ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದಲ್ಲಿರುವ ತುಂಗಾ ನದಿಗೆ ಇಳಿದಿದ್ದ (Drowned in river) ಇಬ್ಬರು ಉಪನ್ಯಾಸಕರು ನೀರುಪಾಲಾಗಿದ್ದಾರೆ. ಪುನೀತ್(38), ಬಾಲಾಜಿ(36) ನೀರುಪಾಲಾದ ಉಪನ್ಯಾಸಕರು.
ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಇವರು ತೀರ್ಥಮತ್ತೂರು ಗ್ರಾಮಕ್ಕೆ ಬಂದಿದ್ದರು. ತೀರ್ಥಮತ್ತೂರು ಮಠದ ಬಳಿಯ ಹೋಮ್ ಸ್ಟೇನಲ್ಲಿ ವಾಸ್ತವ್ಯ ಇದ್ದರು. ನದಿಗೆ ಇಳಿದು ಈಜಾಡಲು ಹೋದವರು ಹೊರ ಬರಲು ಆಗದೆ ಮುಳುಗಿ (ಜೂ.18) ಮೃತಪಟ್ಟಿದ್ದಾರೆ. ಸದ್ಯ ಒಬ್ಬರ ಮೃತದೇಹ ಪತ್ತೆ ಆಗಿದ್ದು, ಇನ್ನೊಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ಕೊಪ್ಪದ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಶಿವಮೊಗ್ಗದ ಶಿಕಾರಿಪುರ ತಾಲೂಕಿನಲ್ಲಿ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕೊಪ್ಪದ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಗಾಂಧಿನಗರ ಗ್ರಾಮದ ಮನ್ಸೂರ್ ಸಾಬ್ ಬಿನ್ ಅಲಿ ಚಂದ್ ಸಾಬ್ ಮೃತದುರ್ದೈವಿ. ಮೃತದೇಹ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಬಿ ವೈ ವಿಜಯೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪರಿಹಾರ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ.
ಕೆರೆಯಲ್ಲಿ ಈಜಾಡಲು ಹೋದ ನಾಲ್ವರು ನೀರುಪಾಲು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅಮಾನಿಕೆರೆಯಲ್ಲಿ ಮೂವರು ಬಾಲಕರು (Drowned in river) ನೀರುಪಾಲಾಗಿದ್ದಾರೆ. ಕಾರ್ತಿಕ್ (16), ಧನುಷ್ (15), ಗುರುಪ್ರಸಾದ್ (6) ಮೃತ ದುರ್ದೈವಿಗಳು.
ಶನಿವಾರ ಮಧ್ಯಾಹ್ನ ಶಾಲೆ ಮುಗಿದ ಬಳಿಕ ಮೂವರು ಬಾಲಕರು ನಾಪತ್ತೆ ಆಗಿದ್ದರು. ರಾತ್ರಿಯೆಲ್ಲ ಪೋಷಕರು ಬಾಲಕರಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಬಾಲಕರ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಕೆರೆಯಲ್ಲಿ ಬಾಲಕನೊಬ್ಬನ ಮೃತದೇಹ ಪತ್ತೆಯಾಗಿತ್ತು.
ಕೂಡಲೆ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಶೋಧ ಕಾರ್ಯ ನಡೆಸಿದಾಗ ಮತ್ತಿಬ್ಬರು ಬಾಲಕರ ಮೃತದೇಹವು ಪತ್ತೆಯಾಗಿದೆ. ನೀರಿನಲ್ಲಿ ಆಟವಾಡಲು ಹೋಗಿ ಮೂವರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಮೂವರ ಮೃತ ದೇಹಗಳನ್ನು ಹೊರ ತೆಗೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Murder Case: ಮನೆಗೆ ನುಗ್ಗಿದ ಹಂತಕರು ಬಾಯಿಗೆ ಬಟ್ಟೆ ತುರುಕಿ ಮಹಿಳೆಯ ಹತ್ಯೆ!
ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯದಲ್ಲಿ ಈಜಲು ಆಗದೇ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಹಮ್ಮದ್ ಯಾಸೀನ್ ಮೃತ ದುರ್ದೈವಿ. ವೀಕೆಂಡ್ ಕಾರಣಕ್ಕೆ ಮಹಮ್ಮದ್ ಯಾಸೀನ್ ತನ್ನ ಹತ್ತು ಜನ ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದ.
ಬೆಂಗಳೂರಿನ ಶ್ಯಾಂಪುರ ನಿವಾಸಿಯಾದ ಮಹಮ್ಮದ್ ಯಾಸೀನ್ ನೀರಿನಲ್ಲಿ ಈಜಾಡುತ್ತಿದ್ದಾಗ, ಹೊರ ಬರಲು ಆಗದೆ ಸ್ನೇಹಿತರ ಕಣ್ಣೆದುರೇ ಮುಳುಗಿದ್ದಾನೆ. ಕೂಡಲೇ ಆತನನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಹಮ್ಮದ್ ಯಾಸೀನ್ ಉಸಿರು ಚೆಲ್ಲಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