ಶಿವಮೊಗ್ಗ: ಜಾನುವಾರು ಮೇಯಿಸಲು ತೆರಳಿದ್ದ ಬಾಲಕ, ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ (Drowns in Farm Pond) ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು-ತಲಕಾಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಶಾಲೆ ರಜೆ ಇರುವ ಹಿನ್ನೆಲೆ ಜಾನುವಾರು ಮೇಯಿಸಲು ತೆರಳಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಕೊನೆಯುಸಿರೆಳೆದಿದ್ದಾನೆ.
ಸಾತ್ವಿಕ್ (14) ಮೃತ ಬಾಲಕ. ಶಾಲೆ ರಜೆ ಇದ್ದ ಹಿನ್ನೆಲೆಯಲ್ಲಿ ಜಾನುವಾರು ಮೇಯಿಸಲು ಸಾತ್ವಿಕ್ ತೆರಳಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಬಾಲಕನ ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Snake Bite : ಮುಳ್ಳು ಚುಚ್ಚಿದೆ ಎಂದು ನಿದ್ರೆಗೆ ಜಾರಿದವನ ಮೈ ಸೇರಿತು ಹಾವಿನ ವಿಷ! ಬೆಳಗಾಗುವಷ್ಟರಲ್ಲಿ ಮೃತ್ಯು
ಬರ್ತ್ ಡೇ ಆಚರಣೆ ವಿಚಾರಕ್ಕೆ ಕಿರಿಕ್; ಇಬ್ಬರು ಯುವಕರಿಗೆ ಚಾಕು ಇರಿತ
ಶಿವಮೊಗ್ಗ: ಬರ್ತ್ ಡೇ ಆಚರಣೆ ವಿಚಾರಕ್ಕೆ ಯುವಕರ ಮಧ್ಯೆ ಕಿರಿಕ್ ನಡೆದು, ಇಬ್ಬರಿಗೆ ಚಾಕು ಇರಿದಿರುವುದು ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ ನಡೆದಿದೆ. ಹುಟ್ಟು ಹಬ್ಬ ಆಚರಿಸಿಕೊಳ್ಳುವಾಗ ಪಟಾಕಿ ಹೊಡೆಯುವುದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆದಿದೆ.
ನಿರಂಜನ್ ಹಾಗೂ ಗೌತಮ್ ಗಾಯಾಳುಗಳು. ಅಭಿ ಅಲಿಯಾಸ್ ಅಭಿಷೇಕ್ ಆರೋಪಿಯಾಗಿದ್ದಾನೆ. ಹುಟ್ಟು ಹಬ್ಬ ಆಚರಿಸಿಕೊಳ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಯುವಕರ ಮಧ್ಯೆ ಗಲಾಟೆ ಶುರುವಾಗಿ. ಈ ವೇಳೆ ನಿರಂಜನ್ ಹಾಗೂ ಗಲಾಟೆ ಬಿಡಿಸಲು ಬಂದ ಗೌತಮ್‌ಗೆ ಆರೋಪಿ ಅಭಿ ಚಾಕು ಇರಿದಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಪ್ರಕರಣ ನಡೆದಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೆರೆಯಲ್ಲಿ ಈಜಲು ಹೋದ ಬಾಲಕ ಸಾವು
ಚಿಕ್ಕಮಗಳೂರು/ಗದಗ: ಕೆರೆಯಲ್ಲಿ ಈಜಲು ಹೋದ (Drowned in water) ಬಾಲಕನೊರ್ವ ಮೃತಪಟ್ಟಿದ್ದಾನೆ. ಶಶಾಂಕ್ ಮೃತ ದುರ್ದೈವಿ. ಚಿಕ್ಕಮಗಳೂರು ನಗರದ ಕೋಟೆ ಕೆರೆಯಲ್ಲಿ ಘಟನೆ (Accident News) ನಡೆದಿದೆ.
ಚಿಕ್ಕಮಗಳೂರು ನಗರದ ಗಾಂಧಿನಗರ ಬಡಾವಣೆಯ ಶಶಾಂಕ್ 8ನೇ ತರಗತಿಯಲ್ಲಿ ಓದುತ್ತಿದ್ದ. ತನ್ನ ನಾಲ್ವರು ಗೆಳೆಯರೊಂದಿಗೆ ಈಜಲು ಕೆರೆಗೆ ಬಂದಿದ್ದ. ಈಜಲು ಜಿಗಿಯಲು ಹೋದಾಗ ಕೆರೆಯಲ್ಲಿ ಕಾಲು ಹೂತುಕೊಂಡಿದೆ. ಕೆರೆಯಿಂದ ಮೇಲೆ ಬಾರಲು ಆಗದೆ ಶಶಾಂಕ್ (13) ದುರ್ಮರಣ ಹೊಂದಿದ್ದಾನೆ.
ಉಳಿದ ಬಾಲಕರು ಪಾಯದಿಂದ ಪಾರಾಗಿದ್ದು, ಕೂಡಲೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಕೆರೆಯಿಂದ ವಿದ್ಯಾರ್ಥಿ ಶವವನ್ನು ಮೇಲೆತ್ತಿದ್ದಾರೆ. ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident : ಬೈಕ್-ಕ್ಯಾಂಟರ್ ಡಿಕ್ಕಿಗೆ ಯುವತಿ ನಾಲಿಗೆ ಕಟ್! ಸವಾರ ಸ್ಪಾಟ್ ಡೆತ್
ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ರೈತರ ದುರ್ಮರಣ
ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ರೈತರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಬಳಿ ಘಟನೆ ನಡೆದಿದೆ.
ಬಿತ್ತನೆ ಬೀಜ ಖರೀದಿ ಮಾಡಿ ಬೈಕ್‌ನಲ್ಲಿ ಊರಿಗೆ ಹೊರಟ್ಟಿದ್ದಾಗ ಅಪಘಾತ ಸಂಭವಿಸಿದೆ. ಸಾರಿಗೆ ಬಸ್ ಕೊಪ್ಪಳದಿಂದ ಗದಗ ಕಡೆಗೆ ಬರುತ್ತಿತ್ತು. ಮುಂಡರಗಿ ಕಡೆಯಿಂದ ಬೈಕ್ ಸವಾರರು ಹಳ್ಳಿಗುಡಿಗೆ ಹೊರಟ್ಟಿದ್ದರು. ಹುಬ್ಬಳ್ಳಿ-ವಿಜಯನಗರ ಹೆದ್ದಾರಿ ಕ್ರಾಸಿಂಗ್ ಮಾಡಿ ಹಳ್ಳಿಗುಡಿಗೆ ಹೊರಟ್ಟಿದ್ದಾಗ ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಡಿಕ್ಕಿ ರಭಸಕ್ಕೆ ಬೈಕ್ ಸಮೇತ ಬಸ್‌ನಡಿ ಸಿಲುಕಿದ ಹಳ್ಳಿಗುಡಿ ಗ್ರಾಮದ ರೈತ ಪರಸಪ್ಪ ಜೋಗಿನ ಹಾಗೂ ಪೇಠಾಲೂರ ಗ್ರಾಮದ ಮಾರುತಿ ಯಾಟಿ ಮೃತಪಟ್ಟಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.