Site icon Vistara News

Drowned in Lake : ನಶೆ ಏರಿಸಿಕೊಂಡು ಈಜಲು ಕೆರೆಗಿಳಿದ ಗೆಳೆಯರಿಬ್ಬರು ಸಾವು

Drowned in river two person dead

ಬೆಂಗಳೂರು: ಬರ್ತ್ ಡೇ ಪಾರ್ಟಿ (Birthday Party) ಮುಗಿಸಿ ಕೆರೆಯಲ್ಲಿ ಈಜಲು ತೆರಳಿದ್ದ (Drowned in lake) ಸ್ನೇಹಿತರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಅಭಿಷೇಕ್‌ ಹಾಗೂ ಸೋಲೊಮನ್‌ ಮೃತ ದುರ್ದೈವಿಗಳು.

ಸೋಲೊಮನ್ ಹುಟ್ಟುಹಬ್ಬ ಹಿನ್ನೆಲೆ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದ. ಪಾರ್ಟಿಯಲ್ಲಿ ಕುಡಿದು ಮೋಜು ಮಸ್ತಿಯನ್ನು ಮಾಡಿದರು. ಸ್ನೇಹಿತರೆಲ್ಲ ಹೋದ ನಂತರ ಅಭಿಷೇಕ್, ಸೊಲೋಮನ್ ಚಿಕ್ಕಕಮ್ಮನಹಳ್ಳಿಯ ಕೆರೆಗೆ ಈಜಲು ತೆರಳಿದ್ದರು. ಮದ್ಯದ ನಶೆಯಲ್ಲಿ ಕೆರೆಗೆ ಇಳಿದಿದ್ದರಿಂದ ಈಜಲು ಆಗದೆ ಇಬ್ಬರು ಮೃತಪಟ್ಟಿದ್ದಾರೆ.

ಮೃತ ದುರ್ದೈವಿಗಳು

ಸೋಲೊಮನ್‌ ಮಾರತ್ ಹಳ್ಳಿಯ ಕಾರು ಮಾರಾಟ ಕಂಪನಿಯಲ್ಲಿ ಉದ್ಯೋಗಿ ಆಗಿದ್ದರೆ, ಅಭಿಷೇಕ್ ಜೆ.ಪಿ.ನಗರದ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಮದುವೆ ತಯಾರಿಯಲ್ಲಿದ್ದವನು ಮಸಣ ಸೇರಿದ

ಹುಟ್ಟುಹಬ್ಬದಂದೆ ಸಾವಿನ ಕದತಟ್ಟಿರುವ ಸೋಲೊಮನ್‌ ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದರು ಎನ್ನಲಾಗಿದೆ. ಇವರಿಬ್ಬರ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಬ್ಬರು ಶವವಾಗಿ ಪತ್ತೆ ಆಗಿದ್ದು, ಮೃತದೇಹಗಳನ್ನು ಹೊರತೆಗೆದಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಕೈ ಕೊಟ್ಟ ಆರೋಗ್ಯ; ಶಿವಮೊಗ್ಗದಲ್ಲಿ ದಿನಗೂಲಿ ನೌಕರ ನೇಣಿಗೆ ಶರಣು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ದೇವಾಲಯದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಗಣಪತಿ ತಾವರೆಹಳ್ಳಿ (40) ಮೃತ ದುರ್ದೈವಿ.

ಗಣಪತಿ ಶ್ರೀ ರೇಣುಕಾಂಬಾ ದೇವಾಲಯದ ದಿನಗೂಲಿ ನೌಕರನಾಗಿದ್ದರು. ಕೆಲ‌ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ಮನೆಯಲ್ಲಿ ಯಾರೂ‌ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

ನೇಣಿಗೆ ಶರಣಾ ಗಣಪತಿ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೊರಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೊರಬ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Chandrayaan 3 : ಇವನು ವಿಕ್ರಮ್‌, ಇವಳು ಪ್ರಜ್ಞಾನ್‌; ನವಜಾತ ಶಿಶುಗಳಿಗೆ ಈ ಹೆಸರಿಟ್ಟು ಸಂಭ್ರಮಿಸಿದ ಯಾದಗಿರಿ ಕುಟುಂಬ!

ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಲ್ಲಿ ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಹೇಮಂತ್ ಕುಮಾರ್ (16) ಮೃತ ದುರ್ದೈವಿ.

ಸ್ಥಳಕ್ಕಾಗಮಿಸಿರುವ ಪೊಲೀಸರಿಂದ ಪರಿಶೀಲನೆ

ಹಂದನಕೆರೆ ಹೋಬಳಿಯ ಗೋಪಾಲಪುರದ ನಿವಾಸಿಯಾಗಿರುವ ಹೇಮಂತ್ ಕುಮಾರ್ . ಎಸ್‌ಎಸ್‌ಎಲ್‌ಸಿ ಓದುತ್ತಿದ್ದ. ಕ್ರೀಡಾಕೂಟವಿದೆ ಎಂದು ಮೂರು ದಿನದ ಹಿಂದೆ ಮನೆಯಿಂದ‌ ಹೋಗಿದ್ದ ಹೇಮಂತ್ ಕುಮಾರ್, ಬಳಿಕ ಮನೆಗೆ ವಾಪಾಸ್ ಬಂದಿರಲಿಲ್ಲ. ಮಗನಿಗಾಗಿ ಪೋಷಕರು ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಆದರೆ ಶನಿವಾರ ಹುಳಿಯಾರು ಕೆರೆ ಅಂಗಳದಲ್ಲಿ ಶವ ಪತ್ತೆಯಾಗಿದ್ದಾನೆ.

ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದು ಆಕಸ್ಮಿಕ ಸಾವೋ ಅಥವಾ ಯಾರಾದರೂ ಹತ್ಯೆ ಮಾಡಿದ್ದರೋ ಎಂಬುದರ ಕುರಿತು ಹುಳಿಯಾರು ಪೊಲೀಸರಿಂದ ತನಿಖೆ ಮುಂದುವರಿದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version