ಬೆಂಗಳೂರು: ರಾಜ್ಯ ಪೊಲೀಸರು ಅದೆಷ್ಟು ಅಲರ್ಟ್ ಆಗಿದ್ದರೂ ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಲು ಆಗುತ್ತಿಲ್ಲ. ಡ್ರಗ್ಸ್ ಪೆಡ್ಲರ್‌ಗಳು (Drug peddler) ಹೊಸ ಹೊಸ ಮಾರ್ಗಗಳ ಮೂಲಕ ಮಾದಕ ವಸ್ತುಗಳನ್ನು ಮಾರಾಟ, ಸಾಗಣೆ ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ ಕೊರಿಯರ್ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರಿಗೆ ಅನುಮಾನ ಬಾರದಿರಲು ಡ್ರಗ್ಸ್ ಪೆಡ್ಲರ್ ಜಾಲವು ಮಕ್ಕಳ ಆಟಿಕೆ ವಸ್ತುಗಳನ್ನು ಬಳಸಲು ಮುಂದಾಗಿದೆ. ಇದಕ್ಕಾಗಿ “ಟಾಕಿಂಗ್ ಟಾಮ್” ಗೊಂಬೆಗಳನ್ನು ಬಳಸಿಕೊಂಡಿದ್ದು, ಅದರೊಳಗೆ ಎಂಡಿಎಂಎ ಡ್ರಗ್ಸ್ ಇಟ್ಟು, ಗಿಫ್ಟ್ ರೀತಿ ಪ್ಯಾಕ್ ಮಾಡಿ ಕೊರಿಯರ್ ಮೂಲಕ ಮಾರಾಟ ಮಾಡಲು ಮುಂದಾಗಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ 15 ಲಕ್ಷ ರೂ. ಮೌಲ್ಯದ 138 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡ್ರಗ್ಸ್ ಸಾಗಣೆ ಮಾಡಲು ಹೊಸ ಹೊಸ ದಾರಿಯನ್ನು ಕಂಡುಕೊಳ್ಳುತ್ತಿರುವ ಹೊತ್ತಿನಲ್ಲೇ ಈ ಪ್ಲ್ಯಾನ್ ಮಾಡಿದ್ದ ಪವೀಶ್, ಅಭಿಜಿತ್, ಶರ್ಪುದ್ದೀನ್ ಎಂಬುವವರನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Wasim Akram | ಕ್ರಿಕೆಟ್ ವೃತ್ತಿ ಬದುಕಿನ ಬಳಿಕ ಡ್ರಗ್ಸ್ ವ್ಯಸನಿಯಾಗಿದ್ದೆ; ವಾಸಿಂ ಅಕ್ರಮ್