Site icon Vistara News

Drowned in River : ಕೆರೆಯಲ್ಲಿ ಈಜಲು ಹೋದ ಬಾಲಕ ನೀರುಪಾಲು

Dharshan Drowned in River

ರಾಮನಗರ : ಕನಕಪುರ ತಾಲೂಕಿನ ಹಲಸೂರು ಗ್ರಾಮದ ಚೆನ್ನೇಗೌಡನ ಕೆರೆಯಲ್ಲಿ ಈಜಲು ಹೋಗಿ ಬಾಲಕ ಮೃತಪಟ್ಟಿರುವ (Drowned in River) ಘಟನೆ ನಡೆದಿದೆ. ದರ್ಶನ್ (12) ಮೃತ ದುರ್ದೈವಿ.

ದರ್ಶನ ಹಲಸೂರಿನ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮೂಲತಃ ಮಳವಳ್ಳಿಯವನಾಗಿದ್ದ ದರ್ಶನ ಅಜ್ಜಿ ಮನೆಯಲ್ಲಿ ವಾಸವಿದ್ದ. ಕೆರೆಯಲ್ಲಿ ಈಜಲು ಹೋಗಿದ್ದು, ಈ ವೇಳೆ ನೀರಿನಿಂದ ಹೊರಬರಲು ಆಗದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ದರ್ಶನ ಕಾಣದೆ ಇದ್ದಾಗ ಕುಟುಂಬಸ್ಥರು ಹುಡುಕಾಡಿದಾಗ ಕೆರೆ ಬಳಿ ಆತನ ಬಟ್ಟೆ, ಚಪ್ಪಲಿ ಇರುವುದು ಕಂಡಿದೆ. ಕೂಡಲೇ ಸ್ಥಳೀಯರು ತೆಪ್ಪಾದ ಸಹಾಯದಿಂದ ಕೆರೆಯಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಕೆರೆಯಲ್ಲಿದ್ದ ಮೃತದೇಹವನ್ನು ಹೊರೆ ಎಳೆದುಕೊಂಡು ಬಂದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

sameer and shivapradh

ಸಮುದ್ರದಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ

ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣ ಕಡಲತೀರದಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ ಮಾಡಲಾಗಿದೆ. ಬಳ್ಳಾರಿ ಮೂಲದ ಸಮೀರ (11) ರಕ್ಷಣೆಗೊಳಗಾದ ಬಾಲಕನಾಗಿದ್ದಾನೆ. ಕುಟುಂಬದೊಂದಿಗೆ ಗೋಕರ್ಣಕ್ಕೆ ಬಂದಿದ್ದ. ದೇವರ ದರ್ಶನಕ್ಕೂ ಮುನ್ನ ಸಮುದ್ರ ಸ್ನಾನ ಮಾಡುವಾಗ ಅಲೆಗೆ ಸಿಲುಕಿದ್ದ. ಅಲೆಗೆ ಸಿಲುಕಿದ್ದ ಬಾಲಕನನ್ನು ಗಮನಿಸಿ ಶಿವಪ್ರಸಾದ್ ಅಂಬಿಗ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Belgavi News : ನಿನ್‌ ಹತ್ರ ಸಾಲ ಮಾಡಲ್ಲ ಎಂದವಳಿಗೆ ಚಾಕು ಹಾಕಿ, ವಿಷ ಕುಡಿದ!

ಅಟ್ಟಾಡಿಸಿಕೊಂಡು ಬಂದು ಕಟಿಂಗ್‌ ಶಾಪ್‌ನೊಳಗೆ ಕತ್ತರಿಸಿ ಹಾಕಿದರು!

