ ತುಂಬಾ ಆಳ ಇರುವುದು ತಿಳಿಯದೇ ಮುಂದಕ್ಕೆ ಈಜಲು ಹೋಗಿದ್ದು, ತೀರಾ ಬಳಲಿದ್ದಾರೆ. ಕಾರಣ ದಡ ಸೇರಲು ಸಾಧ್ಯವಾಗದೇ ಐವರಲ್ಲಿ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ; ಚಾಮರಾಜನಗರ, ಬೆಂಗಳೂರಲ್ಲಿ ತಂಪೆರೆದ ವರುಣ

ಜಲಾಶಯದಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರು ಪಾಲು

ಮುಂಡಗೋಡ: ಜಲಾಶಯದಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬರು ನೀರಲ್ಲಿ ಮುಳುಗಿ (Drowned in Water) ಮೃತಪಟ್ಟ ಘಟನೆ ಮಂಗಳವಾರ (ಮಾ.28) ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಜಲಾಶಯದಲ್ಲಿ ಜರುಗಿತ್ತು. ನ್ಯಾಸರ್ಗಿ ಗ್ರಾಮದ ಲಕ್ಷ್ಮಣ ಭೀಮಣ್ಣ ಭೋವಿ (44) ಮೃತರು. ಮಂಗಳವಾರ ಮಧ್ಯಾಹ್ನ ಜಲಾಶಯಕ್ಕೆ ಈಜಲು ಇಳಿದಾಗ ಸುಸ್ತಾಗಿದ್ದರಿಂದ ನೀರಿನಲ್ಲಿ ಮುಳುಗಿದ್ದರು.

Exit mobile version