ಬೆಂಗಳೂರು: ಯುವಕನೊಬ್ಬನನ್ನು ಅಟ್ಟಾಡಿಸಿಕೊಂಡು ಬಂದ ಹಂತಕರು ಕಟ್ಟಿಂಗ್ ಶಾಪ್‌ನೊಳಗೆ ಆತನನ್ನು ಕೊಚ್ಚಿ ಕೊಲೆಗೈದ ಘಟನೆ (Murder Case) ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಮದನ್ (32) ಹತ್ಯೆಯಾದ ಯುವಕ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. ಹಲವು ದಿನಗಳ ಹಿಂದೆ ಹೃತ್ವಿಕ್ ಎಂಬಾತನ ಮೇಲೆ ಈ ಮದನ್‌ ಹಲ್ಲೆ ಮಾಡಿದ್ದ. ಹಲ್ಲೆ ನಡೆಸಿದ ಬಳಿಕ ಚೆನ್ನೈನಲ್ಲಿ ತಲೆ ಮರೆಸಿಕೊಂಡಿದ್ದ. ಇದರಿಂದ ಮದನ್‌ ಮೇಲೆ ದ್ವೇಷವಿಟ್ಟುಕೊಂಡಿದ್ದ ಎದುರಾಳಿಗಳು ಆತನಿಗಾಗಿ ಹಲವು ದಿನಗಳಿಂದ ಕಾದುಕುಳಿತಿದ್ದರು. 4-5 ಜನರ ತಂಡ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅಟ್ಟಾಡಿಸಿದೆ.

ಇಂದು ಮದನ್ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಇರುವ ವಿಚಾರ ತಿಳಿದು ಮಾರಕಾಸ್ತ್ರಗಳೊಂದಿಗೆ ಬಂದ ಹಂತಕರು ಮದನ್‌ನನ್ನು ಮುಖ್ಯ ರಸ್ತೆಯಲ್ಲಿ ತಡೆದು ಅಟ್ಯಾಕ್‌ ನಡೆಸಿದ್ದಾರೆ. ಹಂತಕರ ಕೈಯಿಂದ ತಪ್ಪಿಸಿಕೊಂಡು ಮದನ್ ಓಡಲು ಯತ್ನಿಸಿದ ವೇಳೆ ಕಿಲೋಮೀಟರ್‌ಗಳಷ್ಟು ದೂರ ಅಟ್ಟಾಡಿಸಿಕೊಂಡು ಹೋಗಿದ್ದಾರೆ. ರಾಮಮೂರ್ತಿನಗರದ ಮುಕುಟಮ್ಮ ದೇವಸ್ಥಾನ ಬಳಿ ಈ ಆರೋಪಿಗಳಿಂದ ತಪ್ಪಿಸಿಕೊಂಡ ಮದನ್ ಒಂದು ಕಟ್ಟಿಂಗ್ ಶಾಪ್‌ ಒಳನುಗ್ಗಿದ್ದಾನೆ.

ಕೂಡಲೇ ಹಿಂಬದಿಯಿಂದ ಬಂದ ಆರೋಪಿಗಳು ಅಂಗಡಿ ಬಾಗಿಲು ಮುಚ್ಚಿ ಮನಸ್ಸೋ ಇಚ್ಚೆ ಮದನನನ್ನು ಕೊಚ್ಚಿಹಾಕಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾದ ಮದನ್ ಪ್ರಾಣ ಬಿಟ್ಟಿದ್ದಾನೆ. ಸ್ಥಳಕ್ಕೆ ‌ಬಂದ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ನಡುಬೀದಿಯಲ್ಲಿ ಸಾರ್ವಜನಿಕರ ಮುಂದೆ ನಡೆದ ಈ ದುಷ್ಕೃತ್ಯದಿಂದ ಬಾಣಸವಾಡಿ ಜನತೆ ಭಯಭೀತರಾಗಿದ್ದಾರೆ. ರೌಡಿಗಳು ಮಾರಕಾಯುಧ ಝಳಪಿಸುತ್ತ ಓಡಾಡುವುದು, ಎದುರಾಳಿಗಳನ್ನು ಕೊಚ್ಚಿ ಕೊಲ್ಲುವುದು ಸಾಮಾನ್ಯ ಎಂಬಂತಾಗಿದ್ದು, ಇವರನ್ನು ಮಟ್ಟ ಹಾಕಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version